Advertisement

ಮೊಗದ ರೂಪ ಕೊಡಿ, 90 ಲಕ್ಷ ಎಣಿಸಿ!

10:44 PM Oct 27, 2019 | sudhir |

ಹೊಸದಿಲ್ಲಿ: ನಿಮಗೆ ಲಕ್ಷಾಂತರ ರೂ. ದುಡ್ಡು ಬೇಕಾ?, ಬೇರೇನೂ ಮಾಡಬೇಕಿಲ್ಲ, ನಿಮ್ಮ ಮೊಗದ ರೂಪವನ್ನು ಕೊಟ್ಟರೆ ಸಾಕು ಲಕ್ಷಗಟ್ಟಲೆ ಹಣ ಸಿಗುತ್ತೆ. ಅಷ್ಟೇ ಅಲ್ಲ ಮುಂದಿನ ಪೀಳಿಗೆಗಳಿಗೂ ನಿಮ್ಮ ಮೊಗದ ನೆನಪು ಶಾಶ್ವತವಾಗಿ ಇರಲಿದೆ!

Advertisement

ಅದು ಹೇಗೆ ಎಂದು ಹುಬ್ಬೇರಿಸಬೇಡಿ. ರೊಬೋಟಿಕ್‌ ತಂತ್ರಜ್ಞಾನ ಸಂಸ್ಥೆಯೊಂದು ಇಂತಹದ್ದೊಂದು ಆಫ‌ರ್‌ ನೀಡಿದೆ. ಜಿಯೋಮಿಕ್‌ ಎಂಬ ಕಂಪೆನಿಯೊಂದು ಮಾನವನ ನಗುಮುಖದ ಪಡಿಯಚ್ಚನ್ನು ರೊಬೋಟ್‌ಗಳಿಗೆ ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಮೊಗವನ್ನು ಕೊಟ್ಟರೆ 90 ಲಕ್ಷ ರೂ. ಸಿಗಲಿದೆ. ಇಂತಹ ಮುಖಗಳನ್ನು ಮರುಸೃಷ್ಟಿ ಮಾಡಿ ಮುಂದೆ ತಯಾರಾಗುವ ರೊಬೋಟ್‌ಗಳಿಗೆ ಆ ಕಂಪನಿಯು ಅಳವಡಿಸಲಿದೆ. ವಿಶ್ವಾದ್ಯಂತ ಮಾನವನ ಮುಖವನ್ನು ಹೋಲುವ ಸಹಸ್ರಾರು ಇಂತಹ ರೊಬೋಟ್‌ಗಳನ್ನು ಸೃಷ್ಟಿಸಲಿದೆ.
ಒಮ್ಮೆ ಮುಖದ ಹಕ್ಕು ಪಡೆದರೆ ಇದು ಜೀವನಪರ್ಯಂತ ಅನ್ವಯ ಆಗಲಿದೆ. ಇಂತಹ ಮೊಗಗಳಿಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಜಿಯೋಮಿಕ್‌ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next