Advertisement

ಹೊಸದುರ್ಗಕ್ಕೆ 10 ಟಿಎಂಸಿ ನೀರು ಕೊಡಿ

09:06 AM Jun 15, 2020 | Team Udayavani |

ಹೊಸದುರ್ಗ: ವಾಣಿವಿಲಾಸ ಸಾಗರದ ನೀರು ನಿಂತಿರುವ ಸ್ಥಳ ಹೊಸದುರ್ಗ ಭೂಪ್ರದೇಶಕ್ಕೆ ಸೇರಿದ್ದು ಬಹಳಷ್ಟು ಜಮೀನು ಮುಳುಗಡೆ ಪ್ರದೇಶಕ್ಕೆ ಹೋಗಿರುವುದರಿಂದ ವಿವಿ ಸಾಗರದ 30 ಟಿಎಂಸಿ ನೀರಿನಲ್ಲಿ 10 ಟಿಎಂಸಿ ನೀರು ಹೊಸದುರ್ಗಕ್ಕೆ ಮೀಸಲಿಡಬೇಕು ಎಂದು ಶಾಸಕ ಗೂಳಿಹಟ್ಟಿ ಡಿ ಶೇಖರ್‌ ಮುಖ್ಯ ಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.

Advertisement

ಹೊಸದುರ್ಗ ಪಟ್ಟಣದ ಬಹುತೇಕ ಭೂಪ್ರದೇಶ ಸೇರಿದಂತೆ, ಅಣೆಕಟ್ಟು ನಿರ್ಮಾಣಕ್ಕಾಗಿ ಸ್ಥಳಾಂತರ ಮಾಡಿರುವ ಹೊಸದುರ್ಗ ಜನತೆಗೆ ವಿವಿ ಸಾಗರದ ಹಿನ್ನೀರಿನ ಉಪಯೋಗವೇ ಆಗುತ್ತಿಲ್ಲ ಎಂದ ಅವರು, ವಿವಿ ಸಾಗರದ 30 ಟಿಎಂಸಿ ನೀರಿನಲ್ಲಿ 10 ಟಿಎಂಸಿ ನೀರನ್ನು ಮೀಸಲಿಡುವ ಮೂಲಕ ಹೊಸದುರ್ಗ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದರು.

ಹೊಸದುರ್ಗ ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬಹಳಷ್ಟು ಕಡೆ ಹಳ್ಳದ ಹರಿಯುವಿಕೆಯಿಂದ ಉತ್ತಮ ಮಣ್ಣು ಕೊರಕಲು ಉಂಟಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ಬರದ ನಾಡಾದ ಹೊಸದುರ್ಗ ತಾಲೂಕಿಗೆ 10 ಟಿಎಂಸಿ ನೀರು ಹಂಚಿಕೆ ಮಾಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಕುಡಿಯುವ ನೀರು ಸೇರಿದಂತೆ ಕೆರೆ ತುಂಬಿಸುವ ಕೆಲಸ ಆಗಿದ್ದು ಚಾನೆಲ್‌ ಗಳಿಗೆ ನೀರು ಹರಿಸಿರುವುದರಿಂದ ಜಿಲ್ಲೆಯ ಕೆಲ ತಾಲೂಕುಗಳ ರೈತರಿಗೆ ಅನುಕೂಲವಾಗಿದೆ. ಆದರೆ ಹೊಸದುರ್ಗದ ಜನತೆ ವಿವಿ ಸಾಗರದ ನೀರು ಪಡೆಯುವಲ್ಲಿ ವಿಫಲವಾಗಿದೆ. ನಮ್ಮ ಮನವಿಗೆ ಸಿಎಂ ಯಡಿಯೂರಪ್ಪನವರು ಸ್ಪಂದಿಸಲಿದ್ದಾರೆ ಎಂಬ ಭರವಸೆಯನ್ನು ಶಾಸಕರು ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next