ಹೊಸದಿಲ್ಲಿ: ಹಿಜಾಬ್ ಧರಿಸಿರುವ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಭಾನುವಾರ ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.
ಹಿಜಾಬ್ ಧರಿಸಿದ ಕಾರಣಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳ ಗುಂಪನ್ನು ಅವರ ಕಾಲೇಜಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ನಂತರ ಭುಗಿಲೆದ್ದ ಕರ್ನಾಟಕದ ಹಿಜಾಬ್ ವಿವಾದ ನಡುವೆ ಓವೈಸಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಶಾಂತಿಯುತವಾಗಿ ಶಾಲೆ- ಕಾಲೇಜುಗಳನ್ನು ಆರಂಭಿಸುವುದು ಮೊದಲ ಆದ್ಯತೆ: ಸಿಎಂ ಬೊಮ್ಮಾಯಿ
ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಓವೈಸಿ ಭಾನುವಾರ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ, ಹಿಜಾಬ್ ಧರಿಸಿದ ಮಹಿಳೆಯರು ಕಾಲೇಜಿಗೆ ಹೋಗುತ್ತಾರೆ, ಜಿಲ್ಲಾಧಿಕಾರಿಗಳು, ಮ್ಯಾಜಿಸ್ಟ್ರೇಟ್‌ಗಳು, ವೈದ್ಯರು, ಉದ್ಯಮಿಗಳಾಗುತ್ತಾರೆ. ಮುಂದೊಂದು ದಿನ ದೇಶದ ಪ್ರಧಾನ ಮಂತ್ರಿಯಾಗುತ್ತಾಳೆ ಎಂದು ಓವೈಸಿ ಹೇಳಿದ್ದಾರೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಅದನ್ನು ನೋಡಲು ನಾನು ಜೀವಂತವಾಗಿಲ್ಲದಿರಬಹುದು, ಆದರೆ ನನ್ನ ಮಾತುಗಳನ್ನು ನೆನಪಿಡಿ, ಮುಂದೊಂದು ದಿನ ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗುತ್ತಾಳೆ. ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ನಿರ್ಧರಿಸಿ ಅವರ ಪೋಷಕರಿಗೆ ಈ ಬಗ್ಗೆ ಹೇಳಿದರೆ, ಅವರ ಪೋಷಕರು ಅವರನ್ನು ಬೆಂಬಲಿಸುತ್ತಾರೆ, ಯಾರು ಅವರನ್ನು ತಡೆಯುತ್ತಾರೆ ಎಂದು ನೋಡೋಣ!” ಎಂದರು.