Advertisement

ಕೋವಿಡ್ ಪರಿಹಾರಕ್ಕೆ ತನ್ನ ಪಿಗ್ಗಿ ಬ್ಯಾಂಕ್‌ನ ಸೇವಿಂಗ್ಸ್ ಕೊಟ್ಟ ಬಾಲಕಿ

03:24 PM Apr 08, 2020 | Team Udayavani |

ಉತ್ತರಾಖಂಡ: 21 ದಿನಗಳ ಲಾಕ್‌ ಡೌನ್‌ ಅವಧಿಯಲ್ಲಿ ಕಷ್ಟ ಪಡುತ್ತಿರುವವರ ನೆರವಿಗೆ ಹಲವರು ಧಾವಿಸುತ್ತಿದ್ದಾರೆ. ತಮ್ಮ ಕೈಯ್ಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಲು ಶ್ರಮಿಸುತ್ತಿದ್ದಾರೆ. ಅಂಥವರಲ್ಲಿ ಈ 11 ವರ್ಷದ ಪುಟಾಣಿಯೂ ಒಬ್ಬಳು.

Advertisement

ರಿಷಿಕೇಷದ ಅಲಿಯಾ ಚಾವ್ಲಾ ಎಂಬ ಈ ಪುಟ್ಟ ಬಾಲಕಿ ತನ್ನ ಪಿಗ್ಗಿ ಬ್ಯಾಂಕ್‌ ನಲ್ಲಿರುವ ಮೊತ್ತವನ್ನು ಪೊಲೀಸರಿಗೆ ನೀಡಿ, ಇದನ್ನು ಊಟಕ್ಕಿಲ್ಲದೇ ಕಷ್ಟಪಡುತ್ತಿರುವ ಬಡವರಿಗೆ ಸಹಾಯ ಮಾಡಲು ಬಳಸಿ ಎಂದು ಕೋರಿಕೊಂಡಿದ್ದಾಳೆ.

ಕೊತ್ವಾಲಿ ಪೊಲೀಸ್‌ ಠಾಣೆಗೆ ತನ್ನ ಅಪ್ಪನೊಂದಿಗೆ ಆಗಮಿಸಿದ ಬಾಲಕಿ, ಅಂಕಲ್, ಇದರಲ್ಲಿ ಎಷ್ಟು ಹಣವಿದೆ ಎಂದು ನನಗೆ ಗೊತ್ತಿಲ್ಲ. ನೀವೇ ಅದನ್ನು ಒಡೆದು, ಹಸಿದ ಜನರು ಮತ್ತು ಪ್ರಾಣಿಗಳಿಗೆ ಆಹಾರ ಒದಗಿಸಿ ಎಂದು ಮನವಿ ಮಾಡಿದ್ದಾಳೆ. ಈ ಪುಟ್ಟ ಬಾಲಕಿಯ ಔದಾರ್ಯಕ್ಕೆ ಪೊಲೀಸರು ಸೇರಿದಂತೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next