Advertisement

ಯುವತಿ ಕಿಡ್ನ್ಯಾಪ್,ತಾಳಿ ಕಟ್ಟಿ ರೇಪ್‌ ಮಾಡಿದ 2 ಮಕ್ಕಳ ತಂದೆ!

12:14 PM Aug 27, 2017 | Team Udayavani |

ಬೆಂಗಳೂರು: ವಿವಾಹಿತನಾಗಿ 2 ಮಕ್ಕಳ ತಂದೆಯಾದರೂ ಈತನಿಗೆ ಚಪಲ ಬಿಟ್ಟಿಲ್ಲ. ಎದುರು ಮನೆಯ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಗೃಹ ಬಂಧನದಲ್ಲಿರಿಸಿ , ಬಲವಂತವಾಗಿ ತಾಳಿ ಕಟ್ಟಿ ಅತ್ಯಾಚಾರ ಎಸಗಿದ್ದಾನೆ. 

Advertisement

ದಾಸರಹಳ್ಳಿಯ ನಿವಾಸಿಯಾಗಿರುವ ಪತ್ನಿಯಿಂದ ಪರಿತ್ಯಕ್ತನಾಗಿದ್ದ ಸಂತೋಷ್‌ ಎಂಬ ಮಧ್ಯವಯಸ್ಕ  ಹೇಯ ಕೃತ್ಯ ಎಸಗಿದ್ದು, ಎದುರು ಮನೆಯಲ್ಲಿದ್ದ 22 ವರ್ಷದ ಯುವತಿಯ ಮೇಲೆ ಕಣ್ಣು ಹಾಕಿದ್ದ. ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ನಿರಂತರವಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. 

ಅಗಸ್ಟ್‌ 24 ರ ರಾತ್ರಿ ರಾತ್ರಿ ಮಲಗಲೆಂದು ಸಮೀಪದಲ್ಲಿರುವ ಅಜ್ಜಿಯ ಮನೆಗೆ ತೆರಳುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಮನೆಗೆಳೆದೊಯ್ದು ತಾಳಿ ಕಟ್ಟಿಯೇ ಬಿಟ್ಟಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ. 

25 ರಂದು ಮಗಳು ನಾಪತ್ತೆಯಾಗಿರುವುದು ತಿಳಿದು ತಾಯಿ ಪೊಲೀಸರಿಗೆ ದೂರು ನೀಡಿದ್ದು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ತನಿಖೆಗಿಳಿದು ಸಂತೋಷ್‌ನನ್ನು ವಶಕ್ಕೆ ಪಡೆಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next