Advertisement

ಯುವತಿ ಬೆನ್ನ ಮೇಲೆ ಮೋದಿ ಟ್ಯಾಟೂ

09:32 AM Aug 11, 2019 | Sriram |

ರಾಂಚಿ: ಕೈಯಲ್ಲಿ ದೇವರ ಚಿತ್ರ, ಪ್ರೀತಿಪಾತ್ರರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು ಗೊತ್ತೇ ಇದೆ. ರಾಂಚಿಯ ಈ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಆಕೆ ತನ್ನ ಬೆನ್ನ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಾಳೆ.

Advertisement

ರಾಂಚಿಯ ರಿದ್ದಿ ಶರ್ಮಾ ಎಂಬಾಕೆ ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. 370 ವಿಧಿ ರದ್ದು ಮಾಡಿದ ಕ್ರಮಕ್ಕೆ ಆಕೆ ಫ‌ುಲ್‌ ಖುಷಿಯಾಗಿ ಈ ಕೆಲಸ ಮಾಡಿದ್ದಾಳೆ. ಎಲ್ಲರೂ ದೇಶದ ಈ ಸಾಧನೆಗೆ ಖುಷಿಪಟ್ಟು ಆಚರಣೆ ಮಾಡಿದ್ದಾರೆ. ನಾನು ಪ್ರಧಾನಿ ಹಚ್ಚೆ ಬೆನ್ನಲ್ಲಿ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.ಸೋಮವಾರ ಸುದ್ದಿ ಓದಿದಾಗ 370ನೇ ವಿಧಿ ರದ್ದಾಗಿದ್ದು ಗೊತ್ತಾಯಿತು. ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲು ಹಚ್ಚೆ ಹಾಕುವುದಕ್ಕಿಂತ ಉತ್ತಮವಾದದ್ದು ಬೇರೆ ಏನೂ ಇಲ್ಲ ಎಂದು ಆಲೋಚಿಸಿದೆ. ಆದ್ದರಿಂದ ಹೀಗೆ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.

ಅಲ್ಲದೇ ವಿನಯ್‌ ಸೋನಿ ಎಂಬವರು ಈ ಟ್ಯಾಟೂ ಹಾಕಿದ್ದು, ಇಂತಹ ಅವಕಾಶ ನನಗೆ ಬಂದಿರಲಿಲ್ಲ. ಮೋದಿ ಚಿತ್ರ ಹಚ್ಚೆ ಹಾಕಿದ್ದು ಇದೇ ಮೊದಲು. ಇಂತಹ ಫ್ಯಾನ್ಸ್‌ ಇರುವ ಅವರಿಗೆ ಹ್ಯಾಟ್ಸಫ್ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next