Advertisement

ಹುಟ್ಟುಹಬ್ಬದಂದೇ ಸ್ನೇಹಿತನನ್ನು ಥಳಿಸಿ ಬಾಲಕಿಯನ್ನು ಅತ್ಯಾಚಾರವೆಸಗಿದ ನಾಲ್ವರು ದುರುಳರು

09:53 AM Dec 02, 2019 | Mithun PG |

ತಮಿಳುನಾಡು: ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿರುವಾಗಲೇ ಸ್ನೇಹಿತನನ್ನು ಥಳಿಸಿ, ನಾಲ್ವರು ದುರುಳರು ಬಾಲಕಿಯೋರ್ವಳನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ಕೊಯಂಬತ್ತೂರ್ ನಲ್ಲಿ ನಡೆದಿದೆ.

Advertisement

ನವೆಂಬರ್ 26 ರಂದು ಈ ಘಟನೆ ನಡೆದಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕಿಯು ತನ್ನ ಹುಟ್ಟು ಹಬ್ಬವನ್ನು ಸ್ನೇಹಿತನೊಂದಿಗೆ ಪಾರ್ಕ್ ಒಂದರಲ್ಲಿ ಆಚರಿಸಿ ಮನೆಗೆ ಮರಳುತ್ತಿದ್ದಳು. ಈ ವೇಳೆ ನಾಲ್ವರು ದುರುಳರು ಸ್ನೇಹಿತನನ್ನು ಥಳಿಸಿ ಆಕೆಯನ್ನು ಏಕಾಂತ ಸ್ಥಳಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ.  ಈ ವೇಳೆ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು ದೂರು ದಾಖಲಿಸದಂತೆ ಆಕೆಗೆ ಬೆದರಿಕೆಯನ್ನೊಡ್ಡಿದ್ದರು.

ಸಂತ್ರಸ್ಥೆಯು ಮನೆಗೆ ಮರಳಿ ತನ್ನ ತಾಯಿಗೆ ವಿಷಯ ತಿಳಿಸಿದ್ದು ನಂತರ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ನಾಲ್ವರನ್ನು ಬಂಧಿಸಿದ್ದು, ಆರೋಪಿಗಳನ್ನು ಕಾರ್ತಿಕೇಯನ್, ರಾಹುಲ್ , ಪ್ರಕಾಶ್. ನಾರಾಯಣಮೂರ್ತಿ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next