Advertisement

ಚೆನ್ನೈ : ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಗೈದು ಕೊಂದ ಕಾಮಾಂಧ ತರುಣ

04:59 PM Feb 13, 2017 | udayavani editorial |

ಚೆನ್ನೈ : ತಮಿಳು ನಾಡಿನಲ್ಲಿ  ಎಲ್ಲರ ದೃಷ್ಟಿ ರಾಜಕೀಯ ಅಸ್ಥಿರತೆಯ ಮೇಲೆ ನೆಟ್ಟಿರುವ ನಡುವೆಯೇ ಮೂರನೇ ತರಗತಿಯ ಏಳು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಮಾನುಷ ಅತ್ಯಾಚಾರ ನಡೆದು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿ ಬಳಿಕ ಆಕೆಯ ದೇಹವನ್ನು ಅರೆಸುಟ್ಟು, ಅದನ್ನು ಪೆಟ್ಟಿಗೆಯೊಂದರಲ್ಲಿ ತುರುಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆಯಲಾದ ಭೀಭತ್ಸಕರ ಘಟನೆ ನಿನ್ನೆ ಭಾನುವಾರ ನಡೆದಿದೆ. 

Advertisement

ಭಾನುವಾರ ಸಂಜೆ ನಗರದ ಮುಗಳಿವಕ್ಕಂ ಎಂಬಲ್ಲಿನ ತನ್ನ ಅಪಾರ್ಟ್‌ಮೆಂಟ್‌ ಬಳಿ ಬಾಲಕಿಯು ಒಂಟಿಯಾಗಿ ಆಡುತ್ತಿದ್ದಾಗ ಕಾಮಾಂಧನೋರ್ವ ಆಕೆಯನ್ನು ಅಪಹರಿಸಿದ. ಬಾಲಕಿಯ ತಂದೆ – ತಾಯಿ ಎಲ್ಲೋ ಹೊರಗೆ ಹೋಗಿದ್ದಾಗ ಈ ಅಪಹರಣ ನಡೆಯಿತು.

ಬಾಲಕಿಯ ತಂದೆ – ತಾಯಿ ಮನೆಗೆ ಮರಳಿದಾಗ ಮಗಳು ಇಲ್ಲದಿರುವುದನ್ನು ಕಂಡು ದಿಗಿಲಾಗಿ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಲ್ಲಿ ಆಕೆಗಾಗಿ ಹುಡುಕಾಡಿ ಪ್ರಯೋಜನವಾಗದೆ ಬಳಿಕ ಪೊಲೀಸರಿಗೆ ದೂರು ನೀಡಿದರು. 

ಪೊಲೀಸರು ಕೂಡಲೇ ತನಿಖೆಯನ್ನು ಆರಂಭಿಸಿದರು. ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಕೊನೆಗೂ ಅವರು ಪತ್ತೆ ಹಚ್ಚಿದರು. ಆತನ ಹೆಸರು ದುಷ್ಯಂತ್‌ ಎಂದು ಗೊತ್ತಾಯಿತು.

ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ತಾನು ಬಾಲಕಿಯನ್ನು ಅತ್ಯಾಚಾರ ಮಾಡಲೆಂದು ಅಪಹರಿಸಿದ್ದು ಹೌದೆಂದು ಒಪ್ಪಿಕೊಂಡ.

Advertisement

“ಬಾಲಕಿಯ ಮೇಲೆ ಅತ್ಯಾಚಾರ ಎಸಗುವಾಗ ಆಕೆ ಬೊಬ್ಬಿಟ್ಟಳು; ಆಗ ತಾನು ಆಕೆಯ ಬಾಯನ್ನು ವಸ್ತ್ರದಿಂದ ಬಿಗಿಯಾಗಿ ಒತ್ತಿದೆ; ಪರಿಣಾಮವಾಗಿ ಆಕೆ ಉಸಿರುಗಟ್ಟಿ ಸತ್ತಳು; ಬಳಿಕ ನಾನು ಆಕೆಯ ಮೃತ ದೇಹವನ್ನು ಸುಟ್ಟೆನು. ಅರೆ ಸುಟ್ಟ ಬಾಲಕಿಯ ದೇಹವನ್ನು ಪೆಟ್ಟಿಗೆಯೊಂದರಲ್ಲಿ ತುರುಕಿ ಬಳಿಕ ಅದನ್ನು ರಾಷ್ಟ್ರೀಯ ಹೆದ್ದಾರಿಯ ಮೇಲೆ ಎಸೆದು ಹೋದೆನು’ ಎಂದು ಕಾಮಾಂಧ ತರುಣ ದುಷ್ಯಂತ್‌ ಪೊಲೀಸರಿಗೆ ತನ್ನ ಅಪರಾಧ ಕೃತ್ಯದ ವಿವರಗಳನ್ನು ನೀಡಿದ್ದಾನೆ.

ಈ ಘಟನೆಯಿಂದ ಚೆನ್ನೈ ನಗರದ ಜನರು ತೀವ್ರ ಆತಂಕಿತರಾಗಿ ಆಘಾತಕ್ಕೆ ಗುರಿಯಾಗಿದ್ದಾರೆ. ಅತ್ಯಾಚಾರಿ ಕಾಮಾಂಧ ದುಷ್ಯಂತ್‌ನನ್ನು ಬಂಧಿಸಿರುವ ಪೊಲೀಸರು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next