Advertisement

ಚಿಕ್ಕಬಳ್ಳಾಪುರದಲ್ಲಿ ಇಂದು ಗಿರಿಯಾಸ್‌ನ 75ನೇ ಮಳಿಗೆ ಉದ್ಘಾಟನೆ

10:59 PM Aug 23, 2019 | Lakshmi GovindaRaj |

ಬೆಂಗಳೂರು: ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರಾಟ ಕ್ಷೇತ್ರದ ಗಿರಿಯಾಸ್‌, ತನ್ನ ಮಾರಾಟ ಜಾಲದ 75ನೇ ಮೆಗಾ ಶೋರೂಂನ್ನು ಆ.24ರ ಶನಿವಾರ ದಂದು ಚಿಕ್ಕಬಳ್ಳಾ ಪುರದಲ್ಲಿ ತೆರೆಯಲಿದೆ.‌

Advertisement

ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆ ಸಿಎಂಸಿ ಬಡಾವಣೆಯ ಬಸ್‌ ನಿಲ್ದಾಣದ ಸಮೀಪ 10 ಸಾವಿರ ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಸಂಪೂರ್ಣ ಹವಾ ನಿಯಂ ತ್ರಿತ ವ್ಯವಸ್ಥೆಯುಳ್ಳ ಬೃಹತ್‌ ಕಟ್ಟಡ ಇದಾಗಿದೆ. ನೂತನ ಮಳಿಗೆ ಚಾಲನೆ ಪ್ರಯುಕ್ತ ಗಿರಿಯಾಸ್‌ ಎರಡು ದಿನಗಳ ಕಾಲ (ಆ.24 ರಿಂದ 26 ರವರೆಗೆ) “ಮೆಗಾ ಉದ್ಘಾಟನಾ ಮಾರಾಟ’ವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಖರೀದಿಸುವ ಗ್ರಾಹಕರಿಗೆ ಅತ್ಯದ್ಭುತ ಕೊಡುಗೆಗಳು, ಅಶ್ಶೂರ್ಡ್ ಗಿಫ್ಟ್‌ಗಳು ಹಾಗೂ ಇನ್ನಿತರ ವಿಶೇಷ ಕೊಡುಗೆಗಳಿರುತ್ತವೆ.

ನಿಮಗಿಷ್ಟವಾದ ಉತ್ಪನ್ನಗಳನ್ನು 1ರೂ.ಡೌನ್‌ ಪೇಮೆಂಟ್‌ನಲ್ಲಿ ಕೊಳ್ಳುವ ಅವಕಾಶವನ್ನೂ ಸಹ ಕಲ್ಪಿಸಿದೆ. ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ರಾಜ್ಯದ 34 ನಗರಗಳಲ್ಲಿ ಗಿರಿಯಾಸ್‌ ತನ್ನ ಜಾಲವನ್ನು ವಿಸ್ತರಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ನಗರಗಳಲ್ಲಿ ಮಳಿಗೆಗಳನ್ನು ತೆರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next