Advertisement

ಗಿರೀಶ್‌ ಕಾಸರವಳ್ಳಿಯವರಿಗೆ ಏಷ್ಯನ್‌ ಜೆನಿತ್‌ ಪ್ರಶಸ್ತಿ

12:43 PM Jan 27, 2018 | |

ಬೆಂಗಳೂರು: ಏಷ್ಯನ್‌ ರಾಷ್ಟ್ರಗಳ ಚಿತ್ರ ನಿರ್ದೇಶಕರಿಗೆ ನೀಡಲಾಗುವ ಪ್ರತಿಷ್ಠಿತ “ಏಷ್ಯನ್‌ ಜೆನಿತ್‌ ಪ್ರಶಸ್ತಿ’ಯು ಈ ಬಾರಿ ಕನ್ನಡ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರಿಗೆ ಸಂದಿದೆ. ಕಳೆದ ವರ್ಷ ಪ್ರಶಸ್ತಿಯು ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್‌ ಮಜೀದೆY ಅವತಿಗೆ ಲಭಿಸಿತ್ತು.

Advertisement

ಜ.24ರಂದು ಪೂನಾದಲ್ಲಿ ಆರಂಭಗೊಂಡ ಒಂದು ವಾರದ ಏಷ್ಯನ್‌ ಚಿತ್ರೋತ್ಸವದಲ್ಲಿ ರಾಷ್ಟ್ರೀಯ ಚಲನಚಿತ್ರ ಬಂಡಾರದ ನಿರ್ದೇಶಕರಾದ ಪ್ರಕಾಶ್‌ ಮಗುªರಂ ಅವರು ಗಿರೀಶ್‌ ಕಾಸರವಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಚಿತ್ರರಂಗಕ್ಕೆ ಗಿರೀಶ್‌ ಕಾಸರವಳ್ಳಿಯವರ ಕಾಣಿಕೆ ಮತ್ತು ಕಾಣೆR ಕುರಿತು, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ಸುಮಿತ್ರಾ ಭಾವೆ ಪರಿಚಯಿಸಿದರು.

ಪೂನಾ ಫಿಲಂ ಆಂಡ್‌ ಟಿವಿ ಇನ್ಸ್ಟಿಟ್ಯೂಟ್‌ನ ನಿರ್ದೇಶಕ ಭೂಪೇಂದ್ರ ಖೈಂತೋಲಾ, 10ನೇ ಏಷ್ಯನ್‌ ಚಿತ್ರೋತ್ಸವ, ಪೂನಾ ವಿಭಾಗದ ನಿರ್ದೇಶಕ ಸತೀಶ್‌ ಜಕತ್ಕì ಉಪಸ್ಥಿತರಿದ್ದರು. ಸನ್ಮಾನದ ನಂತರ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಚಿತ್ರ ಪ್ರದರ್ಶನ ನಡೆಯಿತು.

ಚಿತ್ರೋತ್ಸವದಲ್ಲಿ ಕಾಸರವಳ್ಳಿ ನಿರ್ದೇಶನದ “ತಬರನ ಕತೆ’ ಮತ್ತು “ಘಟಶ್ರಾದ್ಧ’ ಹಾಗೂ ಅನನ್ಯ ಕಾಸರವಳ್ಳಿ ಅವರ ನಿರ್ದೇಶನದ “ಹರಿಕಥಾ ಪ್ರಸಂಗ’ ಚಿತ್ರಗಳೂ ಚಿತ್ರೋತ್ಸವದ ಜಾಗತಿಕ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next