Advertisement

ನವಾಡಾ ಬದಲು ಬೇಗುಸರಾಯ್‌: ಬಿಜೆಪಿ ಸಚಿವ ಗಿರಿರಾಜ್‌ ಆಕ್ರೋಶ

09:18 AM Mar 29, 2019 | Sathish malya |

ಪಟ್ನಾ : ತನ್ನ ಮೂಲ ಕ್ಷೇತ್ರವಾಗಿರುವ ನವಾಡಾದಿಂದ ಸ್ಪರ್ಧಿಸುವ ಬದಲು ತನಗೆ ಬೇಗುಸರಾಯ್‌ ಕ್ಷೇತ್ರವನ್ನು ನೀಡಲಾಗಿರುವುದಕ್ಕೆ ಬಿಜೆಪಿಯ ಉರಿ ನಾಲಗೆಯ ಸಂಸದ ಹಾಗೂ ಸಚಿವ ಗಿರಿರಾಜ್‌ ಸಿಂಗ್‌ ಪಕ್ಷದ ಹೈಕಮಾಂಡ್‌ ವಿರುದ್ಧ ಸಿಟ್ಟಾಗಿದ್ದು ತನಗಾಗಿರುವ ಮನೋ ವೇದನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

Advertisement

“ಬೇರೆ ಯಾವುದೇ ಸಂಸದರ ಸೀಟನ್ನು ಬದಲಾಯಿಸಲಾಗಿಲ್ಲ; ನನ್ನದನ್ನು ಮಾತ್ರವೇ ಬದಲಾಯಿಸಲಾಗಿದೆ. ಇದರಿಂದ ನನ್ನ ಆತ್ಮ ಗೌರವ, ಘನತೆಗೆ ಘಾಸಿಯಾಗಿದೆ. ನನ್ನನ್ನು ಮಾತನಾಡಿಸದೆಯೇ ಈ ಬದಲಾವಣೆ ಮಾಡಲಾಗಿದೆ. ಇದನ್ನು ಯಾಕಾಗಿ ಹೀಗೆ ಮಾಡಲಾಯಿತು ಎಂಬ ಬಗ್ಗೆ ನನಗೆ ರಾಜ್ಯ ಬಿಜೆಪಿ ನಾಯಕತ್ವ ಉತ್ತರ ಕೊಡಬೇಕು; ಬೇಗುಸರಾಯ್‌ ಬಗ್ಗೆ ನನಗೇನೂ ಆಕ್ಷೇಪ ಇಲ್ಲ; ಆದರೆ ನಾನು ನನ್ನ ಆತ್ಮ ಗೌರವ ಮತ್ತು ಘನತೆಯೊಂದಿಗೆ ರಾಜಿ ಮಾಡಿಕೊಳ್ಳಲಾರೆ’ ಎಂದು 66ರ ಹರೆಯದ ಬಿಜೆಪಿ ನಾಯಕ ಸಿಂಗ್‌ ಗುಡುಗಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದಿದ್ದ ನವಾಡಾ ಸೀಟನ್ನು ತನಗೆ ನಿರಾಕರಿಸಿರುವ ಬಿಹಾರ ಬಿಜೆಪಿ ನಾಯತ್ವವನ್ನು ಕಟುವಾಗಿ ಟೀಕಿಸಿರುವ ಗಿರಿರಾಜ್‌ ಸಿಂಗ್‌ ತನಗಾಗಿರುವ ನೋವು, ನಿರಾಶೆ, ಹತಾಶೆಯನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.

ನವಾಡಾ ಬದಲು ಬೇಗುಸರಾಯ್‌ ಸೀಟು ಕೊಟ್ಟದ್ದಕ್ಕೆ ಸಿಟ್ಟಿಗೆದ್ದು ತನಗೆ ನವಾಡ ಕ್ಷೇತ್ರವೇ ಬೇಕೆಂದು ಹಠ ಹಿಡಿದಿರುವ ಗಿರಿರಾಜ್‌ ಸಿಂಗ್‌ “ಶಾಲೆಗೆ ಹೋಗಲು ಒಲ್ಲೆನೆಂದು ಚಂಡಿ ಹಿಡಿಯುವ ಹುಡುಗನ ಹಾಗೆ ಕಾಣುತ್ತಾರೆ’ ಎಂದು ಇವರ ಪ್ರತಿಸ್ಪರ್ಧಿ ಕನ್ಹಯ್ಯ ಕುಮಾರ್‌ ಕೀಟಲೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next