Advertisement

ಬಕ್ತಿಯಾರ್‌ಪುರ, ಅಕ್‌ಬರ್‌ಪುರ: ಪುನರ್‌ ನಾಮಕರಣಕ್ಕೆ ಸಲಹೆ, ವಿರೋಧ

04:26 PM Oct 22, 2018 | Team Udayavani |

ಪಟ್ನಾ : ಒಂಬತ್ತನೇ ಶತಮಾನದ ಅಫ್ಘಾನ್‌ ಮಿಲಿಟರಿ ಜನರಲ್‌ ಬಕ್ತಿಯಾರ್‌ ಖೀಲ್ಜಿ ಹೆಸರನ್ನು ಹೊಂದಿರುವ ಮತ್ತು ರಾಜ್ಯದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹುಟ್ಟಿ ಬೆಳೆದ ಊರಾಗಿರುವ, ಪಟ್ನಾ ಹೊರವಲಯದ ಬಕ್ತಿಯಾರ್‌ಪುರದ ಹೆಸರನ್ನು ಬದಲಾಯಿಸಬೇಕೆಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಗಿರಿರಾಜ್‌ ಸಿಂಗ್‌ ಮಾಡಿರುವ ಸಲಹೆ ಸ್ವತಃ ಬಿಜೆಪಿ ಮತ್ತು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. 

Advertisement

ದಿಲ್ಲಿಯ ಅಂದಿನ ಸುಲ್ತಾನ ಕುತುಬುದ್ದೀನ್‌ ಐಬಕ್‌ ನ ಆದೇಶದ ಪ್ರಕಾರ ಅಫ್ಘಾನ್‌ ಮಿಲಿಟರಿ ಜನರಲ್‌ ಬಕ್ತಿಯಾರ್‌ ಖೀಲ್ಜಿ ಬಿಹಾರದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡಿದ್ದ. ಪಟ್ನಾ ಹೊರವಲಯದಲ್ಲಿರುವ ನಗರಕ್ಕೆ ಬಕ್ತಿಯಾರ್‌ ಹೆಸರು ಬಂದಿರುವುದು ಆತನಿಂದಾಗಿ ಎಂಬುದನ್ನು ಇತಿಹಾಸ ತಿಳಿಸುತ್ತದೆ. 

ಗಿರಿರಾಜ್‌ ಸಿಂಗ್‌ ಅವರ ಈ ಪ್ರಸ್ತಾವವನ್ನು ಬಿಹಾರದಲ್ಲಿನ ಜೆಡಿಯು (ಸಿಎಂ ನಿತೀಶ್‌ ಕುಮಾರ್‌ ಪಕ್ಷ), ವಿರೋಧ ಪಕ್ಷಗಳಾಗಿರುವ ಆರ್‌ಜೆಡಿ ಮತ್ತು ಹಿಂದುಸ್ಥಾನಿ ಆವಾಮ್‌ ಮೋರ್ಚಾ ತೀವ್ರವಾಗಿ ಆಕ್ಷೇಪಿಸಿವೆ. 

ಗಿರಿರಾಜ್‌ ಸಿಂಗ್‌ ಅವರು ತಾವು ಪ್ರತಿನಿಧಿಸುತ್ತಿರುವ ಅಕ್‌ಬರ್‌ಪುರ ಲೋಕಸಭಾ ಕ್ಷೇತ್ರಕ್ಕೂ ಬೇರೆ ಹೆಸರಿಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅವರು ಈ ಎರಡೂ ಸ್ಥಳಗಳಿಗೆ ಯಾವುದೇ ಪರ್ಯಾಯ ನಾಮವನ್ನು ಸೂಚಿಸಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next