Advertisement
ವನ್ಯಜೀವಿ ಕಾಯ್ದೆ ಉಲ್ಲಂಘನೆ ಪ್ರಕಾರ, ಗಿರಿಜನರು ಅರಣ್ಯದಲ್ಲಿ ವಾಸಿಸುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಕಾಡಿಗೆ ಬಂದಿರುವ ಆದಿವಾಸಿಗರನ್ನುತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. “ನಮಗೆ ಪುನರ್ವಸತಿ ಕೇಂದ್ರದಲ್ಲಿ ಸರಿಯಾದವ್ಯವಸ್ಥೆ ಇಲ್ಲ. ಆ ಸ್ಥಳ ವಾಸಿಸಲು ಯೋಗ್ಯವಲ್ಲ. ಹೀಗಾಗಿನಮಗೆ ಕಾಡು ವಾಸವೇ ಲೇಸು. ಹೀಗಾಗಿ ನಾವುವಾಪಸ್ ಅಲ್ಲಿಗೆ ಹೋಗಲ್ಲ’ ಎಂದು ಆದಿವಾಸಿಗರು ಪಟ್ಟು ಹಿಡಿದಿದ್ದಾರೆ. ಗಿರಿಜನರ ಈ ನಡೆಯಿಂದ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಲಕ್ಕಪಟ್ಟಣ ಪುನರ್ವಸತಿ ಕೇಂದ್ರದಲ್ಲಿ ಶಿಥಿಲಾವಸ್ಥೆಮನೆಗಳನ್ನು ನೀಡಿದೆ. ಅಲ್ಲಿ ವಿದ್ಯುತ್ ಇಲ್ಲ, ಕುಡಿಯಲು ಸಮರ್ಪಕ ನೀರಿಲ್ಲ, ಅಕ್ರಮ ಮದ್ಯ ಮಾರಾಟದಿಂದನಮ್ಮ ಕಡೆಯ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಕೃಷಿಗೆ ಯೋಗ್ಯ ಭೂಮಿ ನೀಡಿಲ್ಲ, 18ವರ್ಷಮೇಲ್ಪಟ್ಟವರಿಗೆ 10 ಲಕ್ಷ ರೂ. ನೀಡುವ ಪ್ಯಾಕೇಜ್ ನೀಡಬೇಕು. ಆದರೆ, ಈ ತನಕ ಯಾರಿಗೂ ಹಣ ನೀಡಿಲ್ಲ. ಒಟ್ಟಾರೆ ಅಲ್ಲಿ ವಾಸಕ್ಕೆ ಯೋಗ್ಯವಾಗಿಲ್ಲ.ಹೀಗಾಗಿ ನಾವು ನಮ್ಮ ಮೂಲ ಸ್ಥಳಕ್ಕೆ ಆಗಮಿಸಿದ್ದೇವೆ.ಇಲ್ಲಿಯೇ ವಾಸವಾಗಿರಲು ತೀರ್ಮಾನಿಸಿದ್ದೇವೆ ಎಂದುಆದಿವಾಸಿಗರು ಪಟ್ಟು ಹಿಡಿದಿದ್ದಾರೆ.
ಸಾಮೂಹಿಕ ಆತ್ಮಹತ್ಯೆ: ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಆದಿವಾಸಿಗರ ಪ್ರವೇಶ ನಿರಾಕರಿಸಿದ್ದು, ಸರ್ಕಾರ ನಮಗೆ ಮೂಲ ಸ್ಥಳಕ್ಕೆಅವಕಾಶ ಕಲ್ಪಿಸದೇ ಹೋದರೆ ಎಲ್ಲಾ ಆದಿವಾಸಿಗರುಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಆದಿವಾಸಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಬೋಗಪುರ ಹಾಡಿಯ ಮಂದಿ ಪ್ರಸ್ತುತಅರಣ್ಯದಂಚಿನಲ್ಲಿ ಆಶ್ರಯ ಪಡೆದಿದ್ದು, ಮಕ್ಕಳುಮಹಿಳೆಯರ ಜೊತೆಯಲ್ಲಿ ಜೀವದ ಹಂಗು ತೊರೆದುಕೊರೆವ ಚಳಿಯನ್ನೂ ಲೆಕ್ಕಿಸದೇ ಬಯಲಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಸೌಲಭ್ಯ ಸಿಗುತ್ತೆ, ವಾಪಸ್ ಹೋಗಿ: ತಹಶೀಲ್ದಾರ್ :
ವಿಷಯ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ನರಗುಂದ, ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಸೇರಿದಂತೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆದಿವಾಸಿಗರ ಸಮಸ್ಯೆಗಳನ್ನು ಆಲಿಸಿದರು. ” ಮರಳಿ ಹಾಡಿಗೆ ಆಗಮಿಸುವುದು ಕಾನೂನು ಬಾಹಿರ. ಹಾಗೊಂದು ವೇಳೆ ಅರಣ್ಯ ಪ್ರವೇಶಿಸಿದ್ದೇ ಆದಲ್ಲಿ ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಪುನರ್ವಸತಿ ಕೇಂದ್ರದ ಸಮಸ್ಯೆಗಳ ಸರಿಪಡಿಸುವ ನಿಟ್ಟಿನಲ್ಲಿ ಹುಣಸೂರು ತಹಶೀಲ್ದಾರ್ ಅವರನ್ನುಸಂಪರ್ಕಿಸಲಾಗಿದೆ. ಮುಂದೆ ಎಲ್ಲವೂ ಸರಿಹೋಗಲಿದೆ. ಹೀಗಾಗಿ ಪುನರ್ವಸತಿ ಕೇಂದ್ರಕ್ಕೆ ವಾಪಸ್ ತೆರಳಿ’ ಎಂದು ತಹಶೀಲ್ದಾರ್ ಮನವಿ ಮಾಡಿದರು.
– ಎಚ್.ಬಿ.ಬಸವರಾಜು