ಸಲಗ ಚಿತ್ರದ “ಟಿಣಿಂಗ ಮಿಣಿಂಗ ಟಿಶ್ಯಾ’ ಹಾಡಿನ ಮೂಲಕ ಮನೆಮಾತಾದವರು ಗಿರಿಜಾ ಸಿದ್ಧಿ.ಇದೀಗ ಗಿರಿಜಾ ಕಂಠದಲ್ಲಿ ಮತ್ತೂಂದು ಹಾಡು ಮೂಡಿಬಂದಿದೆ. ಆದರೆ ಅದು ಚಿತ್ರಗೀತೆಯಲ್ಲ.ಇದೇ ಮೊದಲ ಬಾರಿಗೆ ಜನಪದಶೈಲಿಯಲ್ಲಿ ಹಾಡು ಹಾಡಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ಹುಟ್ಟು ಹಬ್ಬದ ಅಂಗವಾಗಿ, “ಮೈಸೂರು ಹುಲಿಯಾ’ ಎಂಬ ಹಾಡನ್ನು ಗಿರಿಜಾ ಹಾಡಿದ್ದಾರೆ. ಸಿದ್ದರಾಮಯ್ಯನವರ ಎಪ್ಪತ್ತೈದು ವರುಷದ ಜೀವನ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.
ಕೈ ಹಿಡಿಯೋ ಕೈ ಸಿದ್ದರಾಮಯ್ಯ ಎನ್ನುತ್ತ ಶುರುವಾಗುವ ಈ ಹಾಡನ್ನುಸಿದ್ದರಾಮಯ್ಯನವರ ಆಪ್ತರಾದಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿರ್ಮಾಣ ಮಾಡಿದ್ದಾರೆ. ಸಿನೆಮಾ ಶೈಲಿಯಲ್ಲಿ ಹಾಡು ಮೂಡಿಬಂದಿದೆ.
ಗಿರಿಜಾ ಧ್ವನಿಯಲ್ಲಿ , ಮೂಡಿಬಂದಿರುವ ಈ ಹಾಡಿನ ಜೊತೆಗೆ ಇದೇ ಇನ್ನೊಂದು ಹಾಡು ಸಹ ಬಿಡುಗಡೆ ಆಗಲಿದ್ದು, ಚುಟುಚುಟುಅಂತೈತಿ ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ.
ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಎರಡೂ ಲಿರಿಕಲ್ ವೀಡಿಯೋಹೊಂದಿರುವ ಹಾಡುಗಳು ಎ2 ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿದ್ದಿ ಹಾಡಿರುವ ಜೈ ಜೈ ಜೈ ಜೈ ಜನನಾಯಕ ಎಂಬ ಸಾಲುಗಳಿಂದಕೂಡಿರುವ ಹಾಡು ವೈರಲ್ ಆಗಿದ್ದುಸಿದ್ದರಾಮಯ್ಯ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಆಗಸ್ಟ್ 3ರಂದುಸಿದ್ದರಾಮಯ್ಯನವರ ಹುಟ್ಟುಹಬ್ಬ ದಂದು ದಾವಣಗೆರೆಯಲ್ಲಿ ನಡೆಯುವಸಮಾರಂಭದಲ್ಲಿ ಹಾಡು ಬಿಡುಗಡೆಯಾಗಲಿದೆ.