Advertisement

ಅಮೆರಿಕದಲ್ಲಿಯೂ “ಗಿರಿಗಿಟ್‌’ಮೋಡಿ

09:26 PM Oct 16, 2019 | mahesh |

ತುಳು ಸಿನೆಮಾ ರಂಗದಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ “ಗಿರಿಗಿಟ್‌’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಯಾರೂ ನಿರೀಕ್ಷಿಸದ ಸಾಧನೆ ಮಾಡಿದೆ. ಕರಾವಳಿ ಹಾಗೂ ಬೇರೆ ಬೇರೆ ರಾಜ್ಯದಲ್ಲಿ ಯಶಸ್ವೀ ಪ್ರದರ್ಶನ ಕಂಡ ಸಿನೆಮಾ ಇದೀಗ ವಿದೇಶದಲ್ಲಿಯೂ ಯಶಸ್ವೀ ಪ್ರದರ್ಶನದ ಮೂಲಕ ಸದ್ದು ಮಾಡಿದೆ.

Advertisement

ಮೊದಲ ವಾರದಲ್ಲಿಯೇ 1.24 ಕೋ.ರೂ ಕಲೆಕ್ಷನ್‌ ಮಾಡಿ ಈಗಾಗಲೇ ಅತೀ ಹೆಚ್ಚಿನ ಚಿತ್ರಮಂದಿರದಲ್ಲಿ 50 ದಿನಗಳನ್ನು ದಾಟಿ 75ರ ಸಡಗರದಲ್ಲಿರುವ ಗಿರಿಗಿಟ್‌, ದುಬೈನಲ್ಲಿಯೂ 50 ದಿನ ಪೂರೈಸುವ ಮೂಲಕ ಹೆಸರು ಮಾಡಿದೆ. ಇಲ್ಲಿಯವರೆಗೆ ಯುಎಇಯಲ್ಲಿ ಯಾವುದೇ ಕನ್ನಡ, ತುಳು, ಕೊಂಕಣಿ ಸಿನೆಮಾ 50 ದಿನದ ಪ್ರದರ್ಶನ ಕಂಡದ್ದು ಬಾರೀ ಅಪರೂಪ. ಆದರೆ, ಈ ಎಲ್ಲ ಲೆಕ್ಕಾಚಾ ರ ವನ್ನು ಮೀರಿ ಗಿರಿಗಿಟ್‌ 50 ದಿನಗಳ ಯಶಸ್ವೀ ಪ್ರದ ರ್ಶನ ಕಂಡಿದೆ.

ಸಾನ್‌ಜೋಸ್‌, ಲಾಸ್‌ ಏಂಜ ಲೀಸ್‌, ಚಿಕಾಗೋ ಥಿಯೇಟರ್‌ ನಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡ ಸಿನೆಮಾ ಎಂಬ ಹೆಸರಿಗೆ ಗಿರಿಗಿಟ್‌ ಪಾತ್ರವಾಗಿದೆ. ಕುವೈಟ್‌ನಲ್ಲಿಯೂ ಎರಡು ವಾರಗಳ ಪ್ರದರ್ಶನ ಕಂಡಿದ್ದು, ಗಿರಿಗಿಟ್‌ನ ಮಹಿಮೆ ವಿಶ್ವಾದ್ಯಂತ ಹಬ್ಬಿರುವುದು ಅತ್ಯಂತ ಸ್ಪಷ್ಟವಾಗುತ್ತಿದೆ. ದುಬೈನಲ್ಲಿ ದಾಖಲೆ ಬರೆದ ಗಿರಿಗಿಟ್‌ ಸಿನೆಮಾ ತಂಡಕ್ಕೆ ಖ್ಯಾತ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ಸಮ್ಮಾನದ ಗೌರವ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next