Advertisement

ಇಟಲಿ ನೂತನ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ ಆಯ್ಕೆ

07:20 PM Oct 22, 2022 | Team Udayavani |

ರೋಮ್‌: ಇಟಲಿಯ ನೂತನ ಪ್ರಧಾನಮಂತ್ರಿಯಾಗಿ ಜೋರ್ಜಾ ಮೆಲೋನಿ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಎರಡನೇ ಪ್ರಪಂಚ ಮಹಾಯುದ್ಧದ ಬಳಿಕ ಆ ದೇಶದಲ್ಲಿ ಮೊದಲ ಬಾರಿಗೆ ಬಲಪಂಥೀಯ ಚಿಂತನೆಯ ಹಿನ್ನೆಲೆ ಹೊಂದಿದ ಬ್ರದರ್ಸ್‌ ಆಫ್ ಇಟಲಿ ಎಂಬ ಪಕ್ಷ ಚುನಾವಣೆಯಲ್ಲಿ ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕಳೆದ ತಿಂಗಳು ಮುಕ್ತಾಯಗೊಂಡ ಚುನಾವಣೆಯಲ್ಲಿ ಲೀಗ್‌ ಆಫ್ ಮಟ್ಟೆಯೋ ಸಲ್ವಾನಿ, ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕಾನಿ ಅವರ ಫೋರ್ಜಾ ಇಟಾಲಿಯಾ ಪಕ್ಷದ ಜತೆಗೂಡಿ ಅವರು ಸರ್ಕಾರ ರಚಿಸಿದ್ದಾರೆ.

ನೂತನ ಪ್ರಧಾನಿ ಮೆಲೋನಿ ಮೂಲತಃ ಪತ್ರಕರ್ತರಾಗಿದ್ದವರು. ಜತೆಗೆ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next