ಮುಂಬೈ: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರು ಗಾಯಗೊಂಡ ಕಾರಣ ಮುಂದಿನ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ. ಗಿಲ್ ಬದಲಿಗೆ ಸ್ಟ್ಯಾಂಡ್ ಬೈ ಆಟಗಾರನಾಗಿದ್ದ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಎನ್ ಡಿಟಿವಿ ವರದಿ ಮಾಡಿದೆ. ಶುಭ್ಮನ್ ಗಿಲ್ ಗೆ ಯಾವ ರೀತಿಯ ಗಾಯವಾಗಿದೆ ಎಂಬುವುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಗಿಲ್ ಎರಡು ಇನ್ನಿಂಗ್ಸ್ ನಲ್ಲಿ 28 ರನ್ ಮತ್ತು 8 ರನ್ ಗಳಿಸಿದ್ದರು.
ಇದನ್ನೂ ಓದಿ:ಸೆಪ್ಟೆಂಬರ್ ವರೆಗೂ ಅವಧಿ ಮೀರಿದ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬಳಸಬಹುದು!
ಇಂಗ್ಲೆಂಡ್ ಸರಣಿಗೆ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆಯಾಗಿದ್ದ ಅಭಿಮನ್ಯು ಈಶ್ವರನ್ ಅವರು ತಂಡ ಸೇರಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 64 ಪಂದ್ಯದಲ್ಲಿ 43.57 ಸರಾಸರಿಯಲ್ಲಿ 4401 ರನ್ ಗಳಿಸಿದ್ದಾರೆ.
ತಂಡದಲ್ಲಿ ಈಗಾಗಲೇ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್.ರಾಹುಲ್ ಇರುವ ಕಾರಣ ಇಂಗ್ಲೆಂಡ್ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಇವರಿಬ್ಬರಲ್ಲಿ ಓರ್ವ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ವಿರುದ್ಧ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಪಂದ್ಯ ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆಗಸ್ಟ್ 4ರಂದು ಆರಂಭವಾಗಲಿದೆ.