Advertisement
ಕೇವಲ ಡಿಗ್ರಿ ಧಾರಿಗಳಾದ ಶಂಕರ್ ಜಾದೂಗಾರಿಕೆ ಮೂಲಕ ಅಂತಾರಾಷ್ಟ್ರೀಯ ಸಮಾವೇಶ ನಡೆಯುವ ಬಹುಮುನ್ನವೇ ಪ್ರೊಫೆಸರ್‌ಗಿರಿಗೆ ಏರಿದ್ದರು. ಈ ಗಾರುಡಿಗನಿಗೀಗ ಸಾರ್ವಜನಿಕ ಅಭಿನಂದನೆ ಡಿ. 14ರ ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವುದಿದೆ. ಹಿಂದಿನ ದಾಖಲೆಗಳ ತುಣುಕುಗಳನ್ನು ಬಿತ್ತರಿಸುವ ಮೂಲಕ ಮತ್ತೆ ಗತವೈಭವದ ಕಾಲಕ್ಕೆ ಕೊಂಡೊಯ್ಯಲಾಗುತ್ತಿದೆ.
ಜನರೆಲ್ಲ ಇದನ್ನು ನೋಡಿ ಹೌಹಾರಿ ವೀಕ್ಷಿಸಿದರು, ಮೂಗಿನ ಮೇಲೆ ಬೆರಳಿಟ್ಟರು. ಒಂದು ಬುಟ್ಟಿಯಲ್ಲಿ ಹಗ್ಗವನ್ನು ಸುತ್ತಿಡುತ್ತಾರೆ. ಕುತೂಹಲ ಶುರುವಾದಾಗ ಹಗ್ಗ 15-20 ಅಡಿ ಯಷ್ಟು ಎತ್ತರ ನೇರ ಕಂಬದಂತೆ ನೆಟ್ಟಗೆ ಏರುತ್ತದೆ. ಒಬ್ಬ ಹುಡುಗ ಅದನ್ನು ಮರ ಹತ್ತಿದಂತೆ ಹತ್ತುತ್ತಾನೆ, ಅದರ ತುತ್ತತುದಿವರೆಗೂ. ಅನಂತರ ಅದೇ ಮಾರ್ಗದಲ್ಲಿ ಇಳಿದುಬರುತ್ತಾನೆ. ಈ ಪ್ರದರ್ಶ ನವನ್ನು ಮಲ್ಪೆ ಕಡಲ ತೀರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಸಿಯೇ ಬಿಟ್ಟರು ಪ್ರೊ|ಶಂಕರ್. ಅಮೆರಿಕದ ಎಡಿನ್‌ಬರ್ಗ್ ವಿ.ವಿ.ಯಲ್ಲಿ ಸಂಶೋ ಧನೆ ನಡೆಸುವಾತನೊಬ್ಬ ಉಡುಪಿಗೆ ಕೆಮರಾ ಸಹಿತ ಬಂದು ಈ ವಿಶ್ವ ದಾಖಲೆಯನ್ನು ದಾಖಲಿಸಿಬಿಟ್ಟ. “ರೋಪ್ ಟ್ರಿಕ್’ ಕಟ್ಟುಕತೆಯಲ್ಲ, “ಸಾಧ್ಯಕತೆ’ ಎಂಬುದು ದಾಖಲಾಯಿತು.
Related Articles
Advertisement
“ಭಾರತದಲ್ಲಿ ಇಂಥದ್ದೊಂದು ಪ್ರದರ್ಶನ ನೀಡಬೇಕು. ಇಲ್ಲವಾದರೆ ಭಾರತವನ್ನು ಬಿಟ್ಟು ಬೇರೆಡೆ ನಡೆಸುತ್ತೇನೆ’ ಎಂದು ನಿಡುಗಾಲದ ಮಿತ್ರ ಶಂಕರ್‌ಗೆ ಹೇಳಿದಾಗ ಶಂಕರ್ ಭಾರತದಲ್ಲಿಯಾಗುವುದಷ್ಟೇ ಅಲ್ಲದೆ ಉಡುಪಿಯಲ್ಲಿಯೇ ಆಗಮಾಡಿಸಿದರು.ಮೂಲತಃ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ಯವರಾದ ಪ್ರೊ|ಶಂಕರ್ ಉಡುಪಿಯಲ್ಲಿ ನೆಲೆಯಾಗಲು ಕಾರಣವಾದದ್ದು ಸಿಂಡಿಕೇಟ್ ಬ್ಯಾಂಕ್, ಇದಕ್ಕೂ ಕಾರಣವಾದದ್ದು ಜಾದೂ ಕಲೆ. ಜಪಾನ್‌ನಲ್ಲಿ ಫಾರ್ಮಸುಟಿಕಲ್ ಕಂಪೆನಿಯವರು ತಮ್ಮ ಉತ್ಪನ್ನಗಳ ಪ್ರಚಾರಾರ್ಥ ಜಾದೂಗಾ ರನೊಬ್ಬನನ್ನು ನೇಮಿಸಿಕೊಂಡದ್ದು ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಕೆ.ಪೈಯವರಿಗೆ ತಿಳಿದು ಪ್ರೊ|ಶಂಕರ್‌ರನ್ನು ಬ್ಯಾಂಕ್‌ಗೆ ಸಿಬಂದಿಯಾಗಿ ನೇಮಿಸಿಕೊಂಡರು. ಇದಕ್ಕೂ ಮುನ್ನ ಅರ್ಜಿ ಹಾಕಿದ್ದಾಗ ಪೂರ್ಣಕಾಲೀನ ವೃತ್ತಿಪರ ಜಾದೂ ಗಾರನಾಗು ಎಂದು ಸಾಲವನ್ನು ಮಂಜೂರು ಮಾಡಿದವರೂ ಕೆ.ಕೆ.ಪೈಯವರೇ. ದೇಶ, ವಿದೇಶಗಳಲ್ಲಿ ಒಟ್ಟಾರೆ 15,000ಕ್ಕೂ ಹೆಚ್ಚು ಪ್ರದರ್ಶನ ನೀಡಿದ ಹೆಗ್ಗಳಿಕೆ ಪ್ರೊ|ಶಂಕರ್ ಅವರ ದಾಗಿದೆ. ಜಾದೂಗಾರಿಕೆಗೆ ಒಂದು ಸಬಲ ತಂಡ ಬೇಕಿ ರುತ್ತದೆ. ಪ್ರೊ|ಶಂಕರ್ ಅವರ ಮಕ್ಕಳು, ಪತ್ನಿಯವರಲ್ಲದೆ ಸ್ನೇಹಿತರ ದೊಡ್ಡ ಪಡೆಯನ್ನು ಜಾದೂ ಕಲೆ ಸೃಷ್ಟಿಸಿಕೊಂಡಿದೆ. ನಿವೃತ್ತಿ ಬಳಿಕವೂ ಸಾರ್ವಜನಿಕ ಪ್ರದರ್ಶನ ನೀಡಲು ತಂಡಕ್ಕೆ ಪ್ರೊ|ಶಂಕರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಒತ್ತಡ, ಮಾನಸಿಕ ವೇದನೆಯಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಶಂಕರ್ ಜಾದೂಕಲೆ ಮೂಲಕ ಒಂದಿಷ್ಟು ಶಾಂತತೆಯನ್ನು ಸಿಂಪಡಿಸುತ್ತಿದ್ದಾರೆ. -ಮಟಪಾಡಿ ಕುಮಾರಸ್ವಾಮಿ