Advertisement

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

10:53 PM Aug 30, 2022 | Team Udayavani |

ಚೆನ್ನೈ: ಅಂಜೂರ ಮರದಿಂದ ತಯಾರಿಸಲಾದ 32 ಅಡಿ ಎತ್ತರದ ಗಣೇಶನ ಮೂರ್ತಿಯು ಈ ವರ್ಷದ ಗಣೇಶೋತ್ಸವದ ವಿಶೇಷತೆಯಲ್ಲಿ ಒಂದಾಗಿದೆ.

Advertisement

ಗಣೇಶ ಚತುರ್ಥಿಯ ಅಂಗವಾಗಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ 83 ಅಂಜೂರದ ಮರಗಳನ್ನು ಬಳಸಿ ನಿಂತ ಭಂಗಿಯ ಗಣೇಶನ ಮೂರ್ತಿಯನ್ನು ತಯಾರಿಸಲಾಗಿದೆ.

ಕಲಾವಿದರಾದ ಸ್ಥಪತಿ ತಿರುನಾವುಕರಸರ್‌ ಈ ಬೃಹತ್‌ ಮೂರ್ತಿಯನ್ನು ಕೆತ್ತಿದ್ದಾರೆ. ನಾಗೈ ವಿಶ್ವರೂಪ ವಿನಾಯಗಾರ್‌ ಸಮಿತಿ ವತಿಯಿಂದ ಈ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುತ್ತಿದೆ. “ಜನವರಿಯಲ್ಲಿ ಪವಿತ್ರ ಅಂಜೂರ ಮರದಿಂದ ಗಣೇಶನ ಮೂರ್ತಿಯ ಕೆತ್ತನೆಯ ಕಾರ್ಯ ಆರಂಭಿಸಲಾಯಿತು.

ಕೆಲವು ದಿನಗಳ ಹಿಂದೆ ಕೆತ್ತನೆ ಕಾರ್ಯ ಪೂರ್ಣಗೊಂಡಿತು. ಅಂಜೂರ ಮರದಲ್ಲಿ ಮೂರ್ತಿ ತಯಾರಿಸಬೇಕೆಂಬುದು ನನ್ನ 15 ವರ್ಷಗಳ ಕನಸಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಣೇಶೋತ್ಸವ ಈ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ,” ಎಂದು ಸ್ಥಪತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next