ಕುದೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ, ಮಾಗಡಿ ವಿಧಾನ ಸಭಾ ಕ್ಷೇತ್ರ ಜಿದ್ದಾ ಜಿದ್ದಿನ ರಣರಂಗವಾಗಿ ಬದಲಾಗುತ್ತಿದೆ. ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರಿದ್ದು, ಕ್ಷೇತ್ರದಾದ್ಯಂತ ಗಿಫ್ಟ್ ಪಾಲಿಟಿಕ್ಸ್ ಕೂಡ ಜೋರಾಗಿದೆ.
ವೋಟಿಗಾಗಿ ರಾಜಕೀಯದವರು ಹಣ, ಎಣ್ಣೆ ಬಾಡೋಟ, ಸೀರೆ , ಕುಕ್ಕರ್, ಮಿಕ್ಸಿ ನೀಡುವುದು ಗೊತ್ತು, ಆದರೆ, ಮಾಗಡಿ ಕ್ಷೇತ್ರದಲೊಬ್ಬ ನಾಯಕ ಮತದಾರರಿಗೆ ಸೈಟ್ ನೀಡುವ ಭರವಸೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಕ್ಷಣಗಣನೆ ಶುರುವಾಗಿರುವಂತೆಯೇ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪ್ರಚಾರ ತಾರಕ್ಕೇರಿದ್ದು. ಇಲ್ಲೊಬ್ಬ ನಾಯಕರು ಮತದಾರರಿಗೆ ಸೈಟ್‌ಗಳನ್ನು ನೀಡಿ ಓಲೈಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಭರ್ಜರಿ ಉಡುಗೊರೆ ನೀಡಲು ಬಿಜೆಪಿ ಸಂಭಾವ್ಯ ಮುಂದಾಗಿದ್ದಾರೆ.
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದರೆ. ಅತ್ತ ಉಚಿತ ಸೈಟ್ ನಿಡಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುಂದಾಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಸಾದ್‌ಗೌಡ ಹಿಂಗೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು. 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15×20 ಅಳತೆ ಸೈಟ್ ಗಳನ್ನು ನೀಡಲು ಸಿದ್ಧತೆ ನಡೆಸಿದ್ದಾರೆ.
ಬಿಡದಿ ಹೋಬಳಿ ಯಲ್ಲಿ 6 ಎಕ್ಕರೆ ಜಾಗದಲ್ಲಿ ಉಚಿತ ಸೈಟ್ ನೀಡಲು ಪ್ರಸಾದ್ ಗೌಡ ತೀರ್ಮಾನಿಸಿದ್ದಾರೆ, ಸೈಟ್ ಹಂಚಿಕೆಯಲ್ಲಿ ಅಂಗವಿಕಲರು, ವಿಧವೆಯರು, ಮತ್ತು ಅನಾಥರಿಗೆ ಮೊದಲು ಆದ್ಯತೆ ನೀಡುವುದಾಗಿ ಪ್ರಸಾದ್ ಗೌಡ ತಿಳಿಸಿದ್ದು, ಜಮೀನು ಅಥವಾ ನಿವೇಶನ ಇಲ್ದವರು ಬಿಪಿಎಸ್ ಕಾರ್ಡ್ ,ಆಧಾರ್ ಕಾರ್ಡ್, ಮಾಹಿತಿ ಸಂಗ್ರಹಿಸಿ ಸೈಟ್ ಹಂಚಿಕೆಗೆ ಸಿದ್ಧತೆ ನೆಡೆಸಿದ್ದಾರೆ.
ಈ ಯೋಜನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕರೆ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಂಚನಬೆಲೆ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ. ಈ ಕುರಿತು ಭೀತಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.