Advertisement

ಹೊರೆಯಾಗದಿರಲಿ ಉಡುಗೊರೆ

12:30 AM Jan 02, 2019 | |

ಹೊಸ ವರ್ಷಕ್ಕೆ ನಿಮಗೆ ಉಡುಗೊರೆಗಳು ಸಿಕ್ಕಿವೆಯಾ? ಬಂದ ಉಡುಗೊರೆಗಳಲ್ಲಿ ಯಾವುದು ಮನಸ್ಸಿಗೆ ಹಿಡಿಸಿತು? ಯಾವುದು ಹಿಡಿಸಲಿಲ್ಲ? ಯಾವುದಾದರೂ ಗಿಫ್ಟ್ ಮುಜುಗರ ಉಂಟು ಮಾಡ್ತಾ? ಯಾಕಂದ್ರೆ, ಗಿಫ್ಟ್ ನೀಡುವುದು ಕೂಡ ಒಂದು ಕಲೆ. ಯಾರಿಗೆ, ಯಾವ ಸಂದರ್ಭದಲ್ಲಿ, ಯಾವ ಗಿಫ್ಟ್ ಕೊಡಬೇಕು ಅನ್ನುವ ಜಾಣ್ಮೆ ಎಲ್ಲರಿಗೂ ಇರುವುದಿಲ್ಲ. ಗಿಫ್ಟ್ ಕೊಡುವ, ಪಡೆಯುವ ಮುನ್ನ ಕೆಲವು ಸಂಗತಿಗಳ ಕುರಿತು ಯೋಚಿಸಿ.

Advertisement

1.    ಅಪರಿಚಿತರಿಗೆ, ಸಲುಗೆ ಇಲ್ಲದವರಿಗೆ ವಿನಾಕಾರಣ ಗಿಫ್ಟ್ ನೀಡುವುದು ಅಪಾರ್ಥಕ್ಕೆ ಎಡೆ ಮಾಡಿಕೊಡಬಹುದು.

2.    ಹೊಸ ಸ್ನೇಹಿತರಿಗೆ ಗಿಫ್ಟ್ ನೀಡುವಾಗ, ಅವರ ಅಭಿರುಚಿ, ಆಸಕ್ತಿಯ ಬಗ್ಗೆ ಗಮನ ಹರಿಸಿ. ಈ ಬಗ್ಗೆ ಗೊಂದಲವಿದ್ದರೆ, ಚಾಕೊಲೇಟ್‌, ಗ್ರೀಟಿಂಗ್‌, ಪುಸ್ತಕ ಮುಂತಾದ ಜನರಲ್‌ ಗಿಫ್ಟ್ಗಳನ್ನು ನೀಡಬಹುದು.

3.    ಕೆಲವು ತಾಯ್ತಂದೆಯರು, ಮಕ್ಕಳು ಕೇಳಿದ್ದನ್ನೆಲ್ಲ ಗಿಫ್ಟ್ ಆಗಿ ಕೊಡುತ್ತಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಹೆತ್ತವರ ಈ ಮನೋಭಾವ ಮಕ್ಕಳಲ್ಲಿ ಹಠಮಾರಿತನವನ್ನು ಬೆಳೆಸಬಹುದು. 

4.    ಯಾವ ವಯಸ್ಸಿನಲ್ಲಿ ಯಾವುದನ್ನು ಉಡುಗೊರೆಯಾಗಿ ಕೊಡಬೇಕು ಎಂಬ ವಿಷಯ ಹೆತ್ತವರಿಗೆ ತಿಳಿದಿರಲಿ. ಹದಿಹರೆಯದಲ್ಲಿ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸಿ, ಅವರು ದಾರಿ ತಪ್ಪಲು ಕಾರಣರಾಗಬೇಡಿ.

Advertisement

5.    ನೀವು ನೀಡುವ ಉಡುಗೊರೆಗಳು ಸ್ನೇಹಪೂರ್ವಕವಾಗಿರಬೇಕು. 

6.     ಹೆಣ್ಣುಮಕ್ಕಳಿಗೆ ಉಡುಗೊರೆ ನೀಡಿ ಋಣಕ್ಕೆ ಬೀಳಿಸಿಕೊಳ್ಳುವವರು ಬಹಳಷ್ಟಿ¨ªಾರೆ. ಆದರೆ, ನೆನಪಿಡಿ. ಉಡುಗೊರೆ ನೀಡೋದ್ರಿಂದ, ಹೆಣ್ಣುಮಕ್ಕಳ ಮೇಲೆ ಅಧಿಕಾರ ಚಲಾಯಿಸಲು, ನಿಮ್ಮ ವಶವಾಗಿಸಿಕೊಳ್ಳಲು ಸಾಧ್ಯವಿಲ್ಲ. 

7.    ಉಡುಗೊರೆ ಪಡೆದುಕೊಳ್ಳುವಾಗ ಹೆಣ್ಣುಮಕ್ಕಳು ಹುಷಾರಾಗಿರಬೇಕು! ಉಡುಗೊರೆ ನೀಡುವವರು ಸಂಬಂಧಿಕರು, ಆತ್ಮೀಯ ಸ್ನೇಹಿತರೂ ಆಗಿರದಿದ್ದರೆ, ಯಾವ ಉಡುಗೊರೆಯನ್ನು, ಯಾವ ಉದ್ದೇಶದಿಂದ ನೀಡುತ್ತಿ¨ªಾರೆ ಎಂದು ಯೋಚಿಸಿ. ಉಡುಗೊರೆಯ ಹಿಂದೆ ಸ್ವಾರ್ಥದ ಸುಳಿವು ಸಿಕ್ಕರೆ, ನಯವಾಗಿಯೇ ಅದಕ್ಕೆ ನೋ ಎನ್ನಿ. 

8.    ಯಾವುದೋ ವ್ಯಕ್ತಿ, ಆಗಾಗ್ಗೆ ಉಡುಗೊರೆ ನೀಡುತ್ತಿ¨ªಾನೆ ಎಂದಾದರೆ, ಕಾರಣವಿಲ್ಲದೆ ಉಡುಗೊರೆ ನೀಡಿ ನಿಮ್ಮನ್ನು ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಿ¨ªಾನೆ ಎಂದಾದರೆ, ಹೆಚ್ಚು ಮೌಲ್ಯದ ಉಡುಗೊರೆ ನೀಡುತ್ತಿ¨ªಾನೆ ಎಂದರೆ ಅದರ ಹಿಂದಿನ ಉದ್ದೇಶ ಏನು ಎಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿ. 

9.    ನಿಮ್ಮ ಗೌರವಕ್ಕೆ ಧಕ್ಕೆಯಾಗುವಂಥ ಉಡುಗೊರೆಗಳನ್ನು ಯಾರಾದರೂ ನೀಡಿದರೆ, ಮುಲಾಜಿಲ್ಲದೆ ಬೇಡ ಎನ್ನಿ. 

10.    ವಿದೇಶದಲ್ಲಿ ಉದ್ಯೋಗದಲ್ಲಿ ಇರುವವರು ಊರಿಗೆ ಬರುವಾಗ ಮನೆಯವರ ಜೊತೆ ನೆರೆಮನೆಯವರಿಗೂ ಉಡುಗೊರೆ ತರುತ್ತಾರೆ. ಇಂಥ ಸಂದರ್ಭದಲ್ಲಿ ಮನೆಯ ಹಿರಿಯರ ಮೂಲಕ, ಉಡುಗೊರೆ ತಲುಪಿಸಿದರೆ ಒಳ್ಳೆಯದು. 

11.    ಕಂಪನಿಯಲ್ಲಿ ಬಾಸ್‌ ಎಲ್ಲರಿಗೂ ಉಡುಗೊರೆ ನೀಡುತ್ತಿದ್ದಾರೆ ಎಂದಾದರೆ ಪಡೆದುಕೊಳ್ಳಲು ಯಾವುದೇ ಸಂಕೋಚವಿಲ್ಲ. ಆದರೆ, ಬಾಸ್‌ ವೈಯಕ್ತಿಕವಾಗಿ ನಿಮ್ಮನ್ನು ಮಾತ್ರ ಕರೆದು, ಬೇರೆಯವರಿಗೆ ನೀಡುವ ಉಡುಗೊರೆಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ನೀಡಿದರೆ, ಸ್ವೀಕರಿಸುವ ಮುನ್ನ ಯೋಚಿಸಿ. 

12.    ಸ್ವೀಕರಿಸುವ ಕೈಗಳಿದ್ದಾಗ ಮಾತ್ರ ನೀಡುವ ಉಡುಗೊರೆಗೆ ಬೆಲೆ ಬರುತ್ತೆ. ಹಾಗಾಗಿ, ಯಾರಿಗೆ ಯಾವ ಅಗತ್ಯವಿದೆಯೋ ಅದನ್ನೇ ಉಡುಗೊರೆಯಾಗಿ ನೀಡಿದರೆ ಉತ್ತಮ. 

13.    ಬರೀ ನಮ್ಮವರಿಗೆ ಮಾತ್ರವಲ್ಲ, ವಿಶೇಷ ಸಂದರ್ಭಗಳಂದು ಅನಾಥಾಶ್ರಮ, ಸ್ಲಂ, ವೃದ್ಧಾಶ್ರಮದ ನಿವಾಸಿಗಳಿಗೆ ಗಿಫ್ಟ್ ನೀಡಿ ಅವರ ಮುಖದಲ್ಲಿ ನಗುವರಳಿಸಿ.

-ಶುಭಾಶಯ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next