Advertisement

ವಜ್ರದೇಹಿ ಮಠದಲ್ಲಿ ಗೌರವಾರ್ಪಣೆ 

09:34 AM Jan 19, 2018 | Team Udayavani |

ಗುರುಪುರ: ಹಿಂದೂ ಧರ್ಮದ ವೈಶಿಷ್ಟ್ಯವೇ ಶಕ್ತಿಯ ಆರಾಧನೆ. ಪ್ರಸ್ತುತ ಸಮಾಜಕ್ಕೆ ಬಲಮುಪಾರ್ಶ್ವ ವಾಕ್ಯದ ಅಗತ್ಯ ಎದ್ದು ಕಾಣುತ್ತಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್‌ ಹೆಗಡೆ ಅಭಿಪ್ರಾಯಪಟ್ಟರು. ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.

Advertisement

ಹಿಂದು ಧರ್ಮ ಶಕ್ತಿಯ ಆರಾಧನೆ ಮೇಲೆ ನಂಬಿಕೆ ಇಟ್ಟುಕೊಂಡಿರುವ ಧರ್ಮ. ನಾವು ಆರಾಧನೆ ಮಾಡುವ ದೇವರುಗಳು ಹತ್ತಾರು ಕೈಗಳಲ್ಲಿ ಶಸ್ತ್ರಗಳನ್ನು ಹಿಡಿದುಕೊಂಡು ನಿಂತವರು. ಸವಾಲುಗಳನ್ನು ಎದುರಿಸಿ ನಿಲ್ಲುವ ಧೈರ್ಯ ಮತ್ತು ಶಕ್ತಿಯನ್ನು ನಾವು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಷ್ಟ್ರ , ರಾಷ್ಟ್ರರಕ್ಷಣೆ ಧ್ಯೇಯವಾಗಲಿ
ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ರಾಷ್ಟ್ರ, ಧರ್ಮ, ಸಮಾಜರಕ್ಷಣೆ ನಮ್ಮ ಮೂಲ ಧ್ಯೇಯವಾಗಬೇಕು. ಯುದ್ಧೋನ್ಮಾದಲ್ಲಿ ಜವಾಬ್ದಾರಿಯೊಂದಿಗೆ ಮುಂದುವರಿದಾಗ ಇದು ಸಾಧ್ಯ ಎಂದು ನುಡಿದರು. ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರನ್ನು ಶಾಲು, ಫಲಪುಷ್ಪ ನೀಡಿ ಸಮ್ಮಾನಿಸಲಾಯಿತು. ಬಿಜೆಪಿ ಹಿಂದುಳಿದ ಮೋರ್ಚಾದ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಬಿಜೆಪಿ ಉತ್ತರ ವಲಯ ಅಧ್ಯಕ್ಷ ಡಾ| ವೈ. ಭರತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next