Advertisement

ಸರ್ಕಾರಿ ಶಾಲೆ ಮಕ್ಕಳಿಗೆ ಬಟ್ಟೆ ಭಾಗ್ಯ

11:57 AM Mar 04, 2018 | |

ಬೆಂಗಳೂರು: ಒಂದರಿಂದ 10ನೇ ತರಗತಿಯ ಸರ್ಕಾರಿ ಶಾಲೆ ಮಕ್ಕಳಿಗೆ 2018-19ನೇ ಸಾಲಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶನಿವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ 2009-10 ರಿಂದ 2017-18 ರ ವರೆಗೆ ಅನುಮೋದನೆಗೊಂಡ 433 ಕೋಟಿ ವೆಚ್ಚದ  173 ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. 

ಬೆಂಗಳೂರು ಒಂದು ಲಕ್ಷ ಬಹುಮಹಡಿ ಯೋಜನೆಗೆ ಸರ್ಕಾರದ 582 ಎಕರೆ ಖರಾಬು ಗೋಮಾಳ ಜಮೀನನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ನೀಡಲು ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. 

ನಗರದ ಕೇಂದ್ರ ಭಾಗದಲ್ಲಿರುವ ಗಾಲ್ಪ್ ಕ್ಲಬ್‌ನಿಂದ ವಾರ್ಷಿಕ ಆದಾಯದ ಶೇಕಡಾ 2 ರಷ್ಟನ್ನು ರಾಜ್ಯ ಸರ್ಕಾರಕ್ಕೆ ಬಾಡಿಗೆ ನೀಡುವಂತೆ ಸೂಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಗಾಲ್ಫ್ ಕ್ಲಬ್‌ ವಾರ್ಷಿಕ 8 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದು, ಸರ್ಕಾರಕ್ಕೆ ವಾರ್ಷಿಕ 16 ಲಕ್ಷ ಬಾಡಿಗೆ ಕಟ್ಟಲು ಸೂಚಿಸಲಾಗುವುದು ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಅಭಿಯಾನವನ್ನು ಸರ್ಕಾರಿ ಸಾರ್ವಜನಿಕ ಸಹಭಾಗಿತ್ವದಲ್ಲಿ 50 ಕೋಟಿವರೆಗಿನ ಯೋಜನೆ ಕೈಗೆತ್ತಿಕೊಳ್ಳಲು ಏಕ ಗವಾಕ್ಷಿ ಮೂಲಕ ಅನುಮೋದನೆ ನೀಡಲು ಸಂಪುಟ ಅನುಮತಿ ನೀಡಿದೆ. 

Advertisement

ಜಕ್ಕೂರು ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ  ಏರೋ ಸ್ಪೇಸ್‌ ಸೊಸೈಟಿ ಸ್ಥಾಪಿಸಿ ವಿವಿಧ ಸಾಹಸ ಕ್ರೀಡೆಗಳನ್ನು ಏರ್ಪಡಿಸಲು ಒಪ್ಪಿಗೆ ನೀಡಲಾಗಿದೆ. ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್‌ ಅವರ ತಂದೆ ಬಸಪ್ಪ ಹಂಡಿಭಾಗ್‌ ಅವರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು 4 ಎಕರೆ ಜಮೀನು ನೀಡಲು ಸಂಪುಟ ಅನುಮೋದನೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು. 

ಸಂಪುಟದ ಪ್ರಮುಖ ನಿರ್ಣಯಗಳು.
-ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ನಿಯಮ ತಿದ್ದುಪಡಿ ಮಾಡಲು ಒಪ್ಪಿಗೆ.
-ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸಾಲದ ಮೂಲಕ 735 ಕೋಟಿ ಹಣ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡುವುದು.
-ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ 2018 ಕ್ಕೆ ಅನುಮೋದನೆ ನೀಡುವುದು.
-ಐಸಿಡಿಎಸ್‌ ಯೋಜನೆ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ, ಶಾಲಾ ಪೂರ್ವ ಶಿಕ್ಷಣ ಕಿಟ್‌ಗಳನ್ನು ನೀಡಲು ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next