Advertisement

“ಗಿಫ್ಟ್ ಬಾಕ್ಸ್‌’ಹಾಡುಗಳು ರಿಲೀಸ್‌

09:32 AM Jan 23, 2020 | Lakshmi GovindaRaj |

ಮೈಸೂರಿನ ಹೂಟಗಳ್ಳಿ ಹೊರವಲಯದ “ಒಡನಾಡಿ ಕೇಂದ್ರ’ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ “ಗಿಫ್ಟ್ಬಾಕ್ಸ್‌’ ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ ಮಕ್ಕಳ ಕೈಯಲ್ಲಿ ರಿಲೀಸ್‌ ಮಾಡಿಸಲಾಯಿತು. ಬದುಕಿಗೇ ಸವಾಲೆಸೆದ ಆ ಮಕ್ಕಳು “ಗಿಫ್ಟ್ಬಾಕ್ಸ್‌’ ತೆರೆದು ಚಿತ್ರದ ಹಾಡೊಂದನ್ನು ಹೊರತಂದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಘು ಎಸ್‌.ಪಿ “ಈ ಸಿನಿಮಾದ ಕತೆ ಹುಟ್ಟಿದ್ದು ಒಡನಾಡಿಯಿಂದಲೇ.

Advertisement

ಇಲ್ಲಿನ ಪ್ರತಿಯೊಬ್ಬ ಮಕ್ಕಳ ಹಿನ್ನೆಲೆ, ಬದುಕು, ಅವರ ಹೋರಾಟವೇ ನನ್ನ ಚಿತ್ರದ ಕತೆಗೆ ಸ್ಫೂರ್ತಿಯಾಯಿತು. ಹಾಗಾಗಿ ಈ ಚಿತ್ರವನ್ನು ಒಡನಾಡಿಯ ಸಿನಿಮಾ ಎಂದರೆ ತಪ್ಪಾಗಲಾರದು’ ಎಂದು ಹೇಳಿದರು. ಲಿರಿಕಲ್‌ ವೀಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಒಡನಾಡಿಯ ಸಂಸ್ಥಾಪಕ ನಿರ್ದೇಶಕರಾದ ಸ್ಟಾನ್ಲಿ ಮತ್ತು ಪರಶುರಾಮ್, ನಿರ್ದೇಶಕ ರಘು ಎಸ್‌.ಪಿ, ನಾಯಕನಟ ಹೃತ್ವಿಕ್‌ ಮಠದ್‌, ಗೀತ ರಚನೆಕಾರ ರಾಘವೇಂದ್ರ ಬೂದನೂರು ಮತ್ತು ಚಿತ್ರತಂಡದ ಸದಸ್ಯರು ಹಾಜರಿದ್ದರು.

ಮಾನವ ಕಳ್ಳಸಾಗಣೆಯ ಕುರಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಇಂಥ ವಿಷಜಾಲದಿಂದ ಹೊರಬಂದು ಹೊಸ ಬದುಕು ಕಟ್ಟಿಕೊಂಡಿರುವ ಮಕ್ಕಳಿಂದ ಚಿತ್ರತಂಡ ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡಿಸುವ ಚಿತ್ರದ ಪ್ರಮೋಶನ್‌ ಕೆಲಸಗಳನ್ನು ಆರಂಭಿಸಿದೆ. ಈಗಾಗಲೇ ಬಿಡುಗಡೆಯಾಗಿರುವ “ಗಿಫ್ಟ್ಬಾಕ್ಸ್‌’ ಚಿತ್ರದ ಟ್ರೈಲರ್‌ ಮತ್ತು ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಲ್ಲದೆ ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ ಫೆಬ್ರವರಿ ಎರಡನೇ ವಾರ ಈ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next