ಸೊಳ್ಳೆ ಎಂದರೆ, ಅದರ ಗಾತ್ರ ಎಷ್ಟಿರಬಹುದು ಎಂಬ ಅಂದಾಜು ಪಟ್ ಎಂದು ಸೊಳ್ಳೆ ತಟ್ಟುವ ನಿಮ್ಮ ಕೈಗಳಿಗೆ ಗೊತ್ತಿರುತ್ತದೆ. ಆದರೆ ಸಾಮಾನ್ಯ ಗಾತ್ರಕ್ಕಿಂತ ಹೆಚ್ಚಿನ ಗಾತ್ರದ ಸೊಳ್ಳೆಯೊಂದು ಚೀನಾದ ಸಿಚುವಾನ್ ಪ್ರದೇಶದಲ್ಲಿ ಪತ್ತೆ ಯಾಗಿದೆ. ಈ ದೈತ್ಯ ಸೊಳ್ಳೆಯ ರೆಕ್ಕೆಗಳು 11.15 ಸೆಂ.ಮೀ ಉದ್ದವಿದೆ. ಇದು ವಿಶ್ವದ ಅತಿ ದೊಡ್ಡ ಸೊಳ್ಳೆಯಾದ “ಹೋಲೋರೊಸಿಯಾ ಮಿಕಾಡೋ’ ಜಾತಿಗೆ ಸೇರಿದೆ ಎಂದು ಕೀಟಶಾಸOಉಜ್ಞರು ಸಂಶೋಧಿಸಿದ್ದಾರೆ.
ಚೆಂಗು ಬಳಿಯ ಮೌಂಟ್ ಕ್ವಿಂಗ್ ಚೆಂಗ್ ಎಂಬಲ್ಲಿ ಕಳೆದ ವರ್ಷ ಮಿಕಾಡೋ ಸೊಳ್ಳೆಗಳು ಪತ್ತೆಯಾಗಿದ್ದವು. ಅವುಗಳ
ರೆಕ್ಕೆ ಸಾಮಾನ್ಯವಾಗಿ 8 ಸೆಂ.ಮೀ ಉದ್ದವಾಗಿರುತ್ತದೆ. ಈಗ ಕಾಣಿಸಿರೋ ಸೊಳ್ಳೆ ಅದಕ್ಕಿಂತಲೂ ದೊಡ್ಡದಾಗಿದೆಯಂತೆ. ಆದರೆ ಇವುಗಳ ಆಯಸ್ಸು ಕೆಲವೇ ದಿನಗಳು ಮಾತ್ರ.
ಜಗತ್ತಿನಲ್ಲಿ 10 ಸಾವಿರ ಬಗೆಯ ಸೊಳ್ಳೆಗಳಿವೆ.ಅವುಗಳಲ್ಲಿ 100 ಜಾತಿಯ ಸೊಳ್ಳೆಗಳು ಮಾತ್ರ ಮನುಷ್ಯನ ರಕ್ತ ಹೀರುತ್ತವೆ.
ಕೌತುಕದ ಸಂಗತಿ ಎಂದರೆ ಈ ದೈತ್ಯ ಸೊಳ್ಳೆಗಳು ಮನುಷ್ಯರ ರಕ್ತ ಹೀರುವುದಿಲ್ಲ. ಅದರ ಆಹಾರ ಯಾವುದು ಗೊತ್ತಾ? ಈ ದೈತ್ಯ ಸೊಳ್ಳೆಗಳು ಮಕರಂದವನ್ನು ಹೀರುತ್ತವೆ.
– ಹನುಮಂತ ಮ.ದೇಶಕುಲಕರ್ಣಿ