Advertisement

GI Tag: ಕೆಂಪಿರುವೆ ಚಟ್ನಿಗೆ ಜಿಐ ಟ್ಯಾಗ್‌ ಮಾನ್ಯತೆ

01:41 AM Jan 11, 2024 | Team Udayavani |

ಭುವನೇಶ್ವರ: ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯಲ್ಲಿ ಹೇರಳವಾಗಿ ಸೇವಿಸುವ ಕೆಂಪು ಇರುವೆ ಚಟ್ನಿಗೆ ಭೌಗೋಳಿಕ ಸೂಚನೆಯ (ಜಿಐ ಟ್ಯಾಗ್‌) ಮಾನ್ಯತೆ ದೊರೆತಿದೆ. ಔಷಧೀಯ ಮತ್ತು ಪೌಷ್ಟಿಕಾಂಶ ಗುಣಗಳನ್ನು ಹೊಂದಿರುವ ನಿಟ್ಟಿನಲ್ಲಿ ಕೆಂಪಿರುವೆ ಚಟ್ನಿಗೆ ಜಿಐ ಟ್ಯಾಗ್‌ ನೀಡಲಾಗಿದೆ.

Advertisement

ವೈಜ್ಞಾನಿಕವಾಗಿ ಓಕೋ ಫಿಲ್ಲಾ ಸ್ಮರಾಗ್ಡಿನಾ ಎಂದು ಕರೆಯಲ್ಪಡುವ ಈ ಕೆಂಪು ಇರುವೆಗಳು ಮಯೂರ್‌ಭಂಜ್‌ನ ಕಾಡುಗಳಲ್ಲಿ ಕಂಡುಬರುತ್ತವೆ. ಬುಡಕಟ್ಟು ಸಮುದಾಯಗಳು ಈ ಇರುವೆಗಳನ್ನು ಚಟ್ನಿಗಾಗಿ ಬಳಸುವುದಲ್ಲದೇ, ಮಾರಾಟ ಮಾಡುತ್ತಿದ್ದಾರೆ. ಉಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನೊಂದಿಗೆ ಇರುವೆಗಳನ್ನು ತೊಳೆದು ರುಬ್ಬಿ ತಯಾರಿಸುವ ಈ ಖಾದ್ಯವನ್ನು “ಕೈ ಚಟ್ನಿ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next