ಚತ್ತೀಸ್ ಗಢ: ಇಲ್ಲಿನ ಮಹಾಸಮುಂಡ್ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ ದೆವ್ವದ ಕಾಟದಿಂದಾಗಿ ವಿದ್ಯಾರ್ಥಿಗಳು ಭೀತಿಗೊಳಗಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Mango Tree: ಒಂದೇ ಮಾವಿನ ಮರದಲ್ಲಿ 14 ಬಗೆಯ ಮಾವಿನ ಹಣ್ಣುಗಳು…ಧಾರಿ ಗ್ರಾಮದ ರೈತನ ಸಾಧನೆ…
ಸರ್ಕಾರಿ ಕಾಲೇಜಿನ ಹಾಸ್ಟೆಲ್ ಕಾರಿಡಾರ್ ನಲ್ಲಿ ಹುಡುಗಿಯ ಅಟ್ಟಹಾಸದ ನಗು ಕೇಳಿಬರುತ್ತಿದೆ. ಆದರೆ ಕೊಠಡಿಯಿಂದ ಹೊರಗೆ ಬಂದು ನೋಡಿದರೆ ಯಾರೂ ಕಾಣಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಘಟನೆ ಕುರಿತು ವಿಷಯ ತಿಳಿದ ಪೊಲೀಸರು ಕೂಡಾ ಇತ್ತೀಚೆಗೆ ಹಾಸ್ಟೆಲ್ ಗೆ ಬಂದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು. ಆ ಸಂದರ್ಭದಲ್ಲಿಯೂ ನಗುವಿನ ಸದ್ದು ಕೇಳಿ ಬಂದಿದ್ದು, ಆ ಶಬ್ದದ ಮೂಲವನ್ನು ಹುಡುಕಲು ಸಾಧ್ಯವಾಗಲಿಲ್ಲ ಎಂದು ವರದಿ ವಿವರಿಸಿದೆ.
ಈ ಸರ್ಕಾರಿ ಹಾಸ್ಟೆಲ್ ನಲ್ಲಿ 54 ವಿದ್ಯಾರ್ಥಿಗಳು ವಾಸವಾಗಿದ್ದು, ಯುವತಿಯ ನಗುವಿನ ಶಬ್ದ ಕೇಳಲು ಪ್ರಾರಂಭಿಸಿದ ಸಂದರ್ಭದಲ್ಲಿ ಹಾಸ್ಟೆಲ್ ನಲ್ಲಿ ಕೇವಲ 5-6 ವಿದ್ಯಾರ್ಥಿಗಳು ಮಾತ್ರ ಇದ್ದು, ಉಳಿದವರು ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದರು ಎಂದು ವರದಿ ಹೇಳಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಡಿಕಲ್ ಕಾಲೇಜಿನ ಡೀನ್ ಯಾಸ್ಮಿನ್ ಖಾನ್, ಇದೊಂದು ವದಂತಿಯಾಗಿದೆ. ಈ ಬಗ್ಗೆ ನಾನು ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತನಾಡಿದ್ದೇನೆ. ಬಹುತೇಕ ವಿದ್ಯಾರ್ಥಿಗಳು ರಜೆಯಲ್ಲಿ ಮನೆಗೆ ತೆರಳಿದ್ದಾರೆ. ಯಾರೋ ಕೆಲವರು ತಮಾಷೆಗಾಗಿ ಇಂತಹ ಕುಚೇಷ್ಠೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.