Advertisement

ಘೋಷಣೆಗಷ್ಟೇ ಅಡಿಕೆ ಬೆಂಬಲ ಬೆಲೆ: ರೈತ ಸಂತ್ರಸ್ತ

03:12 PM Mar 13, 2017 | |

ಪುತ್ತೂರು : ಅಡಿಕೆ ಧಾರಣೆ ಏರಿಳಿತದ ಮಧ್ಯೆ ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಡಿಸೆಂಬರ್‌ನಲ್ಲಿ ಹೊಸ ಚಾಲಿ ಅಡಿಕೆ ಖರೀದಿಗೆ ಬೆಂಬಲ ಬೆಲೆ ಘೋಷಿಸಿತ್ತು. ಆದರೆ ಈ ತನಕ ಬೆಳೆಗಾರನಿಗೆ ನಯಾ ಪೈಸೆ ಬೆಂಬಲ ಬೆಲೆ ಸಿಕ್ಕಿಲ್ಲ. ಖರೀದಿ ಗಡುವು ವಿಸ್ತರಣೆಯೂ ಆಗಿಲ್ಲ.

Advertisement

ಪುತ್ತೂರು-ಸುಳ್ಯ, ಬೆಳ್ತಂಗಡಿ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ದರ ಕುಸಿತದಿಂದಲೂ ಜನ ಕಂಗಾಲಾಗಿದ್ದರು. ಈ ಸಂದರ್ಭದಲ್ಲೇ ಡಿ. 9 ಕ್ಕೆ ಕೇಂದ್ರ ಸರಕಾರ ಕೆಂಪಡಿಕೆ ಮತ್ತು ಚಾಲಿ ಅಡಿಕೆ ಸೇರಿ 40,000 ಟನ್‌ ಅಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಪ್ರಕಟಿಸಿತ್ತು. ಅದಕ್ಕಾಗಿ 161 ಕೋ.ರೂ. ಬಿಡುಗಡೆಗೊಳಿಸಿರುವುದಾಗಿ ಮತ್ತು ಪ್ರತಿ ಕೆ.ಜಿ. ಚಾಲಿ ಅಡಿಕೆಗೆ 251 ರೂ. ನೀಡಿ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಸುವುದಾಗಿ ಹೇಳಿತ್ತು. ಖರೀದಿಗೆ ಡಿಸೆಂಬರ್‌ 31 ಅನ್ನು ಕಡೆಯ ದಿನವೆಂದು ನಿಗದಿಪಡಿಸಿತ್ತು. ಆದರೆ ಅಂತಿಮ ದಿನದ ಗಡುವು ದಾಟಿದರೂ ಬೆಂಬಲ ಬೆಲೆ ಸಿಗಲಿಲ್ಲ. ಅನಂತರ ದಿನಾಂಕ ವಿಸ್ತರಿಸುವ ಭರವಸೆ ಸಿಕ್ಕಿದ್ದರೂ, ಅದೂ ಈಡೇರಿಲ್ಲ. ಹೀಗಾಗಿ ಬೆಂಬಲ ಬೆಲೆ ಬರೀ ಘೋಷಣೆಗಷ್ಟೇ ಎಂದು ದೂರುತ್ತಿದ್ದಾರ ಅಡಿಕೆ ಬೆಳೆಗಾರರು.

ನಂಬಿ ಕೆಟ್ಟ ಬೆಳೆಗಾರ
ಮಾರುಕಟ್ಟೆಯಲ್ಲಿ ನವೆಂಬರ್‌-ಡಿಸೆಂಬರ್‌ ನಲ್ಲಿ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶಿಸುತ್ತದೆ. ಜನವರಿ ಅನಂತರ ಹಳೆ ಅಡಿಕೆಯಾಗಿ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತದೆ. ಉಳಿದಂತೆ ಸಿಂಗಲ್‌ ಚೋಲ್‌, ಡಬ್ಬಲ್‌ ಚೋಲ್‌ ಅಡಿಕೆಗೆ ಮಾರುಕಟ್ಟೆಯಲ್ಲಿ ಪ್ರತ್ಯೇಕ ಧಾರಣೆ ಇರುತ್ತದೆ. ಈ ವರ್ಷ ಆರಂಭದಲ್ಲಿ ಹೊಸ ಅಡಿಕೆಗೆ 150-170 ರೂ. ಧಾರಣೆ ಇತ್ತು. ಆ ಸಂದರ್ಭ ಈ ಬೆಂಬಲ ಬೆಲೆ ನೀಡಿ ಅಡಿಕೆ ಖರೀದಿಸುತ್ತಿದ್ದರೆ ಬೆಳೆಗಾರರಿಗೆ ಅನುಕೂಲವಾಗುತಿತ್ತು. ಹೊಸ ಅಡಿಕೆ ಧಾರಣೆ 220 ರೂ. ಇದ್ದು, ಮಾರುಕಟ್ಟೆ ಮೂಲ ಪ್ರಕಾರ ಇನ್ನೂ ಏರಲಿದೆ. ಇನ್ನು ಬರುವ ಅಡಿಕೆಯೆಲ್ಲ ಹಳತೇ. ಈಗಾಗಲೇ ಹಳೆ ಅಡಿಕೆ ಧಾರಣೆ 270 ಆಸುಪಾಸಿನಲ್ಲಿರುವ ಕಾರಣ, ಸರಕಾರ 251 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಿದರೆ ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಈಗಲೂ ಕಾಲ ಮಿಂಚಿಲ್ಲ
ಹಳೆ ಅಡಿಕೆಗೆ ಬೆಂಬಲ ಬೆಲೆ ನೀಡಿ ಬೆಳೆಗಾರನ ಕಷ್ಟಕ್ಕೆ ಸ್ಪ$ಂದಿಸಲು ಈಗಲೂ ಕಾಲ ಮಿಂಚಿಲ್ಲ. ನಮ್ಮ ಬೇಡಿಕೆಯಂತೆ ಹಳೆ ಅಡಿಕೆಗೆ ಕೆ.ಜಿ.ಗೆ 316 ರೂ. ಬೆಂಬಲ ಬೆಲೆ ನೀಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಆಗ ಬೆಳೆದವರಿಗೂ ನ್ಯಾಯ ಸಿಗುತ್ತದೆ ಎನ್ನುತ್ತಾರೆ ಬೆಳೆಗಾರರು.
ಕೇರಳದ ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಡಿಕೆ ಉತ್ಪಾ$ದನಾ ವೆಚ್ಚವನ್ನು ಕೆ.ಜಿ.ಗೆ 182 ರೂ. ಎಂದು ನಮೂದಿಸಿತ್ತು. ಆದರೆ ಬೆಳೆಗಾರರು ಹೇಳುವ ಪ್ರಕಾರ, ಕನಿಷ್ಠ 350 ರೂ. ತಗಲುತ್ತದೆ. ಎರಡು ವರ್ಷದ ಹಿಂದೆ ರೈತ ವಿಜಾnನಿಗಳು ನಡೆಸಿದ ಸಂಶೋಧನೆ ಪ್ರಕಾರ 316.15 ರೂ. ಗಳಿತ್ತು. ಹೀಗಿದ್ದರೂ ತಳಮಟ್ಟದಲ್ಲಿ ಅಧ್ಯಯನ ಮಾಡದೆ ಸಲ್ಲಿಸಿದ ವರದಿ ನೀಡಲಾಗಿದೆ ಎಂಬುದು ಬೆಳೆಗಾರರ ಆರೋಪ.

ಅಡಿಕೆಗೆ ಸ್ಥಿರ ಧಾರಣೆ ಇಲ್ಲ. ಅದರ ಬೆಳೆಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳ ಧಾರಣೆ ದುಬಾರಿಯಾಗಿದೆ. ಔಷಧ ಪದಾರ್ಥಗಳ ಧಾರಣೆ ಗಗನಕ್ಕೇರುತ್ತಿದೆ. ಕೊಳೆರೋಗ, ಹಳದಿರೋಗದಂತಹ ಸಾಲು-ಸಾಲು ರೋಗಳು ಬಾಧಿಸುತ್ತಲೇ ಇವೆ. ಇದಕ್ಕೆ ಪರಿಹಾರ ಹುಡುಕುತ್ತಿಲ್ಲ. ಅಡಿಕೆ ಮಂಡಳಿ ಸ್ಥಾಪನೆಗೂ ಪ್ರಯತ್ನ ಆಗಿಲ್ಲ ಎಂಬುದು ಬೆಳೆಗಾರರ ದೂರು.

Advertisement

ಈ ಹಿಂದೆ ಸ್ವಾಮಿನಾಥನ್‌ ಆಯೋಗ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಪ್ರತಿ ಬೆಳೆಯ ಉತ್ಪಾ$ದನ ವೆಚ್ಚಕ್ಕಿಂತ ಒಂದೂವರೆ ಪಟ್ಟು ಅಧಿಕ ಮಾರುಕಟ್ಟೆ ಬೆಲೆ ನಿಗದಿ ಆಗಬೇಕು ಎಂದಿತ್ತು. ಅದರಂತೆ ಇಲ್ಲಿ 350 ರೂ. ಉತ್ಪಾ$ದನಾ ವೆಚ್ಚವಾಗಿದ್ದು, ಮಾರುಕಟ್ಟೆಯಲ್ಲಿ ಅದರ ಒಂದುವರೆ ಪಟ್ಟು ಧಾರಣೆ ಕೊಟ್ಟು ಅಡಿಕೆ ಖರೀದಿಸಬೇಕು ಎನ್ನುತ್ತಾರೆ ಬೆಳೆಗಾರರು.

ಭರವಸೆ ಈಡೇರಲಿಲ್ಲ
ಖರೀದಿಗೆ ಡಿಸೆಂಬರ್‌ 31 ಅನ್ನು ಕಡೆಯ ದಿನವೆಂದು ನಿಗದಿಪಡಿಸಿತ್ತು. ಆದರೆ ಅಂತಿಮ ದಿನದ ಗಡುವು ದಾಟಿದರೂ ಬೆಂಬಲ ಬೆಲೆ ಸಿಗಲಿಲ್ಲ. ಅನಂತರ ದಿನಾಂಕ ವಿಸ್ತರಿಸುವ ಭರವಸೆ ಸಿಕ್ಕಿದ್ದರೂ, ಅದೂ ಈಡೇರಿಲ್ಲ. ಹೀಗಾಗಿ ಬೆಂಬಲ ಬೆಲೆ ಬರೀ ಘೋಷಣೆಗಷ್ಟೇ ಎಂದು ದೂರುತ್ತಿದ್ದಾರ ಅಡಿಕೆ ಬೆಳೆಗಾರರು.

ಪರಸ್ಪರ ಆರೋಪ
ಕೇಂದ್ರ ಸರಕಾರ ಘೋಷಿಸಿದ ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿ ಪ್ರಕ್ರಿಯೆ ಕೊನೆ ದಿನಾಂಕ ಕಳೆದರೂ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಂದ್ರ ಸರಕಾರವು ರಾಜ್ಯ ಸರಕಾರದ ವೈಫ‌‌ಲ್ಯ ಅಂದರೆ, ರಾಜ್ಯ ಸರಕಾರ ಕೇಂದ್ರ ಸರಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿತ್ತು. ಕೇಂದ್ರ ವಾಣಿಜ್ಯ ಸಚಿವರು, ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಯ ಅಂತಿಮ ದಿನ ವಿಸ್ತರಣೆಗೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಸೂಚನೆ ನೀಡುವ ಭರವಸೆ ನೀಡಿದ್ದರು. ಆ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ.

ಹಣ ಎಲ್ಲಿ ಹೋಯಿತು? 
ಚಾಲಿ ಅಡಿಕೆ ಮತ್ತು ಕೆಂಪಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರಕಾರ 161 ಕೋ.ರೂ. ಹಣ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆ ಹಣ ಎಲ್ಲಿ ಹೋಯಿತು. ಹೊಸ ಅಡಿಕೆಗೆ 251 ರೂ. ಧಾರಣೆ ನೀಡಿ ಖರೀದಿಸುವ ಭರವಸೆಯೂ ಈಡೇರಿಲ್ಲ. ಇಲ್ಲಿಯ ತನಕ ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಸಿಲ್ಲ.
– ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ
ರಾಜ್ಯ ಕಾರ್ಯದರ್ಶಿ, ರೈತಸಂಘ ಮತ್ತು ಹಸಿರುಸೇನೆ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next