ಕಾರ್ಯಕರ್ತರು ಸಂಸದ ಬಿ.ಎಸ್. ಯಡಿಯೂರಪ್ಪ ಅವರಿಗೆ ಘೆರಾವ್ ಹಾಕಿ ಘೋಷಣೆ ಕೂಗಿ ಪ್ರತಿಭಟಿಸಿದರು.
Advertisement
ಪಟ್ಟಣದ ಮಾಳರಕೇರಿಯಲ್ಲಿನ ಯಡಿಯೂರಪ್ಪನವರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಯುವ ಕಾಂಗ್ರೆಸ್ಕಾಯಕರ್ತರನ್ನು ಮಾರ್ಗಮಧ್ಯದಲ್ಲಿ ಪೊಲೀಸರು ತಡೆದರು. ಈ ಸಂಧರ್ಭದಲ್ಲಿ ಪ್ರತಿಭಟನಾಕಾರರ ಬಳಿ ಬಂದ
ಯಡಿಯೂರಪ್ಪರಿಗೆ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿರುವ ರೈತರ ಸಾಲ ಮನ್ನಾ ಮಾಡಿದೆ. ನಿಮ್ಮ ಪಕ್ಷ ಕೇಂದ್ರದಲ್ಲಿ
ಅ ಧಿಕಾರದಲ್ಲಿದ್ದು ನೀವು ಸಂಸದರೂ ಆಗಿದ್ದೀರಿ. ತಕ್ಷಣ ಪ್ರಧಾನಿ ಮೋದಿ ಅವರ ಮನವೊಲಿಸಿರೈತರ ಸಾಲಮನ್ನಾ ಮಾಡಿಸಬೇಕು. ರಾಜ್ಯದಲ್ಲಿರುವ ನಿಮ್ಮ ಪಕ್ಷದ ಎಲ್ಲಾ ಸಂಸದರ ನಿಯೋಗವನ್ನು ಕರೆದುಕೊಂಡು ಹೋಗಿ 3 ವರ್ಷದಿಂದ ಭೀಕರ ಬರಗಾಲವಿರುವ ರೈತರ ಪರಿಸ್ಥಿಯನ್ನು ಮನವರಿಕೆ ಮಾಡಿಸಿ ಸಾಲ ಮನ್ನಾ ಮಾಡಿಸಿ ಎಂದರು.
ದೇಶದ ರೈತರಿಗೆ ಅನ್ಯಾಯವಾಗುವಂತೆ ಮಾಡಿದ್ದೀರಿ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಸಾಲಮನ್ನಾ
ಮಾಡಿದ್ದರು ಎಂದರು. ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಯಡಿಯೂರಪ್ಪ ಈ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ
ನೀಡಿದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ , ಪುರಭಾ ಸದಸ್ಯ ಮಹೇಶ್ ಹುಲ್ಮಾರ್, ದಾರವಾಡದ ಸುರೇಶ, ಹಳ್ಳುರು
ಪರಮೇಶ್ವರಪ್ಪ ಎಪಿಎಂಸಿ ಸದಸ್ಯ ನಗರದ ರವಿಕಿರಣ , ಸ.ನ ಮಂಜಪ್ಪ, ರಾಘವೇಂದ್ರ ನಾಯ್ಕ ಮತ್ತಿತರರು ಇದ್ದರು.