Advertisement

Ghaziabad: ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಯುವತಿಯ ಅಸಭ್ಯ ನೃತ್ಯ; ವಿಡಿಯೋ ವೈರಲ್

03:10 PM Dec 31, 2023 | Team Udayavani |

ಲಕ್ನೋ: ಬಿಜೆಪಿ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲಿ ಯುವತಿಯೊಬ್ಬಳು ಅಸಭ್ಯವಾಗಿ ಡ್ಯಾನ್ಸ್‌ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಭೋಜ್‌ಪುರ ಪ್ರದೇಶದ ಗಾಜಿಯಾಬಾದ್‌ನ ಮೋದಿನಗರ ಪ್ರದೇಶದಲ್ಲಿ ನಡೆದ ಬಿಜೆಪಿಯ ʼವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ವೇದಿಕೆಯಲ್ಲಿ ಅಸಭ್ಯ ನೃತ್ಯದ ಪ್ರದರ್ಶನ ಆಗಿದೆ ಎನ್ನಲಾಗಿದೆ.

ಗಾಜಿಯಾಬಾದ್‌ನ ಭೋಜ್‌ಪುರದ ಶಕುರ್‌ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯಸ್ಥ ಮತ್ತು ಅವರ ಪತ್ನಿ, ಸ್ಥಳೀಯ ಶಾಸಕ ಮತ್ತು ಸಂಸದ ಸತ್ಯಪಾಲ್ ಸಿಂಗ್ ವೇದಿಕೆಯಲ್ಲಿದ್ದರು.

ನೂರಾರು ಮಂದಿ ಇದ್ದ ವೇಳೆಯೇ ಯುವತಿಯ ನೃತ್ಯ ಕಾರ್ಯಕ್ರಮವಿತ್ತು. ಅಸಭ್ಯ ರೀತಿಯ ನೃತ್ಯವನ್ನು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶಾಸಕ, ಸಂಸದ ಹಾಗೂ ಅತಿಥಿಗಳ ಸಮ್ಮುಖದಲ್ಲೇ ಈ ರೀತಿಯ ಅಸಭ್ಯ‌ ನೃತ್ಯ ಪ್ರದರ್ಶನ ಮಾಡಿದ್ದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ,  ವೇದಿಕೆಯಲ್ಲಿ ಅತಿಥಿಗಳು ಇದ್ದಾಗ ಈ ನೃತ್ಯ ಆಗಿಲ್ಲ ಎಂದು ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ.

Advertisement

ಕಾರ್ಯಕ್ರಮ ಸರಿಯಾದ ಪ್ರೋಟೋಕಾಲ್‌ಗಳೊಂದಿಗೆ ನಡೆದಿದೆ. ಅತಿಥಿಗಳು ಹೋದ ನಂತರವೇ ನೃತ್ಯ ಪ್ರದರ್ಶನ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next