Advertisement

Diwali ; ಖಾಸಗಿ ಅಂಗಕ್ಕೆ ಪಟಾಕಿ ತಗುಲಿ ಅನ್ಯ ಕೋಮಿನ ವ್ಯಕ್ತಿ ಮೃತ್ಯು

07:04 PM Nov 13, 2023 | Team Udayavani |

ಗಾಜಿಯಾಬಾದ್: ಇಲ್ಲಿನ ಝಂದಾಪುರ ಪ್ರದೇಶದಲ್ಲಿ ದೀಪಾವಳಿ ಸಂಭ್ರಮದ ಆಚರಣೆ ವೇಳೆ 40 ವರ್ಷದ ವ್ಯಕ್ತಿಯೊಬ್ಬ ಖಾಸಗಿ ಅಂಗಕ್ಕೆ ಪಾಟಾಕಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.

Advertisement

ಭಾನುವಾರ ದೀಪಾವಳಿಯ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಪ್ರದೀಪ್ ಎಂಬಾತ ಅಫ್ಜಲ್ ಅಲಿಯಾಸ್ ನಾಟು ಎಂಬಾತನ ಸೊಂಟದ ಕೆಳಗೆ ಕಬ್ಬಿಣದ ಪೈಪ್ ನಿಂದ ಪಟಾಕಿ ಸಿಡಿಸಿದ್ದಾನೆ. ಅಫ್ಜಲ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವನು ಸಾವನ್ನಪ್ಪಿದನು ಎಂದು ಸಾಹಿಬಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ಭಾಸ್ಕರ್ ವರ್ಮ ತಿಳಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಫ್ಜಲ್ ಮತ್ತು ಪ್ರದೀಪ್ ಪರಸ್ಪರ ಪರಿಚಿತರಾಗಿದ್ದರು ಎಂದು ವರ್ಮಾ ಹೇಳಿದ್ದಾರೆ. ಕೋಮು ಗಲಭೆ ತಡೆಯಲು ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next