Advertisement

ಘಾಟ್‌ಕೋಪರ್‌ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರ: ಬ್ರಹ್ಮಕಲಶೋತ್ಸವ

04:40 PM Jun 05, 2017 | Team Udayavani |

ಮುಂಬಯಿ: ಘಾಟ್‌ಕೋಪರ್‌ ಪಶ್ಚಿಮದ ಅಸಲ್ಪ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದಲ್ಲಿ  ಬ್ರಹ್ಮಕಲಶೋತ್ಸವವು ಶಂಕರ ನಾರಾಯಣ ತಂತ್ರಿ ಡೊಂಬಿವಲಿ ಅವರ ಪೌರೋಹಿತ್ಯದಲ್ಲಿ ಹಾಗೂ ಮಂದಿರದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರ ನೇತೃತ್ವದಲ್ಲಿ  ನೆರವೇರಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಸಾಮೂಹಿಕ ಪ್ರಾರ್ಥನೆ, ಆದ್ಯ ಗಣಯಾಗ, ತೋರಣ ಮುಹೂರ್ತ, ಪರಿವಾರ ದೇವತೆಗಳ ನವಕ ಕಲಶ ಹಾಗೂ ಶ್ರೀ ದೇವಿಗೆ 25 ಕಲಶ ಪೂರಣ ಹಾಗೂ ಶ್ರೀ ದೇವಿಗೆ ಪ್ರಧಾನ ಹೋಮ, ಪ್ರಧಾನ ಕಲಶಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. 

ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.

ಸಂಜೆ ಕುಮಾರ ಸ್ವಾಮಿಯವರಿಂದ ಶ್ರೀ ದೇವಿ ದರ್ಶನ, ರಂಗಪೂಜೆ, ಕುಂಟಾಡಿ ಸುರೇಶ್‌ ಭಟ್‌ ಅವರಿಂದ ಬಲಿ ಉತ್ಸವ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯವರಿಂದ ಗಂಗಾಧರ ಪಯ್ಯಡೆ ಅವರ ಪ್ರಾಯೋಜಕತ್ವದಲ್ಲಿ ದಿ| ರಮಾನಾಥ ಪಯ್ಯಡೆ ಅವರ ಸಂಸ್ಮರಣೆಯಲ್ಲಿ ಶ್ರೀ ರಾಮ ದರ್ಶನ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ  ಜೀವನದ 60 ಸಂವತ್ಸರ  ಪೂರೈಸಿ ಷಷ್ಠÂಬ್ಧ ಮಹೋತ್ಸವವನ್ನು ಆಚರಿಸಿಕೊಂಡ ಉದ್ಯಮಿ ದಿವಾಕರ ಶೆಟ್ಟಿ ಮುದ್ರಾಡಿ ಮತ್ತು ಮೀರಾ ದಿವಾಕರ ಶೆಟ್ಟಿ ಅವರನ್ನು  ಗೌರವಿಸಲಾಯಿತು. ಉತ್ಸವದಲ್ಲಿ ಮಂದಿರದ ವತಿಯಿಂದ ಭಜನ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

Advertisement

ಭಜನ ಗುರುಗಳಾದ ನಾಗೇಶ್‌ ಸುವರ್ಣ ಎರ್ಮಾಳ್‌, ನಿತ್ಯಪ್ರಕಾಶ್‌ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. 

ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷ ಮುದ್ರಾಡಿ ದಿವಾಕರ ಶೆಟ್ಟಿ, ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ, ಪದಾಧಿಕಾರಿಗಳಾದ ಧರ್ಮಪಾಲ್‌ ಕೋಟ್ಯಾನ್‌, ಸತೀಶ್‌ ಶೆಟ್ಟಿ, ವಿಕ್ರಮ್‌ ಸುವರ್ಣ, ಜಯರಾಮ ರೈ, ಸುರೇಶ್‌ ಕೋಟ್ಯಾನ್‌, ಸುಧಾಕರ ಶೆಟ್ಟಿ, ಕೃಷ್ಣ ಅಮೀನ್‌, ಪ್ರಭಾಕರ ಕುಂದರ್‌, ಸುನಿಲ್‌ ಅಮೀನ್‌ ಹಾಗೂ ಭಜನ ಸಮಿತಿಯ, ಪೂಜಾ ಸಮಿತಿ, ಮಹಿಳಾ ವಿಭಾಗದ 
ಸದಸ್ಯರು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಸಾಧಕರು, ತುಳು-ಕನ್ನಡಿಗ ಭಕ್ತಾದಿಗಳು, ಇನ್ನಿತರ ಭಾಷಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next