Advertisement

ಘಾಟ್‌ಕೋಪರ್‌ ಕನ್ನಡ ವೆಲ್‌ಫೇರ್‌ ಸೊಸೈಟಿ: ಸ್ವಾತಂತ್ರ್ಯ ದಿನಾಚರಣೆ

03:51 PM Aug 16, 2018 | |

ಮುಂಬಯಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ವತಿಯಿಂದ 72ನೇ ಸ್ವಾತಂತ್ರೊÂàತ್ಸವ ಆಚರಣೆಯು ಆ. 15 ರಂದು ಬೆಳಗ್ಗೆ ಸಂಸ್ಥೆಯ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ನಡೆಯಿತು.

Advertisement

ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಇವರು ಧ್ವಜಾ ರೋಹಣಗೈದು ಧ್ವಜವಂದನೆ ಸ್ವೀಕರಿಸಿ ದರು. ಆನಂತರ ಪ್ರಾರ್ಥನೆ, ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯುವ ವಿಭಾ ಗದ ಕಾರ್ಯಾಧ್ಯಕ್ಷೆ ಪ್ರಿಯಾ ಶೆಟ್ಟಿ, ಸುಪ್ರಿಯಾ ಎಸ್‌. ಶೆಟ್ಟಿ, ರಿಯಾ ಎನ್‌. ಶೆಟ್ಟಿ ಮೊದಲಾದವರು ಸ್ವಾತಂತ್ರÂ ದಿನಾ ಚರಣೆಯ ಮಹತ್ವವನ್ನು ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಜಯರಾಜ್‌ ಜೈನ್‌ ಅವರು ಮಾತನಾಡಿ, ಸ್ವತಂತ್ರ ಭಾರತದಲ್ಲಿ ಇನ್ನೂ ಭಾರತೀಯರ ಸಮಸ್ಯೆಗಳು ಪರಿಹಾರವಾಗದೆ ಅಲ್ಲಲ್ಲಿ ಅತೃಪ್ತ ಜನರು ಸಮಾಜದ ವಿರೋಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯುವ ಜನನತೆ ಸ್ವಾತಂತ್ರÂದ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ನುಡಿದರು.

ರಂಗಕರ್ಮಿ, ರಂಗನಿರ್ದೇಶಕ ನಂದಳಿಕೆ ನಾರಾಯಣ ಶೆಟ್ಟಿ ಅವರು ಮಾತನಾಡಿ, ಬ್ರಿಟಷರ ದಾಸ್ಯದಿಂದ ಮುಕ್ತರಾಗಲು ಹೋರಾಡಿದವರನ್ನು, ಅವರ ತ್ಯಾಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಯುವಪೀಳಿಗೆಗೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ ಅವರು  ಮಾತನಾಡಿ ಶುಭಹಾರೈಸಿದರು.

ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಮಾತನಾಡಿ, ಸಂಘದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ನಾವು ಹಮ್ಮಿಕೊಂಡ ಯೋಜನೆಗಳ ಯಶಸ್ಸಿಗೆ ಎಲ್ಲರ ಸಹಕಾರದ ಅಗತ್ಯವಿದೆ. ಸಂಘದ ಯುವ ವಿಭಾಗವು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

Advertisement

ಯುವ ಜನತೆ ಸಮಾಜ ಸೇವೆಯೊಂದಿಗೆ ದೇಶ ಸೇವೆಯಲ್ಲಿ ತೊಡಗಿದಾಗ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯ ವಿಲ್ಲ ಎಂದು ನುಡಿದರು.

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಾಧಾಕೃಷ್ಣ ಶೆಟ್ಟಿ, ಹರೀಶ್‌ ಶೆಟ್ಟಿ, ರಮಾನಂದ ಶೆಟ್ಟಿ, ಪೀಟರ್‌ ರೋಡ್ರಿಗಸ್‌, ತಿಮ್ಮ ದೇವಾಡಿಗ, ಹಿರಿಯಣ್ಣ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ, ಸದಸ್ಯರುಗಳಾದ ಪ್ರಮೀಳಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಡಾ| ಪಲ್ಲವಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next