Advertisement

ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿ ಸುವರ್ಣ ಸಂಭ್ರಮ

03:48 PM Sep 09, 2018 | Team Udayavani |

ಮುಂಬಯಿ: ಕನ್ನಡ ವೆಲ್ಫೆàರ್‌ ಸೊಸೈಟಿ ಪಂತ್‌ನಗರ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವದ  ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತುಳು- ಕನ್ನಡಿಗರಾದ ಹಿರಿಯರು ಸಮಾಜದ ಸಂಘಟನೆಗಾಗಿ ಕಳೆದ 50 ವರ್ಷಗಳ ಹಿಂದೆ ಸ್ಥಾಪಿಸಿದ ಈ ಸಂಸ್ಥೆಯು ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ನಮ ಗೆಲ್ಲರಿಗೂ ಸಂತೋಷ ಹಾಗೂ ಗೌರವ- ಅಭಿಮಾನದ ವಿಷಯ ವಾಗಿದೆ. ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು, ಡಿಸೆಂಬರ್‌ನಲ್ಲಿ ಸುವರ್ಣ ಮಹೋ ತ್ಸವ ಸಂಭ್ರಮವು ಜರಗಲಿದೆ. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಉದ್ಯಮಿ, ಕನ್ನಡ ವೆಲ್ಫೆàರ್‌ ಸೊಸೈಟಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ ಅವರು ನುಡಿದರು.

Advertisement

ಸೆ. 6ರಂದು ಘಾಟ್‌ಕೋಪರ್‌ ಪೂರ್ವದ ಕನ್ನಡ ವೆಲ್ಫೆàರ್‌ ಸೊಸೈ ಟಿಯ ವತಿಯಿಂದ ಸಂಸ್ಥೆಯ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸಭಾಗೃಹದಲ್ಲಿ ಕಲಾಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ಊರಿನ ಪ್ರಸಿದ್ಧ ಕಲಾವಿದರ ಕೂಡು ವಿಕೆಯಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಹಾಗೂ ಸುವರ್ಣ ಮಹೋತ್ಸವದ ಮನವಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಕನ್ನಡಿಗರಾದ ನಾವು ಮುಂಬಯಿಗೆ ಬಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಆ ಮೂಲಕ ನಾವು ನಮ್ಮ ಕಲೆ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ್ದೇವೆ. ಹಿರಿಯರು ಸಂಘಟನೆಯ ಮೂಲಕ ಸಮಾಜ ಸೇವೆಯ ದಾರಿಯನ್ನು ತೋರಿಸಿದರೂ, ಇಂತಹ ಸಂಘಟನೆಗಳಲ್ಲೊಂದಾದ ಕನ್ನಡ ವೆಲ್ಫೆàರ್‌ ಸೊಸೈಟಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರು ವುದು ಅಭಿನಂದನೀಯ. ಇದಕ್ಕೆ ಎಲ್ಲರ ಸಹಕಾರ ಇದೆ ಎಂದರು.

ಇನ್ನೋರ್ವ ಅತಿಥಿ ಬಂಟರ ಸಂಘ ಮುಂಬಯಿ ಇದರ ಪಶ್ಚಿಮ ಪ್ರಾದೇಶಿಕ ವಲಯ ಸಮನ್ವಯಕರಾದ ಡಾ| ಪ್ರಭಾಕರ ಶೆಟ್ಟಿ ಬೋಳ ಅವರು ಮಾತನಾಡಿ, ಘಾಟ್‌ಕೋಪರ್‌ ಪಂತ್‌ನಗರದಲ್ಲಿ ಅತ್ಯಂತ ಹಿರಿಯ ಸಂಘಟನೆಯಾದ ಕನ್ನಡ ವೆಲ್ಫೆàರ್‌ ಸೊಸೈಟಿಯು ಇಲ್ಲಿ ತುಳು-ಕನ್ನಡಿಗರಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಅನೇಕ ಮಹನೀಯರು ಈ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಈ ಸಂಸ್ಥೆಗೆ ನನ್ನಿಂದಾದ ಸಹಕಾರವನ್ನು ಸದಾ ನೀಡುತ್ತೇನೆ ಎಂದರು.

ವೇದಿಕೆಯಲ್ಲಿ ಬಂಟರ ಸಂಘ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ್‌ ಭಂಡಾರಿ, ಉದ್ಯಮಿ, ಕಲಾಪೋಷಕ ಶಿವಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಮಾತನಾಡಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಅನೇಕ ಹಿರಿಯ ಗಣ್ಯರು  ಆಗಮಿಸಲಿದ್ದು,  ಈ ಸಂಭ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ನುಡಿದರು.

Advertisement

ಪ್ರಾರಂಭದಲ್ಲಿ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀಣಾ ಶೆಟ್ಟಿ ಪ್ರಾರ್ಥನೆಗೈದರು. ರಂಗನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ ಅವರು ಕಾರ್ಯಕ್ರಮ ನಿರ್ವಹಿಸಿದರು. 

ವೇದಿಕೆಯಲ್ಲಿ ಗೌರವ ಕೋಶಾಧಿ ಕಾರಿ ಹರಿಣಿ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಜಯರಾಜ್‌ ಜೈನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಉಪಸ್ಥಿತರಿದ್ದರು. 

ಚಿತ್ರ-ವರದಿ : ಸುಭಾಸ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next