Advertisement

ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿ: ಸುವರ್ಣ ಮಹೋತ್ಸವ ಸಂಭ್ರಮ

04:01 PM Dec 11, 2018 | Team Udayavani |

ಮುಂಬಯಿ: ದೂರದ ಮರಾಠಿ ಮಣ್ಣಿನಲ್ಲಿ ಸಂಸ್ಥೆಯೊಂದು ಐವತ್ತು ದಶಕ ಗಳನ್ನು ಪೂರೈಸುವುದು ಸಾಮಾನ್ಯ ಮಾತಲ್ಲ. ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ. ಸಮಾಜದ ಮಧ್ಯೆ ಯಾವ ರೀತಿಯಲ್ಲಿ, ಹೇಗೆ ಬದುಕಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ಸಂಘ- ಸಂಸ್ಥೆಗಳು ಸ್ಥಾಪನೆಯಾಗುವುದು ಮುಖ್ಯವಲ್ಲ, ಅದನ್ನು ನಡೆಸಿಕೊಂಡು ಹೋಗುವ ರೀತಿ ಮುಖ್ಯ ವಾಗುತ್ತದೆ. ಜೀವನದಲ್ಲಿ ಸತ್ಕರ್ಮಗಳನ್ನು ಮಾಡಿದಾಗ ಜನ ನಮ್ಮನ್ನು ಗುರುತಿಸುತ್ತಾರೆ. ಸಂಘ- ಸಂಸ್ಥೆಗಳು ಅನ್ಯರ ಕಣ್ಣೀರೊರೆಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿಯವರು ನುಡಿದರು.
ಇಂದಿನ ಸಮಾರಂಭ ಕಂಡಾಗ ಬಹಳ ಸಂತೋಷವಾಗುತ್ತಿದೆ. ಕನ್ನಡ ವೆಲ್ಫೆàರ್‌ ಸೊಸೈ ಟಿಯ ಮುಖಾಂತರ ಬಂಗಾರದ ಪುಷ್ಪವೊಂದು ಅರಳಿದಂತಾಗಿದೆ. ಸಂಸ್ಥೆಯಿಂದ ಇನ್ನಷ್ಟು ಸಾಮಾ ಜಿಕ, ಕನ್ನಡಪರ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಈ ಬಂಗಾರದ ಪುಷ್ಪವು ಎಲ್ಲೆಡೆ ತನ್ನ ಸುಗಂಧವನ್ನು ಬೀರುವಂತಾಗಲಿ ಎಂದರು.

Advertisement

ಡಿ. 8 ರಂದು ಪೂರ್ವಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಯಲ್ಲಿ ಭಾವನೆಗಳು ತುಂಬಿರುತ್ತವೆ. ಇಂದು ಅನ್ಯ ಭಾಷೆಯ ವ್ಯಾಮೋಹದಿಂದ ನಮ್ಮ ಮಾತೃ ಭಾಷೆಯು ಮಾಯವಾಗುತ್ತಿದೆ. ಭಾಷೆಯನ್ನು ಉಳಿಸಿ-ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಕನ್ನಡ ವೆಲ್ಫೆàರ್‌ ಸೊಸೈಟಿಯಂತಹ ಸಂಸ್ಥೆಗಳಿಂದ ಅದು ಸಾಧ್ಯವಿದೆ. ಸಂಸ್ಥೆಯಿಂದ ಇನ್ನಷ್ಟು ಕನ್ನಡಪ ರ ಕಾರ್ಯಕ್ರಮಗಳು ನಡೆದು ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳು ಬೆಳೆಯುವಂತಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮೊಗ ವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಅಜಿತ್‌ ಸುವರ್ಣ ಅವರು ಮಾತನಾಡಿ, ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ನಗರದ ಹೆಚ್ಚಿನ ಸಂಘಟನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಸಂಸ್ಥೆಯನ್ನು ಅರ್ಥಪೂರ್ಣವಾಗಿ ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಉತ್ತಮ ಕಾರ್ಯಚಟುವಟಿಕೆಗಳಿಂದ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ನುಡಿದು ಶುಭಕೋರಿದರು.
ಅತಿಥಿಯಾಗಿ ಪಾಲ್ಗೊಂಡ ಕನ್ನಡಿಗ ಪತ್ರ ಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರ ಶೇಖರ ಪಾಲೆತ್ತಾಡಿ ಇವರು ಮಾತನಾಡಿ, ಮುಂಬಯಿ ಮಹಾನಗರದಲ್ಲಿ ಕನ್ನಡಿಗರ ಸಂಘ-ಸಂಸ್ಥೆಗಳು, ರಜತ, ಸುವರ್ಣ, ವಜ್ರ, ಶತಮಾನೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದೊಂದು ಕನ್ನಡಿಗರು ಸಂಭ್ರಮಿಸುವ ಕಾರ್ಯಕ್ರಮವಾಗಿದೆ. ಸುವರ್ಣ ಮಹೋತ್ಸವದೊಂದಿಗೆ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಅಭಿನಂದನೀಯ. ಭವಿಷ್ಯದಲ್ಲೂ ಸಂಸ್ಥೆಯಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಲಿ. ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರ ಸುವರ್ಣ ಮಹೋತ್ಸವದ ಯೋಜನೆಗಳ ಕನಸು ನನಸಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಉದ್ಯಮಿ, ದಾನಿ ಶಿವಣ್ಣ ಶೆಟ್ಟಿ ಮತ್ತು ನಿವೃತ್ತ ಶಿಕ್ಷಕ ಸದಾಶಿವ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ಪ್ರಭಾಕೋಡು ಭೋಜ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ| ಜಿ. ಡಿ. ಜೋಶಿ ಅವರಿಗೆ 10 ಸಾವಿರ ರೂ. ನಗದಿನೊಂದಿಗೆ ಪ್ರದಾನಿಸಲಾಯಿತು. ಘಾಟ್‌ಕೋಪರ್‌ ನಗರ ಸೇವಕಿ ರಾಖೀ ಜಾಧವ್‌ ಸಾಲ್ಯಾನ್‌ ಅವರು ತೆಂಗಿನ ಗರಿಯನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿವಿಧ ಸಂಘ-ಸಂಸ್ಥೆಗಳಿಗೆ ಆಯೋಜಿಸಿದ ನೃತ್ಯ ಸ್ಪರ್ಧೆಯನ್ನು ನಂದಳಿಕೆ ನಾರಾಯಣ ಶೆಟ್ಟಿ ಮತ್ತು ಸುಚಿತ್ರಾ ಭಾಗ್ಯಪ್ರಸಾದ್‌ ಅವರು ನಿರ್ವಹಿಸಿದರು. ಕನ್ನಡ ವೆಲ್ಫೆàರ್‌ ಸೊಸೈಟಿಯ ವೀಣಾ ಶೆಟ್ಟಿ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಸ್ವಾಗತಿಸಿದರು.

Advertisement

ವೇದಿಕೆಯಲ್ಲಿ ವಸಾಯಿ-ಡಹಾಣೂ ಬಂಟ್ಸ್‌ ನ ಸಂಚಾಲಕ ಶಶಿಧರ ಶೆಟ್ಟಿ, ಕನ್ನಡ ವೆಲ್ಫೆàರ್‌ ಸೊಸೈ ಟಿಯ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಕನ್ನಡ ವೆಲ್ಫೆàರ್‌ ಸೊಸೈಟಿಯ ಉಪಾಧ್ಯಕ್ಷ ಜಯರಾಜ್‌ ಜೈನ್‌, ಗೌರವ ಕೋಶಾಧಿಕಾರಿ ಹರೀಶ್‌ ಎಂ. ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜತೆ ಕೋಶಾಧಿ ಕಾರಿ ಪೀಟರ್‌ ರೋಡ್ರಿಗಸ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಂಟರವಾಣಿಯ     ಗೌರವ ಪ್ರಧಾನ ಸಂಪಾ ದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ  ನಾರಾಯಣ ಶೆಟ್ಟಿ ನಂದಳಿಕೆ, ಲೋಕು ಪೂಜಾರಿ, ರಾಧಾಕೃಷ್ಣ ಶೆಟ್ಟಿ,. ಸಂಜೀವ ಎ. ಮೆಂಡನ್‌, ಚಂದ್ರಶೇಖರ ಶೆಟ್ಟಿ, ರಘುನಾಥ ಎನ್‌. ಶೆಟ್ಟಿ, ಸುರೇಶ್‌ ಎ. ಶೆಟ್ಟಿ, ಸುರೇಶ್‌, ವಿದ್ಯಾ ಎಚ್‌. ಶೇಟೆÂ, ಸುಭಾಶ್‌ ಶಿರಿಯಾ, ತಿಮ್ಮ ಎಸ್‌. ದೇವಾಡಿಗ, ರವೀಂದ್ರ ಕೆ. ಅಮೀನ್‌, ಪ್ರಕಾಶ್‌ ಶೆಟ್ಟಿ ಸುರತ್ಕಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎನ್‌. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 ಹೊಟ್ಟೆಪಾಡಿಗಾಗಿ ಊರಿನಿಂದ ಬಂದು ಸಂಘವನ್ನು ಕಟ್ಟಿ ಅದನ್ನು 50 ವರ್ಷಗಳಿಂದ ಮುನ್ನಡೆಸುತ್ತಿರುವುದು ಬಹುದೊಡ್ಡ ಸಾಧನೆಯಾಗಿದೆ. ಸಂಘವನ್ನು ಸ್ಥಾಪಿಸಿ ಅದರ ಯಶಸ್ಸಿನಲ್ಲಿ ಪಾಲು ಪಡೆದವರು ಅಭಿನಂದನೀಯರು. ತುಳು-ಕನ್ನಡಿಗರು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಅನ್ಯೋನ್ಯತೆಯಿಂದ ಬಾಳುತ್ತಿರುವುದು ಅಭಿನಂದನೀಯ. ಇಲ್ಲಿನ ಸಂಘಟನೆಗಳು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿವೆ.
 ಐಕಳ ಹರೀಶ್‌ ಶೆಟ್ಟಿ, ಅಧ್ಯಕ್ಷರು,ಜಾಗತಿಕ ಬಂಟರ ಸಂಘಗಳ ಒಕ್ಕೂಟ

 ಸಂಸ್ಥೆಯೊಂದು ಸುವರ್ಣ ಮಹೋತ್ಸವವನ್ನು ಆಚರಿ ಸುತ್ತಿದೆ ಎಂದರೆ ಅದು ಬಲಿಷ್ಟ ಸಂಘಟ ನೆಯಾಗಿ ಬೆಳೆದಿದೆ ಎಂದರ್ಥ. ನಾವೆಲ್ಲರು ಒಗ್ಗಟ್ಟಿನಿಂದ ಜಾತಿ, ಮತ, ಭೇದವಿಲ್ಲದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸನಾತನ ಧರ್ಮವನ್ನು ಉಳಿಸುವುದರ ಜೊತೆಗೆ ಯುವ ಪೀಳಿಗೆಗೆ ಧರ್ಮದ ವೈಶಿಷ್ಟéವನ್ನು ತಿಳಿಯಪಡಿಸಬೇಕಾದ ಅನಿವಾರ್ಯತೆ ಇದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ ಇಲ್ಲಿನ ಕನ್ನಡಿಗರು ಉಳಿಸಿ -ಬೆಳೆಸುತ್ತಿರುವುದು ಅಭಿನಂದನೀಯ
– ಚಂದ್ರಶೇಖರ ಎಸ್‌.ಪೂಜಾರಿ,ಅಧ್ಯಕ್ಷರು : ಬಿಲ್ಲವರ ಅಸೋ.ಮುಂಬಯಿ

ಹಿರಿಯರು ಸಮಾಜದ ಹಿತದೃಷ್ಟಿಯಿಂದ ಸ್ಥಾಪಿಸಿದ ಸಂಘವೊಂದು ಸುವರ್ಣ ಮಹೋತ್ಸವವನ್ನು ಆಚರಿಸಿರುವುದು ಅಭಿಮಾನದ ವಿಷಯವಾಗಿದೆ. ಇದರೊಂದಿಗೆ ಈ ಸಂಸ್ಥೆಯು ಭಾಷೆ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ನಾವು ಮಕ್ಕಳಿಗೆ ಸಂಪಾದಿಸುವುದರಲ್ಲಿ ಸ್ವಲ್ಪಾಂಶವನ್ನು ಇಂತಹ ಸಂಘಟನೆಗಳಿಗೆ ನೀಡಿದಾಗ ಸಮಾಜದ ಏಳ್ಗೆ ಸಾಧ್ಯವಾಗುತ್ತದೆ ಅಲ್ಲದೆ ನಮ್ಮ ಬದುಕಿಗೆ ಸಾರ್ಥಕತೆ ಬರುತ್ತದೆೆ.
 ಕಡಂದಲೆ ಪರಾರಿ ಪ್ರಕಾಶ್‌ ಶೆಟ್ಟಿ, ನ್ಯಾಯವಾದಿಗಳು

 ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next