Advertisement

ಘಾಟಿ ರಥೋತ್ಸವ ಸಮಾರೋಪ

11:02 AM Dec 31, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಕ್ಷೇತ್ರದಲ್ಲಿ ನಡೆದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಒಂದು ವಾರಗಳ ಕಾಲ ನಡೆದ ರಥೋತ್ಸವ ಹಾಗೂ ಜಾತ್ರಾ ವಿಶೇಷ ಪೂಜಾ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ನೆರವೇರಿತು.

Advertisement

ಡಿ.24ರಂದು ಅಂಕುರಾರ್ಪಣೆ ಧ್ವಜರೋಹಣ ಕಾರ್ಯಕ್ರಮದೊಂದಿಗೆ ಜಾತ್ರಾ ಕಾರ್ಯಕ್ರಮ ಆರಂಭವಾಗಿತ್ತು. ಡಿ.28ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತ್ತು. ಇದರ ಅಂಗವಾಗಿ ಶುಕ್ರವಾರ ಬೆಳಗಿಂದಲೇ ಅರ್ಚಕರಿಂದ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ. ನಾಗರಾಜು ಧನ್ಯವಾದ ಅರ್ಪಿಸಿದರು.

ಘಾಟಿ ಕ್ಷೇತ್ರದಲ್ಲಿ 7 ದಿನಗಳ ಕಾಲ ನಡೆದ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವದ ಪೂಜಾ ಕಾರ್ಯಗಳು ಇಂದು ಸಮಾಪ್ತಿಯಾಗುತ್ತಿದ್ದು, ಲೋಕಕಲ್ಯಾಣಾರ್ಥವಾಗಿ ಹೋಮ ಹವನಾದಿ ಗಳನ್ನು ನಡೆಸಲಾಗಿದೆ. ಅಂಕುರಾರ್ಪಣೆ ದಿನ ದಂದು ಮಾಡಿದ್ದ ಧ್ವಜರೋಹಣವನ್ನು ಮೂಕ ಬಲಿಯಿಂದ ಧ್ವಜಾ ಅವರೋಹಣ ಮಾಡಲಾಗು ತ್ತಿದ್ದು, ಸುಬ್ರಹ್ಮಣ್ಯಸ್ವಾಮಿ ಕೃಪೆ ಎಲ್ಲರಿಗೂ ದೊರೆಯಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಎಂದು ಅರ್ಚಕ ಸುಬ್ರಹ್ಮಣ್ಯ ಶಾಸ್ತ್ರಿ, ಸುಬ್ಬುಕೃಷ್ಣ ಶಾಸ್ತ್ರಿ ತಿಳಿಸಿದರು.

ಈ ವೇಳೆ ಚಿತ್ರ ನಿರ್ಮಾಪಕ ಎಸ್‌.ಎ. ಗೋವಿಂದರಾಜು, ಕಾರ್ಯನಿರ್ವಾಹಕ ಅಧಿ ಕಾರಿ ಡಿ.ನಾಗರಾಜು, ದೇವಾಲಯದ ಅಧೀಕ್ಷಕ ರಘು ಉಚ್ಚಪ್ಪ, ಸಿಬ್ಬಂದಿ ನಂಜಪ್ಪ ಸೇರಿದಂತೆ ಅರ್ಚಕ ವೃಂದ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next