Advertisement

ಘಟಾನುಘಟಿಗಳ ಭವಿಷ್ಯ ಇಂದು ತೀರ್ಮಾನ

04:40 PM May 15, 2018 | |

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ, ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ರಾಜಕೀಯ ನಾಯಕರ ಭವಿಷ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಹುತೇಕರ ಹಣೆ ಬರಹ ಹೊರ ಬರಲಿದೆ.

Advertisement

ಈ ಬಾರಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟ ಬಿ.ಎಸ್‌. ಯಡಿಯೂರಪ್ಪ ಶಿಕಾರಿಪುರದಿಂದ ಸ್ಪರ್ಧಿಸಿದ್ದು, ಭಾರೀ ಅಂತರದೊಂದಿಗೆ ಗೆಲ್ಲುವ ಮೂಲಕ ರಾಜಕೀಯವಾಗಿ ಸ್ಪಷ್ಟ ಸಂದೇಶವೊಂದನ್ನು ನೀಡಬೇಕೆಂಬ ತವಕ ಅವರಲ್ಲಿದೆ. 2008 ರಲ್ಲಿ ಯಡಿಯೂರಪ್ಪ ವಿರುದ್ಧ ಎಸ್‌. ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸದೆ ಬಂಗಾರಪ್ಪನವರನ್ನು ಬೆಂಬಲಿಸಿದ್ದವು. 

ಆಗಲೂ ಯಡಿಯೂರಪ್ಪನವರು ಮುಖ್ಯಮಂತ್ರಿ ಅಭ್ಯರ್ಥಿ. ಬಲಿಷ್ಟ ಎದುರಾಳಿ ಎಂದೇ ಬಿಂಬಿತವಾಗಿದ್ದ ಬಂಗಾರಪ್ಪ ವಿರುದ್ದ ಆಗ ಸುಮಾರು 45 ಸಾವಿರ ಮತಗಳ ಅಂತರದಿಂದ ಭಾರೀ ಗೆಲುವು ದಾಖಲಿಸಿದ್ದರು. ಈ ಬಾರಿ ಪ್ರಬಲ ಅಭ್ಯರ್ಥಿ ಕಣದಲ್ಲಿಲ್ಲ. ಕಾಂಗ್ರೆಸ್‌ ಜೊತೆಗೆ ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಗೆಲುವಿನ ಅಂತರ ಇನ್ನೂ ದೊಡ್ಡದಾಗಿರಬೇಕೆಂಬ ಆಕಾಂಕ್ಷೆ ಅವರದ್ದಾಗಿದೆ.

ಟಿಕೆಟ್‌ ದಕ್ಕಿಸಿಕೊಳ್ಳಲೇ ಹರಸಾಹಸ ಪಟ್ಟು ಕೊನೆಗೂ ಟಿಕೆಟ್‌ ಪಡೆದ ಕೆ.ಎಸ್‌. ಈಶ್ವರಪ್ಪ ಗೆಲುವನ್ನು ಸಾಧಿಸಿ ಹೈಕಮಾಂಡ್‌ ಎದುರು ಗಟ್ಟಿಗೊಳ್ಳುವ ತವಕದಲ್ಲಿದ್ದಾರೆ. ತಮಗೆ ಎದುರಾಗಿದ್ದ ಅಂಶಗಳನ್ನೆಲ್ಲಾ ಒಂದೊಂದಾಗಿ ನಿವಾರಿಸಿಕೊಂಡು ಚುನಾವಣೆಯನ್ನು ಎದುರಿಸಿದ್ದಾರೆ. ದೂರವಾಗಿದ್ದ ಲಿಂಗಾಯಿತ ಮತದಾರರನ್ನು ಒಲಿಸಿಕೊಂಡಿದ್ದಾರೆ.

ಆದರೂ ಅವರು ಅಂದುಕೊಂಡಷ್ಟು ಈ ಚುನಾವಣೆ ಸುಲಭವಾಗಿರಲಿಲ್ಲ. ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್‌ ಮಾಡಿದ ಚುನಾವಣಾ ವ್ಯೂಹಗಾರಿಕೆ ಈಶ್ವರಪ್ಪನವರನ್ನು ಆಗಾಗ್ಗೆ ಧೃತಿಗೆಡಿಸಿತ್ತು. ಪ್ರಸನ್ನಕುಮಾರ್‌ ಕೂಡ ತಮ್ಮ
ಗೆಲುವಿಗಾಗಿ ತೀವ್ರ ಯತ್ನ ನಡೆಸಿದ್ದಾರೆ. ಅವರ ರಾಜಕೀಯ ಭವಿಷಕ್ಕೆ ಈ ಚುನಾವಣಾ ಫಲಿತಾಂಶ ಪ್ರಮುಖ ಕಾರಣ ಕೂಡ ಆಗುವ ಸಾಧ್ಯತೆ ಇದೆ. 

Advertisement

ಸಾಗರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಸಚಿವ ಕಾಗೋಡು ತಿಮ್ಮಪ್ಪ ಈ ಬಾರಿ ಟಿಕೆಟ್‌ ಅನ್ನು ಸುಲಭವಾಗಿ ಪಡೆದರು. ಕಳೆದ ಚುನಾವಣೆಯಲ್ಲಿ ವಯಸ್ಸಿನ ಕಾರಣ ಇವರಿಗೆ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆ ಸ್ವತಃ ಕಾಗೋಡು ಅವರಿಗೂ ಇರಲಿಲ್ಲ.

ಈ ಬಾರಿ ಸುಲಭವಾಗಿ ಟಿಕೆಟ್‌ ಪಡೆದ ಬಳಿಕವೂ ಅವರ ಗೆಲುವು ಸುಲಭವಾಗಿರಲಿಲ್ಲ. ಕ್ಷೇತ್ರದಲ್ಲಿ ಅವರಿಗಿದ್ದ ಅಡೆತಡೆಗಳು, ವಿರೋಧಿ ಎಲ್ಲವೂ ಸಮಸ್ಯೆ ಉಂಟು ಮಾಡಿದ್ದವು. ಆದರೆ ಬಿಜೆಪಿ ಅಭ್ಯರ್ಥಿಯ ಹೆಸರು ಪ್ರಕಟವಾಗುತ್ತಿದ್ದಂತೆ ಇವರ ಗೆಲುವು ಸುಲಭವಾಯಿತು ಎಂದು ಪಕ್ಷದವರು ಹೇಳಿಕೊಂಡರು. ಇದು ವಾಸ್ತವಕ್ಕೆ ಹತ್ತಿರವೂ ಇತ್ತು. 

ಈ ಚುನಾವಣೆ ಬಹುತೇಕ ಕಾಗೋಡು ತಿಮ್ಮಪ್ಪನವರ ಕೊನೆಯ ಚುನಾವಣೆ. ಹೀಗಾಗಿ ಚುನಾವಣಾ ರಾಜಕೀಯ ನಿರ್ಗಮನ ಖುಷಿಯಿಂದ ಇರಬೇಕೆಂಬ ಯೋಜನೆ ಕಾಗೋಡು ತಿಮ್ಮಪ್ಪನವರದ್ದಾಗಿತ್ತು. ಸೊರಬದಲ್ಲಿ ಸೋದರರ ಸವಾಲ್‌ ನಾಲ್ಕನೇ ಚುನಾವಣೆಯಲ್ಲಿಯೂ ಮುಂದುವರೆದಿದ್ದು, ಪ್ರಬಲ ಹೋರಾಟ ನಡೆಸಿದ್ದಾರೆ. ಮಧು ಬಂಗಾರಪ್ಪನವರು ತಮ್ಮದೇ ಆದ ರೀತಿಯಲ್ಲಿ ರಾಜಕಾರಣ ನಡೆಸಿದ್ದು, ಈಗಾಗಲೇ ಜೆಡಿಎಸ್‌ನಲ್ಲಿ ರಾಜ್ಯಮಟ್ಟದ ನಾಯಕರಾಗಿ ಬೆಳೆಯುತ್ತಿದ್ದಾರೆ. 

ಹೀಗಾಗಿ ಗೆಲ್ಲುವುದು ಅನಿವಾರ್ಯ. ಇದಕ್ಕಾಗಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಈಗಾಗಲೇ ಎರಡು ಬಾರಿ ಸೋತಿರುವ ಕುಮಾರ್‌ ಬಂಗಾರಪ್ಪ ಅವರಿಗೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ಬಾರಿಯ ಗೆಲುವು ಅತಿ ಮುಖ್ಯ. ಇದೇ ಕಾರಣಕ್ಕೆ ಅವರು ಕೂಡ ತಮ್ಮ ಎಲ್ಲ ಶಕ್ತಿಯನ್ನು ವ್ಯಯಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್‌ ಮೂರನೇ ಬಾರಿಗೆ ತಮ್ಮ ವರ್ಚಸ್ಸನ್ನು ಒತ್ತೆ ಇಟ್ಟಿದ್ದಾರೆ.

ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್‌ ಅಭ್ಯರ್ಥಿ ಆರ್‌. ಎಂ. ಮಂಜುನಾಥ ಗೌಡರಿಗೆ ರಾಜಕೀಯ ಅಸ್ತಿತ್ವದ ಪ್ರಶ್ನೆ. ಚುನಾವಣಾ ರಾಜಕಾರಣದಲ್ಲಿ ಎರಡನೇ ಬಾರಿಗೆ ಕಣದಲ್ಲಿದ್ದು, ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಆರಗ ಜ್ಞಾನೇಂದ್ರ ಕೂಡ ಎರಡು ಬಾರಿ ಸೋತಿದ್ದು, ಇನ್ನೊಮ್ಮೆ ಸೋಲಲು ತಯಾರಿಲ್ಲ. ಮೂರೂ ಜನ ಗೆಲುವಿಗಾಗಿ ಭಾರೀ ಪ್ರಯತ್ನ ನಡೆಸಿದ್ದಾರೆ.

ಹೀಗೆ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮದೇ ಆದ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಗೆಲುವನ್ನು ಅರಸುತ್ತಿದ್ದಾರೆ. ಒಟ್ಟು ಕ್ಷೇತ್ರದಲ್ಲಿ 74 ಮಂದಿ ಕಣದಲ್ಲಿದ್ದು, ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾದರೂ ಪ್ರಬಲವಾಗಿಲ್ಲ. ರಾಜಕೀಯ ಪಕ್ಷಗಳದ್ದೇ ಹವಾ. ಆದರೂ ತಮ್ಮ ಅದೃಷ್ಟವನ್ನೊಮ್ಮೆ ಪರೀಕ್ಷಿಸುವ ಪ್ರಯತ್ನ

ನಿಷೇಧಾಜ್ಞೆಜಾರಿ
ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 15ರಂದು ಬೆಳಗ್ಗೆ 6ರಿಂದ 16ರ ಬೆಳಗ್ಗೆ 6 ರವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆ ದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜೇತ ಅಭ್ಯರ್ಥಿಗಳ ಪರ ಪಟಾಕಿ ಸಿಡಿಸುವುದು ಹಾಗೂ ಮೆರವಣಿಗೆ ಮಾಡಲು ಅವಕಾಶ ಇಲ್ಲವಾಗಿದೆ.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮೇ 15ರಂದು ಬೆ ಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಸಂದರ್ಭ ಹಾಗೂ ನಂತರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಫಲಿತಾಂಶ ಹಂತ ಹಂತವಾಗಿ ಹೊರಬೀಳುತ್ತಿದ್ದಂತೆ ರಾಜ ಕೀಯ ಪಕ್ಷಗಳ ಕಾರ್ಯಕರ್ತರು ಗುಂಪು ಗುಂಪಾಗಿ ಪಟಾಕಿ ಹೊಡೆಯುವುದು, ಸಂಚಾರಕ್ಕೆ ತಡೆ ಒಡ್ಡುವುದು ಮಾಡುವ ಸಂಭವ ಇದೆ. ಹಾಗಾಗಿ ಇವುಗಳನ್ನು ನಿಷೇಧಿಸಲಾಗಿದೆ. ಜತೆಗೆ ಸಭೆ-ಸಮಾರಂಭ, 5 ಕ್ಕಿಂತ ಹೆಚ್ಚು ಜ ನರು ಒಟ್ಟಾಗಿ ಓಡಾಡುವುದು, ಮಾರಕಾಸ್ತ್ರ ಹಿಡಿದು ತಿರುಗಾಡುವುದು, ಧ್ವನಿವರ್ಧಕ ಬಳಸಿ ಪ್ರಚಾರ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next