ನವಿ ಮುಂಬಯಿ: ನಗರದ ಪ್ರಸಿದ್ಧ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಂಗ ಸಂಸ್ಥೆ ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ 16 ನೇ ವಾರ್ಷಿಕ ಮಹಾಪೂಜೆಯ ಅಂಗವಾಗಿ ಡಿ. 16ರಂದು ಸಂಜೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಪ್ರಸಿದ್ಧ ಗಾಯಕರಾದ ಚಂದ್ರಕಾಂತ್ ಆಚಾರ್ಯ ಪಡುಬಿದ್ರೆ, ಕಳೆದ 25 ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಸೇವೆಗೈಯುತ್ತಿರುವ ನಿತ್ಯಾನಂದ ಸ್ವಾಮಿ, ನವರಸ ಅಕಾಡೆಮಿಯ ಸುಷ್ಮಾ ಗೋಪಿನಾಥ್, ಅಯ್ಯಪ್ಪ ಮಹಾಪೂಜೆಗೆ ಅನ್ನದಾನ ಸೇವೆ ನೀಡಿದ ಧನ್ಯಾ ರವಿರಾಜ್, ಶ್ರೀ ಕಷ್ಣ ವಿಟuಲ ಪ್ರತಿಷ್ಠಾನದ ಧರ್ಮ ಸಮಾಜ ಭೂಷಣ ಪ್ರಶಸ್ತಿ ಪಡೆದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಹಾಗೂ 18 ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆ ಮಾಡುತ್ತಿರುವ ರಮೇಶ್ ಗುರುಸ್ವಾಮಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಭಾರತ್‌ಕೋಚ್‌ನ ಮಾಲಕ ಸದಾಶಿವ ಎಸ್. ಶೆಟ್ಟಿ, ಗೌರವ ಅತಿಥಿಗಳಾಗಿ ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ
ಶ್ಯಾಮ್ ಎನ್. ಶೆಟ್ಟಿ, ತುಳುಕೂಟ ಐರೋಲಿಯ ಅಧ್ಯಕ್ಷ ಕೆ. ಕೆ. ಹೆಬ್ಟಾರ್, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿ. ಕೆ. ಪೂಜಾರಿ, ರಂಗಭೂಮಿ ಫೈನ್‌ಆರ್ಟ್ಸ್ ಅಧ್ಯಕ್ಷ ತಾರನಾಥ್ ಶೆಟ್ಟಿ ಪುತ್ತೂರು, ಉದ್ಯಮಿಗಳಾದ ಮೋಹನ್ ಶೆಟ್ಟಿ ಮಜ್ಜಾರ್, ಸುರೇಶ್ ಶೆಟ್ಟಿ ಮಹಾಪೆ, ರಾಘವೇಂದ್ರ ಎಂಟರ್‌ಪ್ರೈಸಸ್ ಘನ್ಸೋಲಿಯ ರಾಜೇಂದ್ರ ಶೆಟ್ಟಿ, ಉಪಾಧ್ಯಕ್ಷರುಗಳಾದ ಪದ್ಮನಾಭ ಸಿ. ಶೆಟ್ಟಿ, ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಧರ್ಮೇಂದ್ರ ಡಿ. ನಾಯಕ್, ಜತೆ ಕೋಶಾಧಿಕಾರಿ ಸತೀಶ್ ಎಸ್. ಪೂಜಾರಿ, ಸದಸ್ಯೆ ಲಕ್ಷ್ಮೀ ಎಸ್. ಪೂಜಾರಿ, ಮೂಕಾಂಬಿಕಾ ಚಾರಿಟೇಬಲ್ ಮಂಡಳದ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಸಮಿತಿಯ ಸದಸ್ಯರುಗಳಾದ ಕೆ. ಎಂ. ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಶ್ರೀನಿವಾಸ ಜಿ. ಪೂಜಾರಿ, ಶೇಖರ ವಿ. ದೇವಾಡಿಗ, ಕುಟ್ಟಿ ಎ. ಕುಂದರ್, ಹರೀಶ್ ಶೆಟ್ಟಿ ನಲ್ಲೂರು, ಬಾಲಕೃಷ್ಣ ಶೆಟ್ಟಿ, ಗಣೇಶ್ ದೇವಾಡಿಗ, ನಾಗೇಶ್ ರೈ, ದಿನೇಶ್ ಪೂಜಾರಿ, ಲಕ್ಷ್ಮೀ ಎಸ್. ಪೂಜಾರಿ, ಶಿಬಿರದ ಮಾಲಾಧಾರಿ ಸ್ವಾಮಿಗಳು, ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳ, ಉಪಸಮಿತಿ ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.