Advertisement

ಈ ದೇಶಗಳಿಗೆ ಹೋಗುವುದು ಸುಲಭ

11:53 PM Oct 17, 2021 | Team Udayavani |

ಕೋವಿಡ್‌ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಅಕ್ಷರಶಃ ಅಂತಾರಾಷ್ಟ್ರೀಯ ಪ್ರವಾಸ ಸ್ಥಗಿತವಾಗಿತ್ತು. ಈಗ ಕೋವಿಡ್‌ ಕಡಿಮೆಯಾಗುತ್ತಿದ್ದು, ಒಂದೊಂದೇ ದೇಶಗಳು ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿವೆ.  ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಹಲವಾರು ದೇಶಗಳು ಪೂರ್ಣ ಪ್ರಮಾಣದ ಲಸಿಕೆ ಪಡೆದ ಭಾರತೀಯರಿಗೂ ತೆರೆದುಕೊಂಡಿವೆ.

Advertisement

ಅಮೆರಿಕ
ನ.8ರಿಂದ ಪೂರ್ಣ ಲಸಿಕೆ ಪಡೆದ ಭಾರತೀಯರು ಅಮೆರಿಕಕ್ಕೆ ತೆರಳಬಹುದು. ಒಂದೂವರೆ ವರ್ಷದ ಹಿಂದೆ ವಿಧಿಸಲಾಗಿದ್ದ ನಿಷೇಧವನ್ನು ಅಮೆರಿಕ ಈಗ ಹಿಂದೆಗೆದುಕೊಂಡಿದೆ. ಭಾರತದ ಜತೆಗೆ ಐರೋಪ್ಯ ದೇಶಗಳು, ಬ್ರಿಟನ್‌, ಐರ್ಲೆಂಡ್‌, ದಕ್ಷಿಣ ಆಫ್ರಿಕಾ, ಇರಾನ್‌ ಮತ್ತು ಬ್ರೆಜಿಲ್‌ ದೇಶಗಳ ನಾಗರೀಕರೂ ಅಮೆರಿಕಕ್ಕೆ ತೆರಳಬಹುದು.

ಯುಕೆ
ಒಂದಷ್ಟು ತಿಕ್ಕಾಟದ ನಡುವೆ ಎರಡೂ ದೇಶಗಳೂ ಯಾವುದೇ ಕ್ವಾರಂಟೈನ್‌ ಇಲ್ಲದೇ ಪ್ರವಾಸ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿವೆ. ಮೊದಲಿಗೆ ಪೂರ್ಣವಾಗಿ ಲಸಿಕೆ ಪಡೆದ ಭಾರತೀಯರೂ 10 ದಿನ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಯುನೈಟೆಡ್‌ ಕಿಂಗ್‌ಡಮ್‌ ಸರಕಾರ‌ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಭಾರತವೂ ಇಂಗ್ಲೆಂಡ್‌ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿತ್ತು. ಈಗ ಎರಡೂ ಸರಕಾರಗಳ ನಡುವೆ ಮಾತುಕತೆ ನಡೆದು, ಪೂರ್ಣ ಪ್ರಮಾಣದ ಲಸಿಕೆ ಪಡೆದವರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿವೆ.

ಮಾಲ್ದೀವ್ಸ್‌
ಭಾರತದಿಂದ ಹೋಗುವವರಿಗೆ ಇಲ್ಲಿ ಯಾವುದೇ ನಿರ್ಬಂಧ ಇಲ್ಲ. ಮಾಲ್ದೀವ್ಸ್‌ಗೆ ಹೋದ ಮೇಲೆ ವೀಸಾ ಪಡೆದು ಪ್ರವಾಸ ಮಾಡಬಹುದು.  ಇನ್ನು ಈಜಿಪ್ಟ್, ಬಹ್ರೈನ್‌, ಚಿಲಿ ದೇಶಗಳಿಗೂ ಭಾರತೀಯರು ಪ್ರವಾಸ ಮಾಡಬಹುದು. ಆದರೆ ಅಲ್ಲಿಗೆ ಹೋದ ಮೇಲೆ ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯವಾಗಿದೆ.

ಶ್ರೀಲಂಕಾ
ಪೂರ್ಣ ಲಸಿಕೆ ಪಡೆದ ಮೇಲೂ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ಪ್ರಮಾಣಪತ್ರ ಪಡೆದು ಶ್ರೀಲಂಕಾಗೆ ಹೋಗಬೇಕು. ಲಸಿಕೆ ಪಡೆಯದೇ ಇರುವವರು 14 ದಿನ ಕ್ವಾರಂಟೈನ್‌ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು.

Advertisement

ದುಬಾೖ
ಲಸಿಕೆ ಹಾಕಿಸಿಕೊಂಡಿದ್ದರೂ 92 ಗಂಟೆಗಳ ಹಿಂದಿನ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ರಿಪೋರ್ಟ್‌ ತೆಗೆದುಕೊಂಡು ಹೋಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next