Advertisement

ಉಳವಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

04:47 PM Jan 26, 2020 | Suhan S |

ಜೋಯಿಡಾ: ಉತ್ತರ ಕರ್ನಾಟಕದ ಸುಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ಜಾತ್ರೋತ್ಸವಕ್ಕೆ ಕೆಲವೇ ದಿನಗಳು ಇದ್ದು, ತಯಾರಿ ಜೋರಾಗಿ ನಡೆದಿದೆ.

Advertisement

ದೇವಸ್ಥಾನ, ಮುಖ್ಯದ್ವಾರಗಳ ಸುತ್ತಲ ಗುಡಿ, ವಸತಿ ನಿಲಯಗಳು ಸುಣ್ಣಬಣ್ಣದಿಂದಶೃಂಗಾರಗೊಂಡಿದೆ. ಗ್ರಾಪಂ ಭಕ್ತಾದಿಗಳ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಿದೆ. ಉಳವಿ ದೇವಸ್ಥಾನದ ರಥಬೀದಿಗಳು ಭಕ್ತಾದಿಗಳ ಸ್ವಾಗತಕ್ಕೆ ಶೃಂಗಾರಗೊಳ್ಳುತ್ತಿವೆ. ಜಾತ್ರೋತ್ಸವದ ಆವರಣದಲ್ಲಿ ಗ್ರಾಪಂ ಉಳವಿ ವತಿಯಿಂದ ಭಕ್ತಾದಿಗಳಿಗೆ ಕುಡಿಯವ ನೀರಿನ ಕೊರತೆ ನೀಗಿಸಲು ಈ ಬಾರಿ ನಾಲ್ಕು ಕುಡಿಯುವ ನೀರಿನ ಟ್ಯಾಂಕ್‌ ಅಳವಡಿಸಿದೆ. ಇಷ್ಟಲ್ಲದೆ ಕೆರೆ, ಕೊಳವೆಬಾವಿಗಳನ್ನು ಸ್ವಚ್ಚಗೊಳಿಸಿ ನೀರಿನ ಅಗತ್ಯ ಪೂರೈಕೆಗೆ ಅಣಿಮಾಡಿಕೊಂಡಿದೆ. ಟ್ಯಾಂಕರ್‌ಮೂಲಕ ನೀರು ಸರಬರಾಜಿಗೂ ವ್ಯವಸ್ಥೆ ಕೈಗೊಳ್ಳಲಾಗಿದೆ.

ಉಳವಿ ಕ್ಷೇತ್ರದ ಪ್ರವೇಶಗಡಿಯಾದಹೆಣಕೊಳ ಮಹಾದ್ವಾರದ ಹತ್ತಿರ ಭಕ್ತಾದಿಗಳಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ಅಳವಡಿಸಿದ್ದು, ಕೊಳವೆಬಾವಿ ಮೂಲಕ ನೀರೆತ್ತುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ವೀರಭದ್ರೇಶ್ವರ ಕೆರೆ, ಸಿದ್ದೇಶ್ವರ ಕೆರೆಗಳು ತುಂಬಿಕೊಂಡಿವೆ. ಜಾತ್ರೆ ಸಮಯದಲ್ಲಿ ಬಂದ ಭಕ್ತರಿಗೆ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಹಲವಾರು ಟ್ಯಾಂಕರ್‌ಗಳು ಹಾಗೂ ಕೊಡತಳ್ಳಿ ಹಳ್ಳದಿಂದ ನೀರು ಮೇಲಕ್ಕೆ ತರುವ ಕಾರ್ಯ ಕೂಡಾ ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಮಂಜುನಾಥ ಮೋಕಾಶಿ ಹೇಳಿದ್ದಾರೆ.

ಗೆಟ್‌ ಟೆಂಡರ್‌: ಉಳವಿ ಜಾತ್ರೆ ಫೆ.1 ರಿಂದ ಆರಂಭವಾಗಿ ಫೆ.10 ರಂದು ರಥೋತ್ಸವ ನಡೆಯಲಿದ್ದು ಹತ್ತು ದಿನಗಳ ಕಾಲ ಬಂದ ಖಾಸಗಿ ವಾಹನಗಳ ಕರವನ್ನು ಪಡೆಯಲು ಟೆಂಡರ್‌ನ್ನು ಪಂಚಾಯತ್‌ ಸಭಾಭವನದಲ್ಲಿ ಕರೆಯಲಾಗಿತ್ತು. ಜೋಯಿಡಾ ತಾಲೂಕಿನ ಹಲವಾರು ಜನರು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಉಳವಿಯ ವಜೀದ್‌ ಸೈಯದ ಎಂಬುವವರಿಗೆ 85 ಸಾವಿರಕ್ಕೆ ಉಳವಿ ಮುಖ್ಯದ್ವಾರ ವಾಹನ ಕರದ ಟೆಂಡರ್‌ ನೀಡಲಾಯಿತು. ಕಳೆದ ಬಾರಿ 1 ಲಕ್ಷ 5 ಸಾವಿರಕ್ಕೆ ಟೆಂಡರ್‌ ಆಗಿದ್ದರೆ, ಈಬಾರಿ ಕಡಿಮೆ ಆಗಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next