ತಿಂದರೆ, ಹತ್ತು ನಿಮಿಷ ಬಾ ಯಲ್ಲಿ ಕಹಿಕಹಿ ಇರುತ್ತಲ್ಲ ಹಾಗೆ! ನಮ್ಮ ಮೇಷ್ಟ್ರು, ಜೀವನದಲ್ಲಿ ಏನಾಗ್ತಿಯಯ್ನಾ ಅಂತ ಕೇಳಿದಾಗೆಲ್ಲ, “ಇನ್‌ಸ್ಪೆಕ್ಟರ್ ಆಗ್ತೀನೆ ಸಾರ್’ ಅಂತಿದ್ದೆ. ಆದರೂ, ನಿಜಕ್ಕೂ ನಾನು ಅಂಥಾ ಪೋಸ್ಟ್ ಗೆ ಹೋಗ್ತಿನಾ? ಓದೋಕೆ, ಬರೆಯೋಕೆ ಬರೋಲ್ಲ ಅಂತೆಲ್ಲ, ಒಳಮನಸ್ಸು ಹಂಗಿಸೋದು.
Advertisement
ನಾಲ್ಕನೇ ಕ್ಲಾಸ್ ತನಕ ಹಾಗೂ ಹೀಗೂ ಹೋದೆ. ಆಮೇಲೆ ಆಗಲಿಲ್ಲ. ಅಪ್ಪನ ಜೊತೆ ಹೋಟೆಲ್‌ಗೆ ಹೋಗೋದು, ಅವರು ಬೋಂಡಾ ಹಾಕುತ್ತಿದ್ದರೆ ಪಕ್ಕದಲ್ಲಿ ನಿಂತಿರೋದು, ಆಮೇಲಾಮೇಲೆ ಬೋಂಡಾ ಸಪ್ಲೈ ಮಾಡೋಕೆಲ್ಲ ಶುರುಮಾಡಿದೆ. ಅಪ್ಪನಿಗೆ ಹುಷಾರಿಲ್ಲ ಅಂದಾಗ, ನಾನೇ ಸ್ವಲ್ಪ ಸ್ವಲ್ಪ ಜವಾಬ್ದಾರಿ ತಗೊಳ್ಳುತ್ತಿದ್ದೆ. ಕ್ರಮೇಣ, ತಿಂಡಿಗಳನ್ನು ಮಾಡಲು ಕಲಿತೆ. ಜೀವನದಲ್ಲಿಇನ್ಸ್ಪೆಕ್ಟರ್ ಆಗಬೇಕು ಅನ್ನೋ ಕನಸು, ಮರೆತು ಹೋಗುತ್ತಾ ಬಂತು. ಕೈಗೊಂದಷ್ಟು ದುಡ್ಡು ಸಿಗುತ್ತಿದ್ದುದರಿಂದ, ಬೇರೆ ಕಡೆ ಗಮನ ಹರಿಯಲಿಲ್ಲ. ಅಪ್ಪನ ಮರಣದ ನಂತರ, ಮೂವರು ತಮ್ಮಂದಿರನ್ನು ಸಂಬಾಳಿಸಿಕೊಂಡೇ, ಹೋಟೆಲ್ ಜವಾಬ್ದಾರಿಯನ್ನೂ ಹೊತ್ತುಕೊಂಡೆ. ಆ ಹೊತ್ತಿಗೆ, ಓದುವ ಹುಮ್ಮಸ್ಸು ಇರಲಿಲ್ಲ. ವಯಸ್ಸು ಆಗುತ್ತಾ ಬಂತು. ಹಣದ ಲೆಕ್ಕಾಚಾರಕ್ಕೆ, ನನ್ನ ಹೋಟೆಲ್ಲೇ ಬ್ಯುಸಿನೆಸ್ ಗುರು. ವ್ಯವಹಾರದ ಒಳಗುಟ್ಟುಗಳು ಅರ್ಥವಾದದ್ದು ಹೋಟೆಲ್‌ನಲ್ಲಿಯೇ.