Advertisement

“ಕಲೆಯಲ್ಲಿ  ತೊಡಗಿಸಿಕೊಳ್ಳುವುದರಿಂದ ನೆಮ್ಮದಿ’

02:21 PM Feb 24, 2017 | |

ಪರ್ಲಡ್ಕ : ಮನುಷ್ಯನಲ್ಲಿ ಯಾವುದಾದರೊಂದು ಕಲೆ ಅಡಕವಾಗಿರಬೇಕು. ಕಲೆಯಲ್ಲಿನ ತೊಡಗಿಸಿಕೊಳ್ಳುವಿಕೆ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಎಂದು ಕಲಾವಿದ ಹಾಗೂ ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿಶ್ರಾಂತ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ| ದತ್ತಾತ್ರೇಯ ರಾವ್‌ ಅವರು ಹೇಳಿದರು.

Advertisement

ಸಂತ ಫಿಲೋಮಿನಾ ಕಾಲೇಜಿನ ಲಲಿತ ಕಲಾ ಸಂಘದ ವತಿಯಿಂದ ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತರ ಬಾಲವನದಲ್ಲಿ ಪ್ರಕೃತಿ ಮತ್ತು ಕಲೆ ಕುರಿತು ಆಯೋಜಿಸಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಅವರು ಮಾತನಾಡಿದರು.

ನಾವು ನೋಡುವುದೆಲ್ಲ ಕಲೆಯಾಗುವುದಿಲ್ಲ. ನಾವು ಯಾವುದಾದರೊಂದು ವಿಷಯವನ್ನು ಹೆಕ್ಕಿ, ಒಂದು ಚೌಕಟ್ಟಿನಲ್ಲಿ ಅಳವಡಿಸಿಕೊಂಡು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಅದು ಕಲೆಯ ರೂಪ ತಾಳುತ್ತದೆ ಎಂದು ಹೇಳಿದರು.

ಮಕ್ಕಳ ವಿಜ್ಞಾನ, ಕಥೆ, ಕವನ, ನಾಟಕ, ಕಾದಂಬರಿ, ಯಕ್ಷಗಾನ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಡಾ| ಶಿವರಾಮ ಕಾರಂತರ ಈ ಬಾಲವನ ಪ್ರಕೃತಿ ರಮಣೀಯವಾದ ಒಂದು ಪುಣ್ಯ ಭೂಮಿಯಾಗಿದೆ. ಪ್ರಕೃತಿಯಲ್ಲಿರುವ ಮರ, ಗಿಡ, ಬಳ್ಳಿ, ಹೂ, ಹಣ್ಣು, ನದಿ, ತೊರೆ, ಕಾಲುವೆ, ಗುಡ್ಡ, ಬೆಟ್ಟ, ಸೂರ್ಯೋದಯ, ಚಂದ್ರೋದಯ, ಗಾಳಿ, ಬೆಳಕು, ಬಿಸಿಲು, ಮಳೆ, ನೆರಳು, ಹಕ್ಕಿಗಳ ಕಲರವ ಮುಂತಾದವುಗಳು ಕಲಾವಿದನಾದವನಿಗೆ ಸ್ಫೂರ್ತಿಯನ್ನು ನೀಡಬಲ್ಲುದು ಎಂದು ಹೇಳಿದ ಅವರು ಪ್ರಕೃತಿಯಂತೆ ಕವಿ ಮನಸ್ಸು ಪರಿಸರ ಗೀತೆಯನ್ನು ಹಾಡಿದರು.

ಪ್ರಕೃತಿ ಸೌಂದರ್ಯ ಆಸ್ವಾದಿಸಿ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ವಿಷ್ಣು ಭಟ್‌ ಮಾತ ನಾಡಿ, ಅರುವತ್ನಾಲ್ಕು ವಿದ್ಯೆಗಳಲ್ಲಿ ಕಲೆಗೆ ವಿಶೇಷ ಮನ್ನಣೆಯಿದೆ. ವಿದ್ಯಾರ್ಥಿ ಗಳು ಮನಮೋಹಕವಾದ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಗುಣ ಹೊಂದಿರಬೇಕು. ಪರಿಸರ ವನ್ನು ಇಷ್ಟ ಪಡುವವರಿಗೆ ಮಾನಸಿಕ ನೆಮ್ಮದಿಯೂ ಇರುತ್ತದೆ. ಉತ್ತಮ ಕಲೆಯು ಧನವನ್ನೂ ತಂದುಕೊಡುತ್ತದೆ ಎಂದು ಹೇಳಿದರು.

Advertisement

ಕಾರ್ಯಾಗಾರದಲ್ಲಿ 40 ವಿದ್ಯಾ ರ್ಥಿಗಳು ಭಾಗವಹಿಸಿ ಚಿತ್ರಕಲೆ, ಕವನ ಗಳನ್ನು ರಚಿಸಿದರು. ಸಹ ಸಂಚಾ ಲಕಿಯರಾದ ರಕ್ಷಿತಾ ಆರ್‌.ಬಿ., ದೀಪಿಕಾ ಸನಿಲ್‌, ವಿದ್ಯಾರ್ಥಿ ಸಂಯೋಜಕಿ ಪ್ರಿಯ ಲತಾ ಎಂ. ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ಸಂಚಾಲಕಿ ವಾರಿಜಾ ಎಂ. ಸ್ವಾಗತಿಸಿ, ವಿದ್ಯಾರ್ಥಿ ಸಹ ಸಂಯೋ ಜಕಿ ರಕ್ಷಿತಾ ಬಿ. ಆರ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next