Advertisement
ನಗರದ ಪೊಲೀಸ್ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ನಗರ ಪೊಲೀಸ್ ಆಯುಕ್ತಾಲಯದ ಪ್ರಥಮ ಪೊಲೀಸ್ ಕ್ರೀಡಾಕೂಟವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸರು ಸದಾ ಒತ್ತಡದ ನಡುವೆಯೇ ಕೆಲಸ ಮಾಡುವುದು ಅನಿವಾರ್ಯ. ಇದರ ನಡುವೆಯೂ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಪೊಲೀಸರು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಇದು ಕೊರೊನಾದಿಂದ ರಕ್ಷಣೆ ಸಾಧ್ಯವಾಗಲಿದೆ. ಈಗಾಗಲೇ ಪ್ರಥಮ ಲಸಿಕೆ ಪಡೆದುಕೊಂಡವರಿಗೆ 2ನೇ ಹಂತದ ಲಸಿಕೆ ಕೊಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೆಲ ಸಿಬ್ಬಂದಿ ಅಶಿಸ್ತು ಕಂಡುಬರುತ್ತಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗುತ್ತಿರುವುದರಿಂದ ಕರ್ತವ್ಯಕ್ಕೆ ಪೆಟ್ಟು ಬೀಳುತ್ತದೆ. ಅದನ್ನು ನಿಯಂತ್ರಿಸಿಕೊಂಡು ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ಆಯುಕ್ತಾಲಯದ ಪ್ರಥಮ ಕ್ರೀಡಾಕೂಟವಾಗಿದ್ದರಿಂದ ಪೊಲೀಸರಿಗೆ ಹೊಸ ಗುರುತು ಸಿಗಲಿದೆ. ಆಟೋಟಗಳ ಜತೆಗೆ ದೈಹಿಕ ಶ್ರಮ ಮಾಡುವ ವ್ಯಾಯಾಮ, ಯೋಗ ರೂಢಿಸಿಕೊಳ್ಳಬೇಕು. ಆಡಳಿತಾತ್ಮಕವಾಗಿ ಅಗತ್ಯವಿರುವ ಎಲ್ಲ ಕೆಲಸಗಳನ್ನು ಸರ್ಕಾರ
ಮಾಡಿಕೊಡುತ್ತಿದೆ. ಹೊಸ ವಾಹನ, ಕಟ್ಟಡ ಸೇರಿ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸವಾಗುತ್ತಿದೆ ಎಂದರು.
Related Articles
Advertisement
ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಹೊಸ ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರೆಲ್ಲರೂ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಹೊಸ ಪೇದೆಗಳು ಕರ್ತವ್ಯಕ್ಕೆ ಹಾಜರಾದ ಬಳಿಕ ಕೆಲಸದ ಒತ್ತಡ ಕಡಿಮೆಯಾಗಲಿದೆ.ಎನ್.ಸತೀಶಕುಮಾರ, ಪೊಲೀಸ್ ಆಯುಕ್ತ