Advertisement

ಎಪಿಎಂಸಿಯಲ್ಲಿ ಎತ್ತುಗಳ ಸಂತೆ ಆರಂಭಿಸಿ

02:09 PM Aug 30, 2018 | |

ಹರಪನಹಳ್ಳಿ: ಎತ್ತುಗಳ ಸಂತೆ ಜಿಲ್ಲಾ ಕೇಂದ್ರ ದಾವಣಗೆರೆ ಹೊರತುಪಡಿಸಿದರೆ ಯಾವ ತಾಲೂಕು ಕೇಂದ್ರದಲ್ಲಿಯೂ ಇಲ್ಲ. ಹಾಗಾಗಿ ಪಟ್ಟಣದಲ್ಲಿ ಎತ್ತುಗಳ ಸಂತೆ ಆರಂಭಿಸುವಂತೆ ಜಿ.ಪಂ ಸದಸ್ಯ ಎಚ್‌.ಬಿ. ಪರಶುರಾಮಪ್ಪ ಎಪಿಎಂಸಿ ಆಡಳಿತ ಮಂಡಳಿಗೆ ಸಲಹೆ ನೀಡಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ 2017-18ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ಸಮಿತಿ ಆಡಳಿತ ಕಚೇರಿಗೆ 1ನೇ ಮಹಡಿ ನಿರ್ಮಾಣ ಕಾಮಗಾರಿಗೆ ಹಾಗೂ 2015-16ನೇ ಸಾಲಿನ ಆರ್‌ಕೆವಿವೈ ಯೋಜನೆಯಲ್ಲಿ ನಿರ್ಮಿಸಲಾದ ಕುರಿ ಮತ್ತು ಮೇಕೆ ಮಾರುಕಟ್ಟೆ ಉದ್ಘಾಟನೆ ನೆರವೇರಿಸಿ ಅವರು
ಮಾತನಾಡಿದರು.

ಪಟ್ಟಣದಲ್ಲಿ ಕುರಿ ಸಂತೆ ಇರಲಿಲ್ಲ, ಹರಿಹರ, ಹಗರಿಬೊಮ್ಮನಹಳ್ಳಿಗೆ ಹೋದರೆ ಹೆದರಿಸಿ ವ್ಯವಹಾರದಲ್ಲಿ ಅನ್ಯಾಯ ಮಾಡುತ್ತಿದ್ದರು. ಕುರಿ ಮಾರಾಟಗಾರರ ಸಂಘ ರಚಿಸಿಕೊಂಡು ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವಧಿಯಲ್ಲಿ ಪುರಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದಾಗ ಹಿಂದಿನ ಶಾಸಕ ಪರಮೇಶ್ವರನಾಯ್ಕ ಸಹಕಾರದಿಂದ ಎಪಿಎಂಸಿ
ಆವರಣದಲ್ಲಿ ಪ್ರತಿ ಸೋಮವಾರ ಕುರಿ ಸಂತೆ ನಡೆಸುವಂತೆ ಅನುಮತಿ ನೀಡಲಾಗಿತ್ತು. ನಂತರ ಎಂ.ಪಿ.ರವೀಂದ್ರ ಅವರು 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕುರಿ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಎಪಿಎಂಸಿಯಲ್ಲಿನ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
 
ಕಾಂಗ್ರೆಸ್‌ ಹಿರಿಯ ಮುಖಂಡ ಟಿ.ಎಚ್‌.ಎಂ. ವಿರುಪಾಕ್ಷಯ್ಯ ಮಾತನಾಡಿ, ಎಂ.ಪಿ. ಪ್ರಕಾಶ್‌ ಅವರು ಹರಪನಹಳ್ಳಿಗೆ ಮಾರುಕಟ್ಟೆ ಮಂಜೂರು ಮಾಡಿದ್ದರು. ನಂತರ ಎಂ.ಪಿ.ರವೀಂದ್ರ ಅವರು ಎಪಿಎಂಸಿಯಲ್ಲಿ 20 ಸಾವಿರ ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಶೇಖರಣೆ ಗೋದಾಮು, ಪ್ರಾಂಗಣದಲ್ಲಿ ಕಾಂಕ್ರಿಟ್‌ ರಸ್ತೆ, ಬಾಡಿಗೆ ಮಳಿಗೆಗಳು, ಕಾಂಪೌಂಡ್‌ ವಾಲ್‌, ಕುರಿ ಸಂತೆ ಸೇರಿದಂತೆ ಅಭಿವೃದ್ಧಿ ಮಾಡಿದರು ಎಂದು ಸ್ಮರಿಸಿದರು. ನಿರ್ದೇಶಕ ಬಿ.ಎನ್‌. ಉಮೇಶ್‌ ಪ್ರಸ್ತಾವಿಕ ಮಾತನಾಡಿದರು. ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಎಪಿಎಂಸಿ ಅಧ್ಯಕ್ಷ ಡಿ.ಜಂಬಣ್ಣ, ಉಪಾಧ್ಯಕ್ಷ ಬೆನಕಶೆಟ್ಟಿ ಅಜ್ಜಪ್ಪ, ನಿರ್ದೇಶಕರಾದ ಪಿ.ಸುರೇಶ್‌, ಎಚ್‌.ಅಶೋಕಗೌಡ, ಎಚ್‌.ಭೀರಪ್ಪ, ಬಿ.ಆರ್‌. ನಳಿನಿ ರಾಮನಗೌಡ, ಎಂ.ಎ.ಅನ್ನಪೂರ್ಣಮ್ಮ, ಕೆ.ಬಸವರಾಜರೆಡ್ಡಿ, ತಾವರ್ಯನಾಯ್ಕ, ಬಿ. ಚಂದ್ರಶೇಖರ್‌, ಎಂ. ಗುರುನಾಥ್‌, ಬಿ.ರಾಮಪ್ಪ, ಪಿ. ಮಂಜುಳಾದೇವಿ, ಕಾರ್ಯದರ್ಶಿ ಕೆ.ಶಿಲ್ಪಶ್ರೀ, ತಾ.ಪಂ ಸದಸ್ಯ ನಾಗರಾಜ್‌, ಹಿರಿಯ ವರ್ತಕ ಧನರಾಜ್‌, ಎಇಇ ಎಂ.ಬಿ. ರವಿ, ಮುಖಂಡರಾದ ಅಬ್ದುಲ್‌ ರಹಿಮಾನಸಾಬ್‌, ಗೊಂಗಡಿ ನಾಗರಾಜ್‌, ಬೆನ್ನೂರು ಶಶಿಧರ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next