Advertisement

“ಗೆಟ್‌ಸೆಟ್‌ ಗೋ’ಆನ್‌ಲೈನ್‌ ಕೋರ್ಸ್‌ಗೆ ಇಂದು ಚಾಲನೆ

10:55 AM Apr 20, 2020 | mahesh |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಹಾಗೂ ರಾಷ್ಟ್ರೀಯ ಟೆಸ್ಟಿಂಗ್‌ ಏಜೆನ್ಸಿ ನಡೆಸುವ ನೀಟ್‌ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ಅಥವಾ ತತ್ಸಮಾನ (12ನೇ ತರಗತಿಯ) ವಿದ್ಯಾರ್ಥಿಗಳು ವಿಶೇಷ ತರಗತಿ ಹಾಗೂ ಕೋಚಿಂಗ್‌ ಕ್ಲಾಸ್‌ ಆನ್‌ಲೈನ್‌ ವೇದಿಕೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

Advertisement

ಸಿಎಂ ಯಡಿಯೂರಪ್ಪ ಹಾಗೂ ಸಚಿವ ಡಾ.ಸಿ.ಎನ್‌.ಅಶ್ವತ್ಥ  ನಾರಾಯಣ ಅವರು “ಗೆಟ್‌ಸೆಟ್‌ಗೋ’ ಆನ್‌ಲೈನ್‌ ಕೋರ್ಸ್‌ಗೆ ಏ.20ರಂದು ಚಾಲನೆ ನೀಡಲಿದ್ದಾರೆ. ಸಿಇಟಿ – 2020 ಪರೀಕ್ಷೆಗೆ ಹೆಸರು ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಆನ್‌ ಲೈನ್‌ ಕೋರ್ಸ್‌ ಉಚಿತವಾಗಿ ಲಭ್ಯವಾಗಲಿದೆ. ಕಳೆದೆರಡು ದಶಕಗಳಿಂದೀಚೆಗೆ ಆನ್‌ಲೈನ್‌ ಶಿಕ್ಷಣ ವಲ ಯದಲ್ಲಿ ಮುಂಚೂಣಿಯಲ್ಲಿರುವ ಸಿಂಚು ಇನ್ಫೋಟೆಕ್‌ ಮತ್ತು ದೀಕ್ಷಾ ಆನ್‌ಲೈನ್‌, ಪರೀಕ್ಷೆಗೆ ಪೂರಕವಾದ ಎಲ್ಲ ಕಲಿಕಾ ವಿಷಯವನ್ನೊಳಗೊಂಡಿರುವ ವೆಬ್‌ ಪೋರ್ಟಲ್‌ ಮತ್ತು ಆ್ಯಂಡ್ರಾಯ್ಡ ಆ್ಯಪ್‌ ಅಭಿವೃದಿಟಛಿ ಪಡಿಸಿವೆ. ಈ ಎರಡು ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಲಭ್ಯವಾಲಿದೆ getcetgo.in ವೆಬ್‌ ಪೋರ್ಟಲ್‌,ಗೂಗಲ್‌ ಪ್ಲೇಸ್ಟೋರ್ ಆ್ಯಂಡ್ರಾಯ್ಡ ಆ್ಯಪ್‌ “”GetCETGo’ (3-4 ದಿನ ಗಳಲ್ಲಿ ಆ್ಯಪ್‌ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ) ಪುನಾರರ್ವತನೆಯ ವಿಡಿಯೋಗಳು GetCET-Go ಯೂಟ್ಯೂಬ್‌ ಚಾನಲ್‌ನಲ್ಲಿ ಲಭ್ಯವಿದೆ ಎಂದು ಉನ್ನತ ಶಿಕ್ಷಣ ಮೂಲಗಳು ತಿಳಿಸಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next