Advertisement

ಸವಿತಾ ಸಮುದಾಯ ರಾಜಕೀಯ ಸ್ಥಾನಮಾನ ಪಡೆಯಲಿ

07:28 AM Feb 13, 2019 | Team Udayavani |

ಮೈಸೂರು: ಸಮಾಜದಲ್ಲಿ ಹರಿದು ಹಂಚಿ ಹೋಗಿದ್ದ ಮನಸ್ಸುಗಳನ್ನು ಜೋಡಿಸಿದ ದಾರ್ಶನಿಕರು, ಸಂತರು, ಮಹಾತ್ಮರ ಜಯಂತಿಗಳನ್ನು ಜಾತೀಯ ಜಯಂತಿಗಳಾಗಿ ಆಚರಿಸಲಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಮಂಗಳವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಅವರು ಮಾತನಾಡಿದರು. 

ಮಾನವೀಯ ಮೌಲ್ಯಗಳನ್ನು ಬಿತ್ತಿದ ಸಂತರು, ಮಹಾತ್ಮರ ಜಯಂತಿಗಳು ಮಾನವೀಯ ಜಯಂತಿಗಳಾಗಿ ಆಚರಿಸುವಂತಾಗಬೇಕು. ಇಂಥವರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಿದರೆ ಭವಿಷ್ಯದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸವಿತಾ ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಬೇಕು. ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ರಾಜಕೀಯವಾಗಿಯೂ ಮುಂದೆ ಬರಬೇಕು. ಕ್ಷೌರಿಕನ ಮುಂದೆ ರಾಜ ಮಹಾರಾಜರಿಂದ ಹಿಡಿದು ಪ್ರತಿಯೊಬ್ಬರು ತಲೆ ತಗ್ಗಿಸಲೇಬೇಕು. ಹೀಗಾಗಿ ಕ್ಷೌರಿಕನ ಮಗ ಕೂಡ ದೊರೆಯಾಗುವಂತಾಗಬೇಕು. ಕ್ಷೌರಿಕ ಸಮಾಜದವರು ನುಡಿಸುವ ನಾದಸ್ವರ, ಡೋಲಿನ ಶಬ್ಧ ದೇವರಿಗೆ ಪ್ರಚೋದನೆ ಕೊಡುತ್ತದೆ ಎಂದರು.

ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸಮಾರಂಭವನ್ನು ಉದ್ಘಾಟಿಸಿದರು. ಭರತ್‌ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ, ಸವಿತಾ ಸಮಾಜದ ಮುಖಂಡರಾದ ಎನ್‌.ಆರ್‌.ನಾಗೇಶ್‌, ಹರೀಶ್‌, ಮಂಜುನಾಥ್‌, ರಾಮಪ್ರಕಾಶ್‌, ರಾಜಣ್ಣ, ಬಾಲು, ಮುರುಳಿ, ಮಹೇಶ್‌, ಹೂಟಗಳ್ಳಿ ಮೂರ್ತಿ, ರಾಜಮ್ಮ, ರಾಮು, ಮಂಜುನಾಥ್‌, ರಾಜೇಶ್‌ ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು. 

Advertisement

ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸವಿತಾ ಮಹರ್ಷಿಯ ಭಾವಚಿತ್ರ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next