ತಾಲೂಕಿನ ಮಾಗುಂಡಿ ಗ್ರಾಮದ ಅನಿಲ್, ಶ್ರವಣ್ ಕುಮಾರ್, ಅರುಣ್, ಆನಂದ, ಅರುಣ್, ಸುನೀಲ್ ಎಂಬ ಯುವಕರ ತಂಡವೊಂದು ಪಿಕ್‌ನಿಕ್‌ಗೆ ಭದ್ರಾ ಹಿನ್ನೀರಿನ ತಡಸ ಸೇತುವೆ ಬಳಿಗೆ ಬಂದಿತ್ತು. ಈ ಸಂದರ್ಭದಲ್ಲಿ ಸೆಲ್ಫಿಗಾಗಿ ಚಿಕ್ಕದೋಣಿಯಲ್ಲಿ ಅನಿಲ್ (22) ಎಂಬ ಯುವಕ ಪಶ್ಚಿಮ ದಡದಿಂದ ಪೂರ್ವದಡದ ಅರಣ್ಯ ಪ್ರದೇಶವಿರುವ ಹಿನ್ನೀರಿನ ಹೋಗಿದ್ದ. ಗಾಳಿ ಬೀಸಿದ್ದರಿಂದ ದೋಣಿ ಮುಂದೆ ಸಾಗಿ ಅರಣ್ಯ ಪ್ರದೇಶದ ಕೊನೆಯ ಭಾಗಕ್ಕೆ ಹೋಗಿ ನಿಂತಿತು.
Advertisement
ಸ್ನೇಹಿತರು ದೋಣಿ ನಾಪತ್ತೆಯಾಗಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಧಾವಿಸಿ, ಶೋಧ ಕಾರ್ಯ ನಡೆಸಿದರು. ಭದ್ರಾ ಹಿನ್ನೀರಿನ ಕೊನೆಯ ಭಾಗದಲ್ಲಿ ನಿಂತಿದ್ದ ದೋಣಿಯನ್ನು ಕಂಡು ಅನಿಲ್‌ನನ್ನು ರಕ್ಷಿಸಿ, ಪೋಷಕರಿಗೆ ಹಸ್ತಾಂತರಿಸಿದರು.