ತಿಪಟೂರು: ರಾಜ್ಯಾದ್ಯಂತ ಅತಿವೃಷ್ಟಿ ಮತ್ತು ಇಡಿಯಿಂದ ನನಗೂ ನೋಟಿಸ್ ಬಂದಿದೆ ಅನಾವೃಷ್ಟಿಯಿಂದ ಜನರು ತೀವ್ರ ಸಂಕಷ್ಟದಲ್ಲಿದ್ದರೂ, ರಾಜ್ಯ ಸರ್ಕಾರ ಅಧಿಕಾರ ನಡೆಸುವಲ್ಲಿ ವಿಫಲವಾಗಿದ್ದು, ಮಧ್ಯಂತರ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಿರಬೇಕು ಎಂದು ಮಾಜಿ ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ಕೆ.ಆರ್. ಬಡಾವಣೆಯಲ್ಲಿರುವ ಸ್ವಗೃಹದಲ್ಲಿ ತಿಪಟೂರು ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರ ಬಗ್ಗೆ ಕಾಳಜಿ ಹೊಂದಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್. ಸ್ವಾತಂತ್ರದ ಪೂರ್ವದಿಂದಲೂ ಪ್ರತಿಯೊಬ್ಬರು ಆರ್ಥಿಕವಾಗಿ ಸದೃಢತೆ ಸಾಧಿಸಬೇಕೆಂಬ ಆಶಯ ಹೊಂದಿದೆ. ಆದ್ದರಿಂದ ಜನಪರ ಯೋಜನೆ ಜಾರಿಗೆ ತಂದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಉಳಿದಿದೆ. ಅನರ್ಹ ಶಾಸಕರ ಚುನಾವಣೆ ಜೊತೆಯಲ್ಲಿ ಸಾರ್ವತ್ರಿಕ ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಆದ್ದರಿಂದ ಎಲ್ಲಾ ವರ್ಗಗಳ ಜನರು ಒಂದುಗೂಡಿ ಚುನಾವಣೆ ಎದುರಿಸ ಬೇಕಿದೆ ಎಂದು ಹೇಳಿದರು. ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಎಂ. ಸೈಫುಲ್ಲಾ ಮಾತನಾಡಿ, ಪಕ್ಷದ, ಸಮುದಾಯದ ಹಿರಿಯರ ಮಾರ್ಗದರ್ಶನ ತೆಗೆದುಕೊಂಡು ಪಕ್ಷದ ಬಲವರ್ಧನೆಗೆ ಬೂತ್ ಮಟ್ಟದಲ್ಲಿ ಶ್ರಮಿಸಲಾಗುವುದು. ಹಿರಿಯ ಮುಖಂಡರನ್ನು ಒಗ್ಗೂಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುತುವಲ್ಲಿ ಷಉಲ್ಲಾ ಷರೀಫ್ ಮಾತನಾಡಿ, ಮಾಜಿ ಶಾಸಕ ಕೆ.ಷಡಕ್ಷರಿ ಸೋಲಿಗೆ ಕಾಂಗ್ರೆಸ್‌ನ ಕೆಲವರ ಕುತಂತ್ರವೇ ಕಾರಣವಾಗಿದ್ದು, ಅದನ್ನೆಲ್ಲಾ ಬಿಟ್ಟು ಪಕ್ಷದ ಏಳಿಗೆ, ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಂತರಾಜು ಮಾತನಾಡಿ, ಸಂಘಟನೆ ಮಾಡುವ ಕಾರ್ಯ ಸುಲಭದ ಮಾತಲ್ಲ. ಪಕ್ಷದ ನಿಯಮ, ಹಿರಿಯರ ವಿಚಾರಗಳಿಗೆ ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿದೆ. ಪಕ್ಷಕ್ಕೆ ನೂತನ ಕಾರ್ಯಕರ್ತರನ್ನು ಬೂತ್ ಮಟ್ಟದಲ್ಲಿ ಸಂಘಟಿಸಬೇಕಿದೆ ಎಂದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ.ಎನ್. ಪ್ರಕಾಶ್, ತಾಪಂ ಅಧ್ಯಕ್ಷ ಜಿ.ಎಸ್. ಶಿವಸ್ವಾಮಿ, ಉಪಾಧ್ಯಕ್ಷ ಎನ್.ಶಂಕರ್, ಸದಸ್ಯರಾದ ಎಂ.ಡಿ.ರವಿಕುಮಾರ್, ಎನ್.ಎಂ. ಸುರೇಶ್, ಸಿದ್ದಾಪುರ ಸುರೇಶ್, ಎಪಿಎಂಸಿ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಮಧುಸೂದನ್, ನಗರಸಭಾ ಸದಸ್ಯರಾದ ಯೋಗೀಶ್, ವಿನುತಾ, ನೂರ್ ಬಾನು, ಮುಖಂಡರಾದ ಸಮಿ ಉಲ್ಲಾ ಖಾನ್, ಅಬ್ದುಲ್ ಖಾದರ್, ಪ್ಯಾರೇಜಾನ್, ಅಣ್ಣಯ್ಯ, ಇಮ್ರಾನ್ ಮತ್ತಿತರರಿದ್ದರು.