Advertisement
ನಗರದ ಜಿಪಂನ ಕಾವೇರಿ ಸಭಾಂಗಣದಲ್ಲಿ ಕೋವಿಡ್-19 ಕುರಿತು ನಡೆದ ಪ್ರಗತಿ ಪರಿಶೀಲನಾಸಭೆ ಹಾಗೂ ಕೋವಿಡ್-19, 3ನೇ ಅಲೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ 4500ಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಿಸಬೇಕು. ಆದ್ಯತಾವಲಯದವರಿಗೆ ಹಾಗೂ 18 ವರ್ಷ ಹಾಗೂ 45ಮೇಲ್ಪಟ್ಟವರಿಗೆ ಕೈಗೊಂಡಿರುವ ಲಸಿಕಾಕರಣವನ್ನುಹೆಚ್ಚು ಮಾಡಬೇಕು. ತಾಲೂಕುವಾರು ಪಿಎಚ್‌ಸಿ ಹಾಗೂ ಸಮುದಾಯ ಆರೋಗ್ಯ ಸಿಬ್ಬಂದಿಗಳಿಗೆ 3ನೇಅಲೆಯ ನಿರ್ವಹಣೆ ಬಗ್ಗೆ ತರಬೇತಿ ನೀಡಬೇಕು ಎಂದು ಸೂಚಿಸಿದರು.
Related Articles
Advertisement
3ನೇ ಅಲೆ ಅಪೌಷ್ಟಿಕತೆ ಮಕ್ಕಳಿಗೆ ಹೆಚ್ಚು ದುಷ್ಪರಿಣಾಮ : ಜಿಲ್ಲೆಯಲ್ಲಿ ಹೆಚ್ಚು ಅಪೌಷ್ಟಿಕತೆಯಿಂದ ಇರುವ ಮಕ್ಕಳಿಗೆ ಹೆಚ್ಚು ಭಾದಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್.ಧನಂಜಯ ಹೇಳಿದರು. ಸಭೆಯಲ್ಲಿ ಮಾತನಾಡಿದ ಅವರು, 3ನೇ ಅಲೆ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಮಿಮ್ಸ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಬೆಡ್, ಐಸಿಯು, ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಆದರೆ ಇದು ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ತೊಂದರೆಯಾಗಲಿದೆ ಎಂಬುದರ ಬಗ್ಗೆ ವರದಿ ತಯಾರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ4,175 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅವರಿಗೆ ಅಗತ್ಯ ನ್ಯೂಟ್ರಿಷಿಯನ್, ಪೌಷ್ಟಿಕಾಂಶ ಆಹಾರ ನೀಡಲುಕ್ರಮ ವಹಿಸುವಂತೆ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ,ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪ್ರೊಟೀನ್, ನ್ಯೂಟ್ರಿಷಿಯನ್ ಇರುವಕಿಟ್ ವಿತರಿಸಲಾಗುತ್ತಿದೆ. ಅಗತ್ಯ ಪೌಷ್ಟಿಕಾಂಶವಿರುವ ಆಹಾರ ವಿತರಣೆಗೆಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳ ಅಮಾನತಿಗೆ ಆಗ್ರಹ:
ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲಿ ಮಾಜಿ ಶಾಸಕರು ಅಧಿಕಾರಿಗಳ ಸಭೆ ನಡೆಸುವುದು ಹಾಗೂ ಕಾಮಗಾರಿಗಳ ವೀಕ್ಷಣೆ ಮಾಡುತ್ತಿದ್ದಾರೆ. ಹಾಗಾದರೆ ಶಾಸಕರಾಗಿ ನಾವು ಇರುವುದು ಏಕೆ?. ಅದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಅಮಾನತು ಮಾಡಿ ಕ್ರಮ ವಹಿಸಬೇಕು ಎಂದು ಪಟ್ಟು ಹಿಡಿದರು. ಶಾಸಕ ಅನ್ನದಾನಿ ಮಾತನಾಡಿ, ಮಳವಳ್ಳಿ ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ಮಾಜಿ ಶಾಸಕರುಕಾಮಗಾರಿ ವೀಕ್ಷಣೆ ಮಾಡುತ್ತಾರೆ. ಸರ್ಕಾರಿ ಶಿಷ್ಟಾಚಾರ ಪ್ರಕಾರ ಮಾಡುವಂತಿಲ್ಲ. ಕೆಲವು ಕಾಮಗಾರಿಗಳಿಗೆ ನನ್ನನ್ನೇ ಬರದಂತೆ ಅಧಿಕಾರಿಗಳು ತಡೆಯುತ್ತಾರೆ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಶಾಸಕ ಕೆ.ಸುರೇಶ್‌ಗೌಡ, ನಾಗಮಂಗಲದಲ್ಲೂ ಮಾಜಿ ಶಾಸಕರು ಅಧಿಕಾರಿಗಳ ಸಭೆ ನಡೆಸುತ್ತಾರೆ. ಸರ್ಕಾರಿ ಅಧಿಕಾರಿಗಳು ಇರುವುದು ಏಕೆ?. ಹಗಲು-ರಾತ್ರಿಕೊರೊನಾ ವಾರಿಯರ್ಸ್ ಗಳಂತೆ ದುಡಿಯುತ್ತಿದ್ದೇವೆ. ಆದರೆ ಯಾವಾಗಲೋ ಬರುವ ಮಾಜಿ ಶಾಸಕರಿಗೆ ಅಧಿಕಾರಿಗಳು ಮನ್ನಣೆ ನೀಡುವುದಾದ್ದರೆ, ನಾವು ಯಾರು? ಎಂದು ಪ್ರಶ್ನಿಸಿದ ಅವರು,ಕೂಡಲೇ ಅಧಿಕಾರಿಗಳ ವಿರುದ್ಧಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ಇನ್ನೂ ಮುಂದೆ ಶಾಸಕರ ನ್ನು ಸರ್ಕಾರಿಶಿಷಾಚಾರದಂತೆಕಾರ್ಯಕ್ರಮಗಳ ಆಯೋಜನೆ ಮಾಡಬೇಕು. ರಾಜಕೀಯ ಮುಖಂಡ ರು, ನಾಯಕರು ನಡೆಸುವ ಆಹಾರ, ಆರೋಗ್ಯ ಕಿಟ್‌ಗಳ ವಿತರಣೆಗೆ ಅವಕಾಶ ನೀಡಬಾರದು. ಹೆಚ್ಚು ಜನ ಸೇರುವುದರಿಂದ ಸೋಂಕು ಹರಡು ತ್ತೆ.ಕೊರೊನಾ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ವಹಿಸಬೇಕು ಎಂದು ಸೂಚಿಸಿದರು.