Advertisement

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ

12:18 PM Oct 09, 2017 | Team Udayavani |

ಸಿಂಧನೂರು: ವಿದ್ಯಾರ್ಥಿಗಳು ಕೇವಲ ಸಾಂಪ್ರಾದಾಯಿಕ ಶಿಕ್ಷಣಕ್ಕೆ ತೃಪ್ತಿಪಟ್ಟುಕೊಳ್ಳದೆ, ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸತೀಶ ಪಾಶಿ ಸಲಹೆ ನೀಡಿದರು.

Advertisement

ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ತಾಲೂಕು ಘಟಕದಿಂದ ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಸ್ಪೃಶ್ಯರ ನೋವುಗಳಿಗೆ ಸ್ಪಂದಿಸಿದ ಬುದ್ಧ, ಬಸವಣ್ಣ, ಅಂಬೇಡ್ಕರ್‌ ಚರಿತ್ರೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಹಿಳೆಯರು ದೇವಸ್ಥಾನಗಳಲ್ಲಿ ಸರದಿ ನಿಲ್ಲುವ ಬದಲಾಗಿ
ಗ್ರಂಥಾಲಯಕ್ಕೆ ಹೋಗಲು ಸರದಿ ನಿಂತಾಗ ಈ ದೇಶದ ಪ್ರಗತಿ ಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ ಮಾತನ್ನು ಸತೀಶ ಉಲ್ಲೇಖೀಸಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಯಾವುದೇ ಜನಾಂಗ ಪ್ರಗತಿ ಸಾಧಿಸಬೇಕಾದರೆ ಜನಾಂಗದ ನಾಯಕತ್ವ ವಹಿಸಿದ ವ್ಯಕ್ತಿಗಳಿಗೆ ಪ್ರಾಮಾಣಿಕತೆ ಮತ್ತು ತ್ಯಾಗ ಮತ್ತು ದೂರದೃಷ್ಟಿ ಮನೋಭಾವ ಇರಬೇಕು ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸ್ವಾಭಿಮಾನದಿಂದ ಸಂಘಟಿತ ರಾದರೆ ಅನಿಷ್ಠಗಳನ್ನು ನಿವಾರಣೆ ಮಾಡಬಹುದು ಎಂದರು.

ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಬಡವನಾಗಿ ಹುಟ್ಟುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ಸಾಧನೆಯ ಮುಖಾಂತರ ಜೀವನ ಬದಲಾಯಿಸಿಕೊಳ್ಳಲು ಸಾಧ್ಯ ಇದೆ ಎಂದರು.

Advertisement

ಸನ್ಮಾನ: ಮೈಸೂರಿನ ದಿ. ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಸವರಾಜ ಗುಡದೂರು, ಡಾ| ನಾಗರಾಜ, ನೂತನ ಪಿಎಸ್‌ಐ ಕರುಣಾ ರಡ್ಡೆಪ್ಪ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಈಶ್ವರಿ ಹಲಗಿ ಪ್ರಾಸ್ತಾವಿಕ ಮಾತನಾಡಿದರು. ಮಾದಿಗರ ನೌಕರರ ಸಂಘದ ತಾಲೂಕು ಅಧ್ಯಕ್ಷ ಪರಸಪ್ಪ ಪಗಡದಿನ್ನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಾಬು ಜಗಜೀವನ್‌ರಾಮ್‌ ಚರ್ಮ ಕೈಗಾರಿಕೆ ನಿಗಮದ ನಿರ್ದೇಶಕ ಹನುಮಂತಪ್ಪ ಮುದ್ದಾಪುರ, ಜಿಪಂ ಸದಸ್ಯ ದುರುಗಪ್ಪ ಗುಡಗಲದಿನ್ನಿ, ನಗರಸಭೆ ಸದಸ್ಯರಾದ ನಾಗಪ್ಪ ಗಿರಿಜಾಲಿ, ಲಕ್ಷ್ಮೀ ರಮೇಶ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಯಣ್ಣ, ತಾಪಂ ಸದಸ್ಯರಾದ ರಾಮಮ್ಮ ರಾಮಣ್ಣ, ಹುಚ್ಚಮ್ಮ ಜಾನಪ್ಪ, ಲಕ್ಷ್ಮೀಬಾಯಿ ಶ್ರೀನಿವಾಸ, ಶೇಖರಪ್ಪ ಕುನ್ನಟಗಿ, ಪತ್ರಾಂಕಿತ ಉಪ ಖಜನಾಧಿಕಾರಿ ಎ.ರಾಮುಲು, ತುರ್ವಿಹಾಳ ಪಪಂ ಉಪಾಧ್ಯಕ್ಷೆ ಹುಲಿಗೆಮ್ಮ ಬಸವರಾಜ, ಬಳಗಾನೂರು ಪಪಂ ಉಪಾಧ್ಯಕ್ಷೆ ಗಂಗಮ್ಮ ಅಮರೇಶ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಅಮರೇಶ ಬಲ್ಲಿದವ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ದುರುಗಪ್ಪ ಹಸಮಕಲ್‌, ಭೂಮಾಪನ ಅಧಿಕಾರಿ ಶಾಂತಕುಮಾರ ಅಗಸಬಾಳ, ನೌಕರರ ಸಂಘದ ಗೌರವಾಧ್ಯಕ್ಷೆ ಕುಪ್ಪಮ್ಮ, ಉಪಾಧ್ಯಕ್ಷ ಲಿಂಗಪ್ಪ ರೌಡಕುಂದಾ, ಶ್ರೀನಿವಾಸ ಮರಡ್ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಿಂಗ ಖ್ಯಾದಗಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ರಾಮಣ್ಣ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹುಸೇನಪ್ಪ ಗೊರೇಬಾಳ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್‌ ಇದ್ದರು. ಶಿಕ್ಷಕ ದುರುಗಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next